Advertisement

ದಾವಣಗೆರೆ ಬಿಜೆಪಿ ಭದ್ರಕೋಟೆ

04:25 PM Apr 23, 2019 | pallavi |

ಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರ ಭದ್ರ ಕೋಟೆಯಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟಗಳ ಯಾವುದೇ ಕುತಂತ್ರಗಳಿಗೆ ಬಲಿಯಾಗಲು ನಮ್ಮ ಬಿಜೆಪಿ ಕಾರ್ಯಕರ್ತರು ಸಿದ್ಧರಿಲ್ಲ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಬೇಲಿಮಲ್ಲೂರಿನಲ್ಲಿ ಸೋಮವಾರ ಮಹಿಳಾ ಮತದಾರರ ಬಳಿ ಮತಯಾಚಿಸಿ ಬಿಜೆಪಿ ಕಮಲದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿ ಅವರು ಮಾತನಾಡಿದರು.

ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರು ಮೈತ್ರಿಕೂಟಗಳ ಚಕ್ರವ್ಯೂಹ ಬೇಧಿಸಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿ 4ನೇ ಬಾರಿಗೆ ಗೆಲುವು ಸಾಧಿಸುವುದು ಶತ ಸಿದ್ಧ ಎಂದರು.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ನಾಲ್ಕಾರು ಬಾರಿ ಪ್ರವಾಸ ನಡೆಸಿ ಜಿಲ್ಲೆಯ ಪ್ರತಿ ಮತದಾರನ ಮನೆ ಬಾಗಿಲಿಗೆ ತೆರಳಿ ಮತಯಾಚನೆ ನಡೆಸಲಾಗಿದೆ. ಈ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಎದುರಾಳಿ ಯಾರೆಂಬುದು ನಮಗೆ ಮುಖ್ಯವಾಗಿಲ್ಲ. ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಸೈನಿಕರಂತೆ ಸಜ್ಜಾಗಿದ್ದು, ಅಭ್ಯರ್ಥಿಯ ಗೆಲುವಿನ ಅಂತರದ ಕಡೆ ಗಮನ ಹರಿಸುತ್ತಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಏಕೈಕ ಗುರಿ ಹೊಂದಿದ್ದಾರೆ ಎಂದರು.

Advertisement

ಬಿಜೆಪಿ ಮುಖಂಡರಾದ ಬಿ. ಸಿದ್ದಪ್ಪ, ಹಳದಪ,್ಪ ತೊಳಕಿ ಹಾಲೇಶಪ್ಪ, ಮಹಡಿ ಮಂಜಪ್ಪ, ಎಂ. ಹಳದಪ್ಪ, ಬೆನಕಪ್ಪ, ರುದ್ರೇಶಿ, ಎ.ಕೆ. ಉಮೇಶ, ಅಂಜಿನಿ, ಚಂದ್ರು, ಪ್ರವೀಣ, ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next