ದಾವಣಗೆರೆ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಎಚ್.ಕಲ್ಪನಹಳ್ಳಿ ಬಳಿ ಭದ್ರಾ ಚಾನಲ್ ನಲ್ಲಿ ಸೋಮವಾರ ನಡೆದಿದೆ.
ಮೃತರನ್ನು ದಾವಣಗೆರೆ ನಗರದ ಜಯನಗರ ನಿವಾಸಿ ಶ್ರೀ ದೇವಿ(38) ಹಂಸಿಕಾ (10) ನೂತನಾ (08) ಎನ್ನಲಾಗಿದೆ.
ಮನೆ ಕಟ್ಟುವ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಬಳಿಕ ಶ್ರೀದೇವಿ ತನ್ನ ಇಬ್ಬರು ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಭದ್ರಾ ಚಾನಲ್ ಕಡೆಗೆ ಬಂದಿದ್ದಾರೆ, ಅಲ್ಲಿ ಇಬ್ಬರು ಮಕ್ಕಳನ್ನ ಸೊಂಟಕ್ಕೆ ಕಟ್ಟಿಕೊಂಡು ಚಾನಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀದೇವಿ ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು. ಚಾನಲ್ ನಿಂದ ಹೊರಗೆ ತೆಗೆದು ಜಿಲ್ಲಾ ಆಸ್ಪತ್ರೆ ಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್