Advertisement

ಕ್ವಾರಂಟೈನ್‌ ವಿರೋಧಿಸಿದವರಿಗೆ ಲಾಠಿ ರುಚಿ

11:50 AM May 02, 2020 | Naveen |

ದಾವಣಗೆರೆ: ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಗೆ ಶಾಂತಿನಗರದ ಹಾಸ್ಟೆಲ್‌ ಬಳಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದ ಘಟನೆ ನಡೆದಿದೆ. ಶಾಂತಿನಗರದ ಹಾಸ್ಟೆಲ್‌ನಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ಜಮಾವಣೆಗೊಂಡಿದ್ದ ಜನರು ಆರೋಪಿಸಿದರು.

Advertisement

ಈ ಭಾಗದಲ್ಲಿ ಯಾರನ್ನೂ ಯಾವುದೇ ಕಾರಣಕ್ಕೂ ಕ್ವಾರಂಟೈನ್‌ ಮಾಡಬಾರದು. ಹಾಗೆ ಮಾಡುವುದರಿಂದ ನಮ್ಮ ಭಾಗಕ್ಕೂ ವೈರಸ್‌ ಹರಡಬಹುದು ಎಂದು ತಿಳಿಸಿದರು. ಹಾಸ್ಟೆಲ್‌ನಲ್ಲಿ ಯಾರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರು ಮತ್ತು ಇತರರಿಗೆ ಆಹಾರ ತಯಾರಿಸಿ, ಇಲ್ಲಿಂದ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು. ಹಾಸ್ಟೆಲ್‌ನಲ್ಲಿ ಅಡುಗೆ ಮಾಡುವುದು, ಸಾಮಾನುಗಳನ್ನು ಚೆಲ್ಲುವುದರಿಂದ ವೈರಸ್‌ ಹರಡಬಹುದು. ಹಾಗಾಗಿ ಇಲ್ಲಿ ಏನನ್ನೂ ಮಾಡಲೇಕೂಡದು ಎಂದು ನೆರೆದಿದ್ದಂತಹ ಜನರು ಪಟ್ಟು ಹಿಡಿದರು.

ಅಧಿಕಾರಿಗಳು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಜನರು ಒಪ್ಪಲೇ ಇಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹಾಸ್ಟೆಲ್‌ನಲ್ಲಿ ಅಡುಗೆ ಮಾತ್ರವೇ ಮಾಡಲಾಗುತ್ತದೆ. ಯಾರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿಲ್ಲ ಎಂದು ಹಲವಾರು ಬಾರಿ ಮನವರಿಕೆ ಮಾಡಿಕೊಟ್ಟರೂ ಜನರು ಪಟ್ಟು ಸಡಿಲಿಸಲೇ ಇಲ್ಲ. ಕೊನೆಗೆ ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನ ಚದುರಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಎಂಬಾತನ ಕೈಗೆ ಗಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next