Advertisement
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊನ್ನಾಳಿ ಮತ್ತು ಹರಿಹರ ಭಾಗದಲ್ಲಿ ನೆರೆಗೆ ತುತ್ತಾದ ವಸತಿಗಳು ವಾಸಿಸಲು ಯೋಗ್ಯವಿಲ್ಲವಾಗಿದ್ದರೆ ಬೇರೆಡೆ ಜಾಗ ಗುರುತಿಸಿ ಗುಂಪು ವಸತಿಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.
Related Articles
Advertisement
ಅತಿವೃಷ್ಟಿಯಿಂದ ರಸ್ತೆಗಳು, ಸೇತುವೆಗಳು, ಸರ್ಕಾರಿ ಕಟ್ಟಡಗಳು, ಟ್ಯಾಂಕ್‌ಗಳು ಹಾನಿಯಿಂದ 1.98 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾ ಪಂಚಾಯತಿ ಅಧಿಕಾರಿ ತಿಳಿಸಿದರು.
ದಾವಣಗೆರೆ ಮತ್ತು ಹರಿಹರ ವಿಭಾಗದಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್, ಲೈನ್ ಹಾನಿಯಿಂದ ಒಟ್ಟು 2,74,78,000 ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಮಾತನಾಡಿ, ನ್ಯಾಮತಿ ತಾಲೂಕಿನ 4ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾವಣಿ ಹಾಳಾಗಿದೆ. ಒಟ್ಟು 40 ಪಿಎಚ್ಸಿ ದುರಸ್ತಿಗೊಳಗಾಗಿದ್ದು 71 ಲಕ್ಷ ಹಾನಿಯಾಗಿದೆ. ಅಗತ್ಯ ಔಷಧಿಗಳ ಲಭ್ಯತೆ ಇದೆ. ಕೊರತೆ ಕಂಡು ಬಂದಲ್ಲಿ ಖರೀದಿಸಲು ಅನುದಾನವಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ನಜ್ಮಾ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ರಸ್ತೆ, ಸೇತುವೆ, ಕುಡಿಯುವ ನೀರು ಪೈಪ್‌ಲೈನ್ ಹಾಗೂ ಇತರೆ ಹಾನಿಯಿಂದ 5.94 ಲಕ್ಷ ಹಾನಿ ಸಂಭವಿಸಿದೆ ಎಂದರು.
ಭತ್ತದ ಬೆಳೆ ಹಾನಿ ವಿವರವನ್ನು ಸಂಪೂರ್ಣಗೊಳಿಸಿದ ನಂತರ ಪರಿಹಾರ ಕ್ರಮ ಕೈಗೊಳ್ಳಬೇಕು. ಜಗಳೂರಿನಂತಹ ಬರ ಪೀಡಿತ ಪ್ರದೇಶಗಳಲ್ಲಿ ಅಡಿಕೆ ಮತ್ತು ಇತರೆ ನೀರು ಹೆಚ್ಚು ಬಯಸುವ ಬೆಳೆ ಬಿಟ್ಟು ಕಡಿಮೆ ನೀರಿನಿಂದ ಬೆಳೆಯಬಹುದಾದ ಪೂರಕ ಬೆಳೆಗಳನ್ನು ಉತ್ತೇಜಿಸಬೇಕು ಎಂದು ಡಾ| ಸಂದೀಪ್ ದವೆ ಸೂಚಿಸಿದರು.
ಜಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಹೆಚ್ಚು ಮಳೆಯೇ ಆಗಿಲ್ಲ. ಆದ್ದರಿಂದ ಮರು ಪರಿಶೀಲನೆ ಮಾಡಬೇಕು. ಪಂಚಾಯತ್‌ರಾಜ್ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರಾಭಿವೃದ್ಧಿ ಕೋಶದ ವತಿಯಿಂದ ನೀಡಿರುವ ಅಂಕಿಅಂಶಗಳನ್ನೂ ಕೂಡ ಮರುಪರಿಶೀಲನೆ ಮಾಡಿ ನಷ್ಟದ ಅಂದಾಜನ್ನು ತಯಾರಿಸಬೇಕು. ಸಿಆರ್‌ಎಫ್ ಅನುದಾನದಲ್ಲಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಗಳೂರು ತಾಲೂಕು ಮತ್ತು ನೀರಿನ ಕೊರತೆ ಹೆಚ್ಚು ಇರುವ ಪ್ರದೇಶಗಳಲ್ಲಿನ ಬೋರ್ ಸುತ್ತಮುತ್ತ ರೀಚಾರ್ಜ್ ಪಿಟ್‌ಗಳನ್ನು ಈಗಲೇ ತೆಗೆದುಕೊಳ್ಳಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಸಿಇಒ ಎಚ್. ಬಸವರಾಜೇಂದ್ರಗೆ ಸೂಚಿಸಿದರು.
ಜಗಳೂರು ಪಟ್ಟಣಕ್ಕೆ ಸೂಳೆಕೆರೆಯಿಂದ ನೀರು ಸರಬರಾಜು ಮಾಡುವುತ್ತಿರುವುದರಿಂದ ಸಮಸ್ಯೆ ಇಲ್ಲ. 178 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 6 ಗಂಜಿ ಕೇಂದ್ರ ತೆರೆಯಲಾಗಿತ್ತು. ಹರಿಹರದಲ್ಲಿ ಒಂದು ಗಂಜಿ ಕೇಂದ್ರವನ್ನು ಮಾತ್ರ ಮುಂದುವರೆಸಲಾಗಿದ್ದು, ಇನ್ನುಳಿದವನ್ನು ಪರಿಸ್ಥಿತಿ ಸುಧಾರಣೆಗೊಂಡ ಕಾರಣ ಸ್ಥಗಿತಗೊಳಿಸಲಾಗಿದೆ ಎಂದರು.
ಹರಿಹರದ ಗಂಜಿ ಕೇಂದ್ರದಲ್ಲಿರುವ ನಿವಾಸಿಗಳ ಮನೆಗಳು ಸುಸ್ಥಿತಿಯಲ್ಲಿದ್ದರೆ ಸ್ವಚ್ಛಗೊಳಿಸಿ, ಸಂತ್ರಸ್ತರ ಖಾತೆಗೆ ನಿಯಮಾನುಸಾರ 10 ಸಾವಿರ ನೀಡಿ ಕಳುಹಿಸಿಕೊಡುವಂತೆ ಡಾ| ದವೆ ಸೂಚಿಸಿದರು.
ನೆರೆ ಹಾನಿ ಕುರಿತು ಮತ್ತೂಮ್ಮೆ ಆದಷ್ಟು ಶೀಘ್ರದಲ್ಲಿ ಮರು ಪರಿಶೀಲನೆ ನಡೆಯಿಸಿ ಸಿಆರ್‌ಎಫ್‌ನಿಂದ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ನೆರೆ ಪ್ರದೇಶಗಳಲ್ಲಿ ಸಮರ್ಪಕ ವೈದ್ಯಕೀಯ ನೆರವು ಮತ್ತು ಸಾಂಕ್ರಾಮಿಕ ರೋಗ ಬಾರದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮಣ್ಣರ್ ಇತರರು ಇದ್ದರು.