Advertisement
ಇದೇ ಸಂದರ್ಭದಲ್ಲಿ ವಿವಿ ಬೋಧಕ ಸಿಬ್ಬಂದಿಯಿಂದ ಗಿಡ ದತ್ತು ಪಡೆಯುವ ಕಾರ್ಯಕ್ಕೆ ಕುಲಪತಿಯವರು ಚಾಲನೆ ನೀಡಿದರು. ಪ್ರತಿ ಶಿಕ್ಷಕ ತಲಾ ಒಂದು ಗಿಡ ನೆಟ್ಟು, ಅದರ ಪಾಲನೆ, ಪೋಷಣೆ ಹೊಣೆ ಹೊರಲಿದ್ದು, ಆವರಣದಲ್ಲಿ 100ಕ್ಕೂ ಹೆಚ್ಚು ಗಿಡ ನೆಡಲಾಯಿತು.
Related Articles
Advertisement
•ಹಳೆಪೇಟೆ ಹಿರಿಯ ಪ್ರಾಥಮಿಕ ಶಾಲೆ: ಹಳೇಪೇಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್ ಧ್ವಜಾರೋಹಣ ನೆರವೇರಿಸಿ, ಸಂವಿಧಾನದ ಹೂದೋಟದಲ್ಲಿ ಬಹುತ್ವ ಭಾರತದ ಸ್ವಾತಂತ್ರ್ಯದ ಹೂಗಳು ಸದಾ ಅರಳಬೇಕಾಗಿದೆ. ಯುವ ಜನತೆಯಲ್ಲಿ ಸಮಾನತೆ, ಸೋದರತೆ ಮತ್ತು ಮಾನವೀಯ ಸಂಬಂಧಗಳನ್ನು ಬೆಳೆಸುವ ಮೂಲಕ ಸ್ವಾತಂತ್ರ್ಯವನ್ನು ಸಫಲಗೊಳಿಸಬೇಕಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೋಡುಬಾಳೆ ಚನ್ನಬಸಪ್ಪ, ಸದಸ್ಯ ಸಿ. ರಮೇಶ್, ಕೆ.ಎಂ. ಶೋಭಾ, ಕೋಮಲ, ಮಂಜುನಾಥ, ಚಂದ್ರಕಾಂತ, ಬಿ. ಬಸವರಾಜಪ್ಪ ಇತರರು ಇದ್ದರು.
•ಕನಕ ಸೆಂಟ್ರಲ್ ಸ್ಕೂಲ್: ಲೋಕಿಕೆರೆ ಗ್ರಾಮದ ಕನಕ ಸೆಂಟ್ರಲ್ ಸ್ಕೂಲ್ನಲ್ಲಿ ಗ್ರಾಮದ ಮುಖಂಡ ಮಾಳವ್ವರ ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಕುಬೇರಪ್ಪ, ಷಣ್ಮುಖಪ್ಪ, ಕರಿಯಪ್ಪ, ನಾಗಪ್ಪ, ಮಾರುತಿ,ಮುಖ್ಯ ಶಿಕ್ಷಕಿ ಎಚ್.ಎಂ. ಪ್ರಿಯಾಂಕ, ಶಿಕ್ಷಕಿಯರಾದ ಜಿ.ಎ ಚ್. ರೇಖಾ, ಮಂಜುಳಾ, ಆಶಾ, ನೇತ್ರಾವತಿ, ಬಸ್ರಿತ್ ಸುಲ್ತಾನ್, ಸುಮಲತಾ, ಆಯಿಷ, ಸುಮಾ, ಸರಸ್ವತಿ, ದಾದಾಪೀರ್ ಇತರರು ಇದ್ದರು.
•ನಿಂಚನ ಪಬ್ಲಿಕ್ ಶಾಲೆ: ನಿಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎಸ್. ನಿಂಗಪ್ಪ ಧ್ವಜಾರೋಹಣ ನೆರವೇರಿಸಿ, ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಬಂದತಹ ಸ್ವಾತಂತ್ರ್ಯ ಇಂದು ಸ್ವಾರ್ಥದ ರಾಜಕೀಯಕ್ಕೆ ಬಲಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಚಿಗಟೇರಿ ಜಯಪ್ರಕಾಶ್, ಶಿಕ್ಷಕರಾದ ಲೋಕೇಶ್ವರಪ್ಪ, ಪಂಚಾಕ್ಷರಿ ಇತರರು ಇದ್ದರು.
•ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್: ಜಯನಗರ ಎ ಬ್ಲಾಕ್‌ನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಸಂಯೋಜಕ ಪ್ರೊ| ಕೆ.ಬಿ. ಆನಂದ್, ಕಾರ್ಯದರ್ಶಿ ಮಂಜುನಾಥ್ ಹೆಗಡೆ, ಮುಖ್ಯ ಶಿಕ್ಷಕಿ ಆರ್. ಮೀನಾಕ್ಷಿ ಇತರರು ಇದ್ದರು. ಶೈಲಜಾ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು.
•ದಾರುಲ್ ಅನಾಥಾಶ್ರಮ: ದಾರುಲ್ ಉಲೂಮ್ ರಜಾವುಲ್ ಮುಸ್ತಫಾ ವ ದಾರುಲ್ ಯಾತಾಮ(ಅನಾಥಾಶ್ರಮ) ಹಾಗೂ ಮವಲಾನ ಮೊಹಮ್ಮದ್ ಹನೀಫ್ ರಜಾ ಖಾದ್ರಿ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಸಂಸ್ಥೆಯ ಪ್ರಾಶುಂಪಾಲ ಮೌಲಾನಾ ಮೊಹಮ್ಮದ್ ಅಲೇ ರಜಾ ಖಾದ್ರಿ ಧ್ವಜಾರೋಹಣ ನೆರವೇರಿಸಿದರು. ಹಾಫೀಜ್ ಅಮೀನ್ ರಜ್ವಿ, ಕಾರ್ಯದರ್ಶಿ ಖಾದರ್ ಬಾಷಾ, ಮೌಲಾನಾ ಮುಜಾಹಿದ್ ಖಾನ್, ಮೌಲಾನಾ ಸೈಯದ್ ಗೌಸ್, ಸಾಧಿಕ್, ರಫೀಕ್ ಇತರರು ಇದ್ದರು.
•ಜೈನ್ ವಿದ್ಯಾಲಯ: ಪಿ.ಜೆ.ಬಡಾವಣೆಯಲ್ಲಿಯ ಜೈನ್ ವಿದ್ಯಾಲಯದಲ್ಲಿ ಕಾರ್ಯದರ್ಶಿ ಜೆ. ರಮೇಶ್‌ಕುಮಾರ್ ಧ್ವಜಾರೋಹಣ ನೆರವೇರಿಸಿ, ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದಲ್ಲಿ ಎಲ್ಲರೂ ಸಹಕಾರ ಮನೋಭಾವದಿಂದ ಬಾಳಬೇಕು ಎಂದರು. ಎಚ್. ರಮೇಶಕುಮಾರ, ಸುರೇಶಮಲ್ಜೈ ನ್, ಕುಮಾರ್‌ಗಾಂಧಿ, ಟ್ರಸ್ಟ್ ಸದಸ್ಯರು ಇದ್ದರು.
•ಸೋಮೇಶ್ವರ ವಿದ್ಯಾಲಯ: ನಿಟುವಳ್ಳಿಯ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಿವೃತ್ತ ಯೋಧ ಬೊಮ್ಮಲಿಂಗಯ್ಯ ಧ್ವಜಾರೋಹಣ ನೆರವೇರಿ ಸಿ, ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಹೋರಾಡುವವರಿಗೆ ಗೌರವ ಸಲ್ಲಿಸಬೇಕು ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್, ಪ್ರಾಂಶುಪಾಲೆ ಎನ್. ಪ್ರಭಾವತಿ, ಆಡಳಿತಾಧಿಕಾರಿ ಹರೀಶ್‌ಬಾಬು ಇತರರು ಇದ್ದರು. ಟಿ.ಎಂ. ಸಮೃದ್ಧಿ ನಿರೂಪಿಸಿದರು.
•ಜಿಎಂ ತಾಂತ್ರಿಕ ವಿದ್ಯಾಲಯ: ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯಲ್ಲಿ ಧ್ವಜಾರೋಹಣ ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪಿ. ಪ್ರಕಾಶ್, ಸ್ವಾತಂತ್ರ್ಯ ಹೋರಾಟ, ಸಂಘಟನೆಯ ಬಗ್ಗೆ ವಿವರಿಸಿದರು. ಬಯೋಟೆಕ್ ವಿಭಾಗದ ನಿರ್ಮಲ ಹೆಗ್ಡೆ, ಎಸ್.ಪಿ. ಬಿಂದು ಮಾತನಾಡಿದರು. ಅಡಳಿತಾಧಿಕಾರಿ ವೈ.ಯು. ಸುಭಾಶ್‌ಚಂದ್ರ, ಎಚ್.ಎಸ್. ಓಂಕಾರಪ್ಪ , ಜಿ.ಬಿ. ಅಜ್ಜಯ್ಯ ಇತರರು ಇದ್ದರು.
•ಸೋಷಿಯಲ್ ಸರ್ವಿಸ್: ಕರ್ನಾಟಕ ಸೋಷಿಯಲ್ ಸರ್ವಿಸ್ , ಆದರ್ಶ ಕಟ್ಟಡ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷರಾದ ಮೊಹಮ್ಮದ್ ಹಯಾತ್, ರಹತ್‌ಅಲಿ ಧ್ವಜಾರೋಹಣ ನೆರವೇರಿಸಿದರು.
ಖಾಸಿಂ, ಮೊಹಮ್ಮದ್ ಬಿಲಾಲ್ ಇತರರು ಇದ್ದರು. ಸಿಹಿ ವಿತರಣೆ ಮಾಡಲಾಯಿತು.
•ಜ್ಞಾನ ಸಾಗರ್ ಕಾಲೇಜು: ಲಕ್ಷ್ಮಿ ಲೇಔಟ್‌ನ ಜ್ಞಾನ ಸಾಗರ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ತಜ್ಞ ಬಸವರಾಜ್ ಸಾಗರ್ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಂ.ಆರ್. ರಮೇಶ್, ಎ. ಆಂಜಿನಪ್ಪ, ಹರೀಶ್, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
•ಅನ್‌ಮೋಲ್ ಸ್ಕೂಲ್: ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ ಈಚೆಗೆ ಅಮೆರಿಕಾದಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಂ.ಆರ್. ಐಶ್ವರ್ಯ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಡಿ. ರವೀಂದ್ರ, ಲತಾ ರವೀಂದ್ರ, ಎಸ್. ಚಿದಾನಂದ್, ಯು. ಕೊಟ್ರೇಶ್, ಎಸ್. ಉಮೇಶ್ ಇತರರು ಇದ್ದರು.
•ಬಾಪೂಜಿ ಸಿಬಿಎಸ್‌ಇ ಶಾಲೆ: ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿನಾರಾಯಣ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ನಿರ್ದೇಶಕ ಕೆ. ಇಮಾಂ, ಸ್ವಾತಂತ್ರ್ಯ ದಿನ ಎಲ್ಲಾ ಜಾತಿ, ಧರ್ಮದವರೂ ಆಚರಿಸುವ ರಾಷ್ಟ್ರೀಯ ಹಬ್ಬ ಎಂದರು. ಕೆ. ತರುಣ್,ಹೃದ್ವಿ, ಮ್ರಿತ್ತಿಕಾ, ಶುಭಾಂಗ್ ವಲವಾಲ್ಕರ್ ಮಾತನಾಡಿದರು. ಸುಮಂಗಲ, ಎಲ್ಸಿ ಲೂಯಿಸ್, ಸುಮಾ ಕುಲಕರ್ಣಿ, ಸಮರೇಂದ್ರ ಪಾಣಿಗ್ರಹಿ, ಸಿ.ಮಂಜಪ್ಪ ಇತರರು ಇದ್ದರು.