Advertisement
ಈಗಾಗಲೇ ತಾಲೂಕಿನ ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಿಗೆ ನೀಡುವ ಲಸಿಕೆ ಕಾರ್ಯಕ್ರಮ ಶೇ. 98ರಷ್ಟು ಪೂರ್ಣಗೊಂಡಿದ್ದು ಗೈರುಹಾಜರಿ, ಅನಾರೋಗ್ಯ ನಿಮಿತ್ತ ಬಾಕಿ ಇರುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಎರಡೂ¾ರು ದಿನಗಳಲ್ಲಿ ಆಗಲಿದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೀಘ್ರ ಶೇ. 100 ಗುರಿ ಸಾಧನೆಯಾಗಲಿದೆ. ಉಳಿದಂತೆ ದಾವಣಗೆರೆ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿರುವುದರಿಂದ, ಮಕ್ಕಳಿಗೆ ಲಸಿಕೆ ನೀಡಿಕೆ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿಯೇ ನಗರವೊಂದಕ್ಕೇ ಜ. 6ರಂದು ದಿನಕ್ಕೆ 7800 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ. ಅಲ್ಲದೆ ತಾಲೂಕಿನ ಎಲ್ಲ 25 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾ ಕಾರಿ ಡಾ| ಎಲ್.ಡಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ದಾವಣಗೆರೆ: ತಾಲೂಕಿನಲ್ಲಿ 7800 ಡೋಸ್ ಕೊವ್ಯಾಕ್ಸಿನ್ ಹಂಚಿಕೆ
02:34 PM Jan 06, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.