Advertisement
ಏ.23ರಂದು ಲೋಕಸಭೆಗೆ ರಾಜ್ಯದಲ್ಲಿ ನಡೆದ 2ನೇ ಹಂತದ ಮತದಾನದಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಒಟ್ಟು ಶೇ. 73.03 ಮತದಾರರು ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದು, ಇದು ಕಳೆದ ಬಾರಿಯ ಲೋಕಸಭಾ ಚುನಾವಣೆ ಮತದಾನಕ್ಕೆ ಹೋಲಿಸಿದರೆ .2% ಇಳಿಕೆಯಾಗಿರುವುದು ಕಂಡು ಬಂದಿದೆ.
Related Articles
Advertisement
ಈ ಬಾರಿ ಜಗಳೂರು- ಶೇ. 73.36, ಹರಪನಹಳ್ಳಿ-ಶೇ. 75.78, ಹರಿಹರ- ಶೇ. 74.41, ದಾವಣಗೆರೆ ಉತ್ತರ- ಶೇ. 65.71, ದಾವಣಗೆರೆ ದಕ್ಷಿಣ- ಶೇ. 65.93, ಮಾಯಕೊಂಡ- ಶೇ. 77.61, ಚನ್ನಗಿರಿ-ಶೇ. 73.73 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಶೇ. 80.01 ಮತದಾನ ಆಗಿದೆ. ಈ ಚುನಾವಣೆಯಲ್ಲೂ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಮತದಾನ ಆಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಈ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಒಳಗೊಂಡ, ಸುಶಿಕ್ಷಿತರು, ಪ್ರಜ್ಞಾವಂತರು, ವಿದ್ಯಾವಂತರು, ದಾವಣಗೆರೆ ಉತ್ತರ ಹಾಗೂ ದಕ್ಷಿಣ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಕಡಿಮೆ ಮತದಾನ ಆಗಿರುವುದು ವಿಪರ್ಯಾಸ ಎನಿಸಿದೆ. ದಾವಣಗೆರೆ ಉತ್ತರ- ಶೇ. 65.71 ಹಾಗೂ ದಕ್ಷಿಣ-ಶೇ| 65.93 ಮತ ಚಲಾವಣೆ ಆಗಿವೆ.
2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 13,07,583 ಮತದಾರರ ಪೈಕಿ 9,07,727 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಆ ಚುನಾವಣೆಯಲ್ಲಿ ಶೇ. 69.41ರಷ್ಟು ಮತದಾನ ಆಗಿತ್ತು.
ಕಳೆದ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಿಂದ ಒಟ್ಟು 15,22,338 ಮತದಾರರಿದ್ದರು. ಆ ಚುನಾವಣೆಯಲ್ಲಿ ಒಟ್ಟು 11,14.385 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 73.23ರಷ್ಟು ಮತ ಚಲಾವಣೆ ಆಗಿದ್ದವು. 2014ರಲ್ಲಿ 5,80,146 ಪುರುಷರು ಹಾಗೂ 5,33,438 ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
•ಎನ್.ಆರ್. ನಟರಾಜ್