Advertisement
ತಿಪ್ಪೇಶ ಕಳೆದ 15 ದಿನದಿಂದ ನಾಪತ್ತೆಯಾಗಿದ್ದನು. ಆ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ನಾಪತ್ತೆಯಾಗಿದ್ದ ದಿನ ತಿಪ್ಪೇಶ್ ತೆಗೆದುಕೊಂಡು ಹೋಗಿದ್ದ ಬೈಕ್ ಅಣಜಿ ಕೆರೆ ಏರಿಯ ಬದಿ ಪೊದೆಗಳ ಮಧ್ಯೆ ಪತ್ತೆಯಾಗಿದ್ದು, ತಿಪ್ಪೇಶ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದ್ದಾನೆ. ಅಪಘಾತವೋ ಅಥವಾ ಯಾರಾದರೂ ಏನಾದರೂ ಮಾಡಿರಬಹುದಾ ಎಂಬುದು ತನಿಖೆ ನಂತರವೇ ಗೊತ್ತಾಗಲಿದೆ. ಕುರಿಗಾಹಿಗಳು ಅಸ್ಥಿಪಂಜರ ನೋಡಿದ ನಂತರವೇ ತಿಪ್ಪೇಶ ಮೃತಪಟ್ಟಿರುವುದು ತಿಳಿದು ಬಂದಿದೆ.
ದಾವಣಗೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಕಿರಣಕುಮಾರ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬೈಕ್ ನಂಬರ್ ಪರಿಶೀಲಿಸಿದಾಗ ಅದು ಕಡ್ಲೇಬಾಳು ವಿಳಾಸ ತೋರಿಸಿದೆ. ಗ್ರಾಮಸ್ಥರಿಗೆ ವಿಚಾರಿಸಿದಾಗ, ಕಡ್ಲೆಬಾಳು ಗ್ರಾಮದ ನಾಪತ್ತೆಯಾಗಿದ್ದ ತಿಪ್ಪೇಶನ ವಿಚಾರ ಗೊತ್ತಾಗಿದೆ. ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು ಶವವನ್ನು ಗುರುತಿಸಿದ್ದಾರೆ. ಸದ್ಯಕ್ಕೆ ಕಡ್ಡೇಬಾಳು ಗ್ರಾಮದ ತಿಪ್ಪೇಶ ಸಾವಿನ ವಿಚಾರ ನಿಗೂಢವಾಗಿದೆ. ಇದು ಅಪಘಾತದಿಂದವಾದ ಸಾವೇ ಅಥವಾ ಯಾರಾದರೂ ಕೊಲೆ ಮಾಡಿ, ಇಲ್ಲಿ ಹಾಕಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಮಂಜುನಾಥ್, ವಿಜಯ್ ಕುಮಾರ್ ಎಂ. ಸಂತೋಷ್, ದಾವಣಗೆರೆ ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್. ಬಸವರಾಜ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.