Advertisement

Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ

10:45 PM Dec 14, 2024 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಡಿ.15ರಂದು ನಗರದಲ್ಲಿ ಆಯೋಜಿಸಿರುವ ಸಭೆಗಾಗಿ ಶನಿವಾರ ರಾತ್ರಿಯೇ ಪಕ್ಷದ ಮಾಜಿ ಸಚಿವರು, ರಾಜ್ಯದ ವಿವಿಧೆಡೆಗಳಿಂದ ಮಾಜಿ ಶಾಸಕರು, ಪ್ರಮುಖರ ದಂಡು ನಗರಕ್ಕೆ ಧಾವಿಸಿದೆ.

Advertisement

ಶನಿವಾರ ರಾತ್ರಿಯೇ 20ಕ್ಕೂ ಅಧಿಕ ಮಾಜಿ ಸಚಿವ, ಮಾಜಿ ಶಾಸಕರು ನಗರಕ್ಕೆ ಆಗಮಿಸಿದ್ದು ಸಭೆ ನಡೆಯುವ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಮಾಜಿ ಸಚಿವರಾದ ರೇಣುಕಾಚಾರ್ಯ ಹಾಗೂ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ (ಜ.14) ದೊಡ್ಡ ಸಮಾವೇಶ ಮಾಡಿ ಪಕ್ಷದೊಳಗಿನ ವಿರೋಧಿಗಳಿಗೆ ಶಕ್ತಿ ಪ್ರದರ್ಶಿಸಬೇಕು. ತನ್ಮೂಲಕ ವಿಜಯೇಂದ್ರರಿಗೆ ಬಲ ತುಂಬಬೇಕು ಎಂಬ ಉದ್ದೇಶದಿಂದಲೇ ಸಭೆ ಸೇರಲಾಗುತ್ತಿದೆ ಎಂಬ ಮಾಹಿತಿ ಆಪ್ತ ವಲಯದಲ್ಲಿ ಕೇಳಿ ಬಂದಿದೆ.

ಸಭೆ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಬಲ ತುಂಬುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಈಗಾಗಲೇ ಈ ಕುರಿತು ಆರು ಸಭೆ ನಡೆಸಿದ್ದು ಇದು ಏಳನೇ ಸಭೆಯಾಗಿದೆ. 40ಕ್ಕೂ ಹೆಚ್ಚು ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗುತ್ತಿದ್ದಾರೆ. ಬಿಜೆಪಿ ಸದೃಢ ಆಗಬೇಕು ಎಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು.

ಯಾರ ಉಚ್ಚಾಟನೆಗೂ ಸಭೆಯಲ್ಲ:
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಆಗಿದ್ದು ಅವರ ನೇತೃತ್ವದಲ್ಲಿ 17 ಸಂಸದ ಸ್ಥಾನ ಗೆದ್ದಿದ್ದೇವೆ. ಮುಂದೆ ಪಕ್ಷವನ್ನ ಬಲಪಡಿಸಲು ಮಾಜಿ ಶಾಸಕರು ನಿರ್ಣಯಿಸಿ ಈ ಸಭೆ ನಡೆಸಿದ್ದೇವೆ. ಬೆಳಿಗ್ಗೆ 11 ಗಂಟೆಗೆ ಮುಖ್ಯ ಸಭೆ ನಡೆಸುತ್ತೇವೆ. ಸಭೆ ಬಳಿಕ ನಿರ್ಣಯ ತಿಳಿಸುತ್ತೇವೆ. ಯಾರ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲು ಈ ಸಭೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಯಡಿಯೂರಪ್ಪರ ಮೇಲೆ ಎಫ್ ಐಆರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಕಾಂಗ್ರೆಸ್ ಸರ್ಕಾರದ ದುರಾಡಳಿತ ಮುಚ್ಚಿ ಹಾಕಿಕೊಳ್ಳಲು ಕೋವಿಡ್ ವಿಚಾರ ತೆಗೆದಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

Advertisement

ಸಭೆಗಾಗಿ ನಗರಕ್ಕೆ ಬಂದ ಪ್ರಮುಖರು:
ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರಪ್ಪ , ಸಂಪಗಿ, ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ, ರಾಣಿಬೆನ್ನೂರು ಅರುಣಕುಮಾರ್ ಪೂಜಾರ, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ಗುಡ್ಡ, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್.

Advertisement

Udayavani is now on Telegram. Click here to join our channel and stay updated with the latest news.