Advertisement
ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಕೊಲೆಯಾದವರು. ಮೃತ ಸಿದ್ದಲಿಂಗಪ್ಪ ವೃತ್ತಿಯಲ್ಲಿ ಬೋರ್ ಪಾಯಿಂಟ್ ಗುರುತಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಬೋರ್ ಪಾಯಿಂಟ್ ಮಾಡುವುದಿದೆ ಎಂದು ಕರೆದೊಯ್ದು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
Related Articles
Advertisement
ಸೊಸೆ ದೊಡ್ಡಮ್ಮ ಮಾವ ಸಿದ್ದಲಿಂಗಪ್ಪನ ಸಾವು ಕೊಲೆಯಾಗಿರುವ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಭೇದಿಸಲು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಂಡಗಳನ್ನು ರಚನೆ ಮಾಡಿದ್ದು, ಅದರಂತೆ ಪ್ರಕರಣದ ಮೊದಲ ಆರೋಪಿ ಸತೀಶನನ್ನು, ಅ.24 ರಂದು ಎರಡನೇ ಆರೋಪಿ ಪ್ರಭು ಅಲಿಯಾಸ್ ಮಾಸ್ತಿ, ಮೂರನೇ ಆರೋಪಿ ಪ್ರಶಾಂತ್ ನಾಯ್ಕ ಮತ್ತು ಅ. 30 ರಂದು ನಾಲ್ಕನೇ ಆರೋಪಿ ಸುಜಾತ, ಐದನೇ ಆರೋಪಿ ಶಿವಮೂರ್ತೆಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಸತೀಶ್, ಸುಜಾತ ಮತ್ತು ಶಿವಮೂರ್ತಪ್ಪ ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ, ಕೊಲೆ ಮಾಡಲು ಪ್ರಭು, ಪ್ರಶಾಂತ್ ನಾಯ್ಕಗೆ 1 ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದು ಒಪ್ಪಿಕೊಂಡಿದ್ದಾರೆ.
ಅ. 21 ರಂದು ಸಂಜೆ ಸಮಯದಲ್ಲಿ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್ ನಿಂದ ಆಟೋದಲ್ಲಿ ಚನ್ನಗಿರಿ ತಾಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಪೂರ್ವ ನಿಯೋಜನೆಯಂತೆ ಸಿದ್ದಲಿಂಗಪ್ಪನನ್ನು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಶವವನ್ನು ನಲ್ಲೂರು ಸಮೀಪದ ಭದ್ರಾ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: Pushpa 2: ಬಹುಕೋಟಿ ʼಪುಷ್ಪ-2ʼನಲ್ಲಿ ಅಭಿನಯಿಸಲು ಕಲಾವಿದರು ಪಡೆದ ಸಂಭಾವನೆ ಎಷ್ಟು?