ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಮೂವರ ಸಾವಿನಿಂದ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಂದ 223 ಜನರು ಮೃತಪಟ್ಟಂತಾಗಿದೆ. 297 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆಯ ಪಿ.ಜೆ. ಬಡಾವಣೆಯ 75 ವರ್ಷದ ವೃದ್ಧ (ರೋಗಿ ನಂಬರ್ 380764), ನಿಟುವಳ್ಳಿಯ 60 ವರ್ಷದ ವೃದ್ಧೆ (ರೋಗಿ ನಂಬರ್ 396694), ಹರಿಹರದ ಜೆ.ಸಿ.ಬಡಾವಣೆಯ 73 ವರ್ಷದ ವೃದ್ಧ (ರೋಗಿ ನಂಬರ್ 431164) ಇಂದು ಮೃತಪಟ್ಟವರು.
ಕೋವಿಡ್ ನಿಂದ ಗುಣಮುಖರಾದ 244 ಜನರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12,189 ಪ್ರಕರಣಗಳಲ್ಲಿ ಈವರೆಗೆ 9213 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಬೀದರನಲ್ಲಿ 98 ಪಾಸಿಟಿವ್ ಪತ್ತೆ
ಬೀದರ್ ಜಿಲ್ಲೆಯಲ್ಲಿ ಗುರುವಾರ ಮತ್ತೆ ಕೋವಿಡ್ ಆರ್ಭಟಿಸಿದ್ದು, 98 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 5200ಕ್ಕೆ ಏರಿಕೆ ಆಗಿದ್ದು, ಈ ಪೈಕಿ 143 ಜನರು ಚಿಕಿತ್ಸೆ ಫಲಿಸದೇ ಪ್ರಾಣ ಕಳೆದುಕೊಂಡಿದ್ದಾರೆ. ಇಂದು 94 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 4525 ಜನರು ಡಿಸ್ಚಾರ್ಜ್ ಆದಂತಾಗಿದೆ. ಇನ್ನೂ 528 ಸಕ್ರೀಯ ಪ್ರಕರಣಗಳು ಜಿಲ್ಲೆಯಲ್ಲಿವೆ