ಹರಪನಹಳ್ಳಿ: ದೇಶದಲ್ಲಿ ಕಳೆದ 5 ವರ್ಷದಲ್ಲಿ ಮೋದಿ ಭದ್ರ ಬುನಾದಿ ಹಾಕಿದ್ದಾರೆ. ಮುಂದಿನ 5 ವರ್ಷ ಭವ್ಯ ಭಾರತ ನಿರ್ಮಾಣವಾಗಲಿದೆ. ಬೇಜವಾಬ್ದಾರಿಯುತ ವಿರೋಧ ಪಕ್ಷಗಳ ಕೈಯಲ್ಲಿ ದೇಶದಲ್ಲಿ ಕೊಡಬೇಕೋ, ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುವ, ದೇಶ ರಕ್ಷಿಸುವ ಮೋದಿ ಕೈಗೆ ನೀಡಬೇಕೋ ನೀವೇ ನಿರ್ಧರಿಸಿ. 20-30 ಪಕ್ಷಗಳು ಕೂಡಿಕೊಂಡು
ದೇಶ ನಡೆಸಲು ಬಿಡಬೇಡಿ ಎಂದು ಕೇಂದ್ರ ಮಾಜಿ ಸಚಿವ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ಮತಯಾಚಿಸಿ ಅವರು ಮಾತನಾಡಿದರು. ಮೋದಿ ಮನೆಯಲ್ಲಿ ಯಾರೂ ರಾಜಕಾರಣದಲ್ಲಿ ಇಲ್ಲ.
ಪ್ರಧಾನ ಮಂತ್ರಿಯವರ ತಾಯಿ ಆಟೋ ರೀಕ್ಷಾದಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಾರೆ. ಮೋದಿ ಸಹೋದರರು, ಕಿರಾಣಿ ಅಂಗಡಿ ಮತ್ತು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಾರೆ. ಇದು ಪ್ರಧಾನ ಮಂತ್ರಿಗಳ ಕುಟುಂಬ ವ್ಯವಸ್ಥೆಯಾಗಿದೆ. ಆದರೆ ಕಾಂಗ್ರೆಸ್‌ನ ಸೋನಿಯಾಗಾಂಧಿ ಮಹಿಳಾ ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಇವರದ್ದು ಉದ್ಯೋಗ ಏನು ಎಂದು ಪ್ರಶ್ನಿಸಿದ ಅವರು ದೇಶ ಲೂಟಿ ಮಾಡಿದ್ದರಿಂದಲೇ ಇಷ್ಟೊಂದು ಆಸ್ತಿ ಮಾಡಿದ್ದಾರೆ. ಆರು ದಶಕಗಳ ಕಾಲ ವಂಶಪಾರಂಪರ್ಯ ಆಡಳಿತ ನಡೆಸಿರುವುದೇ ಕಾಂಗ್ರೆಸ್ ಪಕ್ಷದ ಸಾಧನೆ ಎಂದರು.
ಇಂದು ಜಾತಿ ಆಧಾರದ ಮೇಲೆ ಫಲಾನುಭವಿಗಳಿಗೆ ಮನೆಗಳನ್ನು ಕೊಡುತ್ತಿಲ್ಲ. ಪ್ರತಿಯೊಬ್ಬರಿಗೂ ಅನಿಯಮಿತವಾಗಿ ಮನೆಗಳನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿಗಳು ದೇಶದ ಸುರಕ್ಷತೆಗಾಗಿ ಮಿಲಿó ಪಡೆಯನ್ನು ವಿಶ್ವದ 4ನೇ ಶಕ್ತಿಯನ್ನಾಗಿ ಮಾಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ವಿರೋಧಿಗಳ ಹುಟ್ಟು ಅಡಗಿಸಿದ್ದಾರೆ. ಜಪಾನ್, ಜರ್ಮನಿ, ಅಮೆರಿಕಾ, ರಷ್ಯಾ ಎಲ್ಲಾ ದೇಶಗಳು ಭಾರತದ ಪರವಾಗಿ ನಿಂತಿವೆ. ಇದಕ್ಕೆ ಮೂಲ ಕಾರಣ ಪ್ರಧಾನಮಂತ್ರಿಗಳು ವಿಶ್ವವನ್ನು ಸುತ್ತುವ ಮೂಲಕ ಭಾರತದ ದೇಶದ ಗೌರವ ಹೆಚ್ಚು ಮಾಡಿದ್ದಾರೆ. ಭ್ರಷ್ಟರ ಹುಟ್ಟು ಅಡಗಿಸಲು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಪ್ರಧಾನ ಮಂತ್ರಿ ಅವಾಜ್ ಯೋಜನೆ, ಜನಧನ್ ಸೇರಿದಂತೆ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿವೆ. ಸರ್ಕಾರದ ಹಣ ಸೋರಿಕೆ ತಡೆಯಲು ನೇರವಾಗಿ ಫಲಾನುಭವಿ ಖಾತೆಗೆ ಹಣ ಹಾಕಲಾಗುತ್ತಿದೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಪ್ರಧಾನಿ ಜನೌಷಧಿ ಕೇಂದ್ರದಿಂದ
ಬಡ ರೋಗಿಗಳಿಗೆ ವರದಾನವಾಗಿದೆ. ಆಯುಷ್ಮಾನ್ ಭಾರತ ಯೋಜನೆ 5 ಲಕ್ಷರೂ. ಆರೋಗ್ಯ ವಿಮೆ ದೊರೆಯುತ್ತಿದೆ. ಕೃಷಿ, ಕಟ್ಟಡ ಕಾರ್ಮಿಕರು ತಿಂಗಳ 50 ರೂ. 40 ವರ್ಷ ತುಂಬಿದರೆ 60 ವರ್ಷದ ನಂತರ ಪ್ರತಿ ತಿಂಗಳು 3 ಸಾವಿರ ರೂ. ವೇತನ ಸಿಗುತ್ತದೆ. ಉಜ್ವಲ ಗ್ಯಾಸ್ ಯೋಜನೆಯಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಮೊಬೈಲ್, ಗ್ಯಾಸ್ ವಿತರಣೆ, ಸಣ್ಣ ರೈತರಿಗೆ 6 ಸಾವಿರ, ಫಸಲ್ ಭೀಮಾ ಯೋಜನೆ ಸೇರಿದಂತೆ ಎಲ್ಲಾ ಯೋಜನೆಯ ಸೌಲಭ್ಯ ದೊರಕಿವೆ. ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸುವ ಮೂಲಕ ಮೋದಿಯನ್ನು ಮತ್ತೂಮ್ಮೆ ಪ್ರಧಾನಿ ಮಾಡಿ ಎಂದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ಕಾರ್ಯಾಗಾರದ ಮೇಲೆ ದಾಳಿ ನಡೆಸಿ ಭಾರತದ ಕೀರ್ತಿಯನ್ನು ಮೋದಿ ವಿಶ್ವಕ್ಕೆ ಸಾರಿದ್ದಾರೆ. ಲೋಕಸಭಾ ಚುನಾವಣೆ ಜಾತಿಗೆ ಸೀಮಿತವಾಗಿಲ್ಲ, ದೇಶದ ರಕ್ಷಣೆಗೆ ಸಂಬಂಧಿಸಿದ್ದರಿಂದ ಭಾರತ ಮಾತೆ ಕಾಪಾಡಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಹೇಳಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಸಣ್ಣಹಾಲಪ್ಪ, ಎಸ್ .ಪಿ.ಲಿಂಬ್ಯಾನಾಯ್ಕ, ಬಿ.ವೈ.ವೆಂಕಟೇಶನಾಯ್ಕ, ಎಂ.ಮಲ್ಲೇಶ್, ಯಡಿಹಳ್ಳಿ ಶೇಖರಪ್ಪ, ಯು.ಪಿ.ನಾಗರಾಜ್, ಸಂತೋಷ್
ಇನ್ನಿತರರಿದ್ದರು.