Advertisement

ಕೊರೊನಾ ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಹಿಸಲ್ಲ

01:29 PM Jan 14, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ, ಸಾವಿನ ಪ್ರಕರಣಗಳುಹೆಚ್ಚಾಗದಂತೆ ಹಾಗೂ ಜಿಲ್ಲೆ ಸುರಕ್ಷಿತವಾಗಿರಲು ಯಾವುದೇ ರೀತಿಯಸಮಸ್ಯೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಅ ಧಿಕಾರಿಗಳಿಗೆ ಕಟ್ಟುನಿಟ್ಟಿನಸೂಚನೆ ನೀಡಿದರು.ಗುರುವಾರ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ದಾವಣಗೆರೆಯಲ್ಲಿ 285 ಸಕ್ರಿಯ ಪ್ರಕರಣಗಳಿವೆ. ಮುಂದಿನದಿನಗಳಲ್ಲಿ ಪ್ರಕರಣ ಹೆಚ್ಚಾಗದಂತೆ ಅಗತ್ಯವಾದ ಕ್ರಮಗಳನ್ನುತೆಗೆದುಕೊಳ್ಳಬೇಕು. ಲಸಿಕೆ, ಆಕ್ಸಿಜನ್‌ ಇತರೆ ಅಗತ್ಯಗಳ ಕೊರತೆಯಬಗ್ಗೆ ಮಾಹಿತಿ ನೀಡಿದಲ್ಲಿ ಸರ್ಕಾರದಿಂದ ಒದಗಿಸಲಾಗುವುದುಎಂದರು.ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಮೀನಾಕ್ಷಿ ಮಾತನಾಡಿ,ಜಿಲ್ಲೆಯಲ್ಲಿ 12.23 ಲಕ್ಷ ಜನರಿಗೆ ಮೊದಲನೇ ಡೋಸ್‌ ಗುರಿಯಲ್ಲಿ12,37,769 ಜನರಿಗೆ ಲಸಿಕೆ ನೀಡಲಾಗಿದೆ. ಶೇ. 101ರಷ್ಟು ಸಾಧನೆಆಗಿದೆ.

9,79,679 ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಶೇ.80ರಷ್ಟು ಜನರು ಎರಡನೇ ಡೋಸ್‌ ಪಡೆದುಕೊಂಡಿದ್ದು, 35 ಸಾವಿರಜನರು ಬಾಕಿ ಇದ್ದಾರೆ. 11,450 ಜನರಿಗೆ ಬೂಸ್ಟರ್‌ ಡೋಸ್‌ ಗುರಿಯಲ್ಲಿ3,750 ಜನರಿಗೆ ನೀಡಲಾಗಿದೆ. 15 ರಿಂದ 17 ವಯೋಮಾನದವರಿಗೆ84,693 ಗುರಿಯಲ್ಲಿ 51,763 ಜನರಿಗೆ ನೀಡಲಾಗಿದ್ದು, ಶೇ. 61ರಷ್ಟು ಸಾಧನೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜ. 1 ರಿಂದ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ಪ್ರಕ್ರಿಯೆಪ್ರಾರಂಭವಾಗಿದ್ದರೂ ಎಲ್ಲ ತಾಲೂಕುಗಳಲ್ಲಿ ತೀರಾ ಮಂದಗತಿಯಲ್ಲಿನಡೆಯುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.ಪ್ರಧಾನಮಂತ್ರಿಗಳು ಸಾಕಷ್ಟು ಆಸಕ್ತಿಯಿಂದ ಮುನ್ನೆಚ್ಚರಿಕಾಡೋಸ್‌ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಅಧಿ ಕಾರಿಗಳು ಪಡೆಯುವವೇತನಕ್ಕಾದರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದುಸಚಿವರು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next