Advertisement
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರೆತಿಲ್ಲ. ಜಗಳೂರು ತಾಲೂಕಲ್ಲಿ ಜನರಿಗೆ ಫ್ಲೋರೈಡ್‌ಯುಕ್ತ ನೀರೇ ಗತಿಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಮತ್ತು ಭತ್ತದ ಬೆಂಬಲ ಬೆಲೆಗಾಗಿ ರೈತರು ಪ್ರತಿವರ್ಷವೂ ಹೋರಾಟ ನಡೆಸುವುದು ತಪ್ಪಿಲ್ಲ. ಕಳೆದ 5 ವರ್ಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2014ರಲ್ಲಿ ಮೂರನೇ ಬಾರಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಕೇಂದ್ರ ವಿಮಾನಯಾನ ಸಹಾಯಕ ಸಚಿವ, ಅನಂತರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಯ ರಾಜ್ಯ ಸಚಿವರಾಗಿದ್ದರು. ಕಳೆದ 5 ವರ್ಷಗಳಲ್ಲಿ ಸ್ಮಾರ್ಟ್‌ಸಿಟಿ, ಅಮೃತ್ ಯೋಜನೆ, ರೈಲ್ವೆ ಜೋಡಿಮಾರ್ಗ ಸಹಿತ ಹತ್ತಾರು ಯೋಜನೆಗಳು ಕೇಂದ್ರದಿಂದ ಮಂಜೂರಾಗಿ ಕಾಮಗಾರಿಗಳು ನಡೆಯುತ್ತಿವೆ. ಅಲ್ಲದೆ ಹರಿಹರ ತಾಲೂಕಲ್ಲಿ 2ಜಿ ಎಥೆನಾಲ್ ಕಾರ್ಖಾನೆ ಮತ್ತು ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಲದ ಸಹಯೋಗದಲ್ಲಿ ರಸ ಗೊಬ್ಬರ ಕಾರ್ಖಾನೆ ಸ್ಥಾಪಿಸಲು ಸಿದ್ಧತೆ ನಡೆದಿದೆ. ಇವೆಲ್ಲವನ್ನೂ ಬಿಜೆಪಿ, ತನ್ನ ಚುನಾವಣ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
Related Articles
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದಾವಣಗೆರೆಯಲ್ಲಿ 26 ಕೋ. ರೂ.ವೆಚ್ಚದ ಗಾಜಿನ ಮನೆ, ಹೈಟೆಕ್ ಜಾನು ವಾರು ಮಾರುಕಟ್ಟೆ.. ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಮತ್ತು ಮೋದಿ ಸರಕಾರದ ವೈಫಲ್ಯಗಳನ್ನೇ ಕಾಂಗ್ರೆಸ್ ತನ್ನ ಪ್ರಚಾರದ ವಿಷಯಗಳನ್ನಾಗಿ ಬಳಸಿಕೊಳ್ಳುತ್ತಿದೆ.
Advertisement
ಕ್ಷೇತ್ರ ವ್ಯಾಪ್ತಿದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಪನಹಳ್ಳಿ, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸಹಿತ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ವರ್ಷ ಹರಪನಹಳ್ಳಿ ತಾಲೂಕು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೇ ಮುಂದುವರಿದಿದೆ. ಎನ್.ಆರ್.ನಟರಾಜ್