Advertisement

ದಾವಣಗೆರೆಯಲ್ಲಿ 335 ಮಂದಿ ಕೋವಿಡ್ ನಿಂದ ಗುಣಮುಖ: 52 ಹೊಸ ಪ್ರಕರಣ ಪತ್ತೆ

08:03 PM Oct 24, 2020 | sudhir |

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ 52ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು ಯಾವುದೇ ಮರಣ ವರದಿ ದಾಖಲಾಗಿಲ್ಲ. 335 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Advertisement

ದಾವಣಗೆರೆ ತಾಲೂಕಿನಲ್ಲಿ 24, ಹರಿಹರ ಹಾಗೂ ಚನ್ನಗಿರಿ ತಾಲೂಕುಗಳಲ್ಲಿ ತಲಾ ಎಂಟು, ಹೊನ್ನಾಳಿ ತಾಲೂಕಿನಲ್ಲಿ 12 ಸೇರಿ ಒಟ್ಟು 52 ಜನರಲ್ಲಿ ಸೋಂಕು ಕಂಡು ಬಂದಿದೆ. ದಾವಣಗೆರೆ ತಾಲೂಕಿನ 136, ಹರಿಹರ ತಾಲೂಕಿನ 81, ಜಗಳೂರು ತಾಲೂಕಿನ 15, ಚನ್ನಗಿರಿ ತಾಲೂಕಿನ 43, ಹೊನ್ನಾಳಿ ತಾಲೂಕಿನಲ್ಲಿ 57, ಹೊರ ಜಿಲ್ಲೆಯ ಮೂವರು ಸೇರಿ ಒಟ್ಟು 335 ಜನರು ಶನಿವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗಿನ ಸೋಂಕಿತ ಸಂಖ್ಯೆ 20286ಕ್ಕೆ ಏರಿದೆ. 19184 ಸೋಂಕಿತರು ಗುಣಮುಖರಾಗಿದ್ದಾರೆ. 253 ಜನರು ಮೃತಪಟ್ಟಿದ್ದಾರೆ. 849 ಪ್ರಕರಣಗಳು ಸಕ್ರಿಯವಾಗಿವೆ.

ಇದನ್ನೂ ಓದಿ:ಕಾಡಾನೆಗಳ ಪುಂಡಾಟಕ್ಕೆ ರೈತರ ಬೆಳೆಗಳು ಸಂಪೂರ್ಣ ನಾಶ : ಪರಿಹಾರಕ್ಕೆ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next