Advertisement
ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರೀಚ್4ಕಾಜ್ ಟೆಕ್ನಾಲಜಿ, ಗೋ ಗ್ರೀನ್ ಸಂಸ್ಥೆ ಸಹಯೋಗದಲ್ಲಿ ನಡೆದ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್-2019 ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಸಿದವರು, ನೊಂದವರು, ರೋಗಿಗಳಿಗೆ, ಬಡವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ದಾನ, ಸೇವೆ ಮಾಡುವರೋ ಅವರಿಗೆ ತೃಪ್ತಿ, ನೆಮ್ಮದಿ ಸಿಗುತ್ತದೆ ಎಂದರು.
Related Articles
Advertisement
ಸ್ವಯಂ ಸೇವಾ ಸಂಸ್ಥೆಗಳು ನೊಂದ ಜೀವಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯ ನಿರ್ವಹಿಸುತ್ತಿವೆ. ಎಲೆ ಮರೆಯಕಾಯಿಯಂತೆ ಸೇವಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆ, ವ್ಯಕ್ತಿಗಳನ್ನು ಗುರುತಿಸಿ ಇಲ್ಲಿ ಸನ್ಮಾನಿಸುತ್ತಿರುವುದು ಮಾದರಿಯಾಗಿದೆ ಎಂದರು.
ಚನ್ನಗಿರಿಯ ಶ್ರೀ ಕೇದಾರಲಿಂಗ ಶಾಂತವೀರ ಸ್ವಾಮೀಜಿ, ಸಂಸ್ಥೆಯ ಸಿಇಒ ರಾಘವ್ ಶೆಟ್ಟಿ, ಡಾ| ಕಲೀಂ ಷರೀಫ, ಎಂಡಿ ಜೆ.ಆರ್. ಮಂಜುನಾಥ, ನಿರ್ದೇಶಕ ಆರ್.ಶಿವಕುಮಾರ್, ರಾಯಭಾರಿ ವಾಣಿ ಕೇಶವ್, ಡಾ| ಸುರೇಶ ಹನಗವಾಡಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿಮಹೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ ಕೆ. ಶೆಟ್ಟಿ, ಪೋಪಟ್ಲಾಲ್ ಜೈನ್, ಮಂಜುಳಾ ಬಸವಲಿಂಗಪ್ಪ, ಕಾರ್ಯಕ್ರಮ ಸಂಯೋಜಕ ಶ್ರೀ ಕಾಂತ ಬಗರೆ, ರೋಟರ್ಯಾಕ್ಟ್ ನ ಮಾನಸ, ಶೃತಿ ಕಬ್ಬೂರು, ಕೆ.ಎನ್. ಸುರೇಶ, ಮಹಮ್ಮದ್ ಗೌಸ್, ಚೇತನಕುಮಾರ, ಪ್ರವೀಣಕುಮಾರ, ಶ್ರೀ ಧರ, ಗಿರಿಧರ, ಜ್ಯೋತಿ ಹಿರೇಮs್ ಇತರರು ಇದ್ದರು.
ವನಿತಾ ಸಮಾಜ, ಅಂಗವಿಕಲ ಆಶಾಕಿರಣ ಟ್ರಸ್ಟ್, ಹಿಮೋಫಿಲಿಯಾ ಸೊಸೈಟಿ, ಕರುಣಾಜೀವ ಕಲ್ಯಾಣ ಟ್ರಸ್ಟ್, ರಶ್ಮಿ ಬಾಲಕಿಯರ ವಸತಿ ಶಾಲೆ, ಸಂವೇದ ಟ್ರಸ್ಟ್, ಯೋಗ ಸ್ಪಂದನ ಮತ್ತು ವನಿತಾ ಯೋಗ ಕೇಂದ್ರ, ಸಂಕಲ್ಪ ವಿಕಲಚೇತನ ಶಾಲೆ, ಜನಸಾಮಾನ್ಯರ ಸೇವಾ ಸಂಸ್ಥೆ, ದೇವನಗರಿ ಗ್ರೀನ್ ಪ್ಲಾನೆಟ್, ರಿದ್ಧಿ-ಸಿದ್ಧಿ ಫೌಂಡೇಷನ್, ವೈಯಕ್ತಿಕ ವಿಭಾಗದಲ್ಲಿ ಗಿರೀಶ ದೇವರಮನಿ, ಚನ್ನಬಸವ ಶೀಲವಂತ್, ಕೆ.ಟಿ. ಗೋಪಾಲಗೌಡ, ಮಾಧವಿ ಗೋಪಾಲಕೃಷ್ಣ, ಆರ್.ಬಿ. ಪ್ರವೀಣ್‌ಕುಮಾರ್‌ಗೆ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್-2019 ಪ್ರದಾನ ಮಾಡಲಾಯಿತು.