ದಾವಣಗೆರೆ: ಕೇಂದ್ರ ಸರ್ಕಾ ರ ಉದ್ದೇಶಿತ ನೋಟರಿಗಳತಿದ್ದುಪಡಿ-2021 ಕೈಬಿಡಬೇಕು ಎಂದು ಒತ್ತಾಯಿಸಿ ಡಿ. 14 ರಂದುಜಿಲ್ಲೆಯಾದ್ಯಂತ ನೋಟರಿಗಳು ಕೆಲಸ-ಕಾರ್ಯ ಸ್ಥಗಿತಗೊಳಿಸುವ ಜೊತೆಗೆ ಹೋರಾಟ ಹಮ್ಮಿಕೊಳ್ಳಲಾ ಗಿದೆ ಎಂದು ಜಿಲ್ಲಾ ನೋಟರಿಗಳ ಸಂಘದಕಾರ್ಯದರ್ಶಿ ತ್ಯಾವಣಿಗೆ ಮಲ್ಲಿಕಾರ್ಜುನ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಮಂಗಳವಾರ ಬೆಳಗ್ಗೆ 11ಕ್ಕೆ ದಾವಣಗೆರೆ ಯಲ್ಲಿರುವ 20 ನೋಟರಿಗಳುಕೆಲಸ ಸ್ಥಗಿತಗೊಳಿಸಿ ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾಧಿಕಾರಿಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಸಲ್ಲಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಉದ್ದೇಶಿತ ನೋಟರಿಗಳ ತಿದ್ದುಪಡಿ-2021ರಲ್ಲಿ15 ವರ್ಷಗಳ ಕಾಲ ನೋಟರಿಯಾಗಿ ಕೆಲಸ ಮಾಡಿದವರಿಗೆನವೀಕರಣ ಮಾಡುವುದಿಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಿದೆ. ಒಂದೊಮ್ಮೆ ನೋಟರಿಯಾಗಿ ಕೆಲಸ ಮಾಡಲು ನವೀಕರಣಮಾಡದಿದ್ದಲ್ಲಿ ಸಾಕಷ್ಟು ಅನ್ಯಾಯ ಆಗುತ್ತದೆ. ಒಂದು ಕಡೆ ವಕೀಲಿಕೆಮುಂದುವರೆಸಲು ಆಗುವುದಿಲ್ಲ, ಮತ್ತೂಂದು ಕಡೆ ನೋಟರಿಯಾಗಿಮುಂದುವರೆಯುವಂತೆ ಇಲ್ಲ.
ನೋಟರಿ ಕೆಲಸವನ್ನೇ ನಂಬಿಕೊಂಡಿರುವವರ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ.ಹಾಗಾಗಿ ಕೇಂದ್ರ ಸರ್ಕಾರ ಉದ್ದೇಶಿತ ನೋಟರಿಗಳ ತಿದ್ದುಪಡಿ-2021ಕೈಬಿಡಬೇಕು. ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದುಒತ್ತಾಯಿಸಿದರು.ನೋಟರಿ ಕಾನೂನು-1952ರ ಅನ್ವಯ ನೋಟರಿಯಾಗಿಕೆಲಸ ಮಾಡಲು ಸಾಮಾನ್ಯ ವರ್ಗದವರು 10, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದವರು 7 ವರ್ಷಗಳ ವಕೀಲಿಕೆ ಮಾಡಿರಬೇಕು.
ಪ್ರತಿ 5 ವರ್ಷಕ್ಕೊಮ್ಮೆ ನವೀಕರಣ ಕೋರಿ ಜಿಲ್ಲಾ ನ್ಯಾಯಾಲಯದಮೂಲಕ ಅರ್ಜಿ ಸಲ್ಲಿಸಬೇಕು. ನವೀಕರಣದ ನಂತರ ನೋಟರಿಕೆಲಸ ಮುಂದುವರೆಸಬಹುದು. ಆದರೆ, ಕೇಂದ್ರ ಸರ್ಕಾರ ಉದ್ದೇಶಿತನೋಟರಿಗಳ ತಿದ್ದುಪಡಿ-2021ರ ಪ್ರಕಾರ ಮೂರು ಅವಧಿ ಅಂದರೆ15 ವರ್ಷ ನೋಟರಿಯಾಗಿ ಕೆಲಸ ಮಾಡಿದವರಿಗೆ ನವೀಕರಣ ಮಾಡುವುದಿಲ್ಲ ಎಂಬ ಅಂಶ ಇರುವುದು ನೋಟರಿಗಳಿಗೆ ಆಘಾತಉಂಟು ಮಾಡಿದೆ ಎಂದರು.
ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ11, ರಾಜ್ಯ ಸರ್ಕಾರದ 9 ನೋಟರಿಗಳು ಒಳಗೊಂಡಂತೆ ಜಿಲ್ಲೆಯಲ್ಲಿ50ಕ್ಕೂ ಹೆಚ್ಚು ವಕೀಲರು ನೋಟರಿಯಾಗಿ ಕೆಲಸ ಮಾಡುತ್ತಿದ್ದಾರೆ.ಉದ್ದೇಶಿತ ತಿದ್ದುಪಡಿಯಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ಕೆ. ಈಶ್ವರ್,ಉಪಾಧ್ಯಕ್ಷರಾದ ಬಿ.ಜಿ. ರೇವಣಸಿದ್ದಪ್ಪ, ಎಂ. ಪ್ರತಾಪ್‌ರುದ್ರ, ಖಜಾಂಚಿಸಾಯಿಶ್, ಕೆ.ಎಂ. ನೀಲಕಂಠಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.