Advertisement

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

09:56 PM Oct 09, 2024 | Team Udayavani |

ದಾವಣಗೆರೆ: ಕಳೆದ ಮೂರು ತಿಂಗಳನಿಂದ ಗೌರವ ಧನ ಬಿಡುಗಡೆಯಾಗದೆ ಜೀವನ ನಿರ್ವಹಣೆಗೆ ತೊಂದರೆಯಿಂದ ಬೇಸತ್ತ ಅಂಗನವಾಡಿ ಸಹಾಯಕಿಯೊಬ್ಬರು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Advertisement

ದಾವಣಗೆರೆಯ ಡಾಂಗೇ ಪಾರ್ಕಿನ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಆತ್ಮಹತ್ಯೆಗೆ ಯತ್ನಿಸಿದವರು. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ, ಇತರೆಡೆ ಕರೆದೊಯ್ಯಲು ಹಣಕಾಸಿನ ತೊಂದರೆಯಿಂದ ಕುಟುಂಬದವರು ಪರಿತಪಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಕಳೆದ ಮೂರು ತಿಂಗಳನಿಂದ ಗೌರವ ಧನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಭಾರತಿ ಅವರು ಕುಟುಂಬ ನಿರ್ವಹಣೆಗೆ ಕೆಲವು ಕಡೆ ಸಾಲ ಮಾಡಿದ್ದರು. ಗೌರವ ಧನ ಬಂದಲ್ಲಿ ಸಾಲ ತೀರುವಳಿ ಮಾಡುವ ಯೋಜನೆ ಇತ್ತು. ಆದರೆ, ಗೌರವ ಧನ ಬಿಡುಗಡೆ ಆಗಿರಲಿಲ್ಲ. ಒಂದು ಕಡೆ ಜೀವನ ನಿರ್ವಹಣೆಯ ಸಮಸ್ಯೆ ಮತ್ತೊಂದು ಕಡೆ ಸಾಲ ತೀರುವಳಿಗೆ ಒತ್ತಡದಿಂದ ಮನನೊಂದು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಭಾರತಿ ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಬರುವಂತಹ ಆದಾಯದಲ್ಲೇ ಜೀವನ ನಿರ್ವಹಣೆ ಮಾಡು ತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನೂ ಬರುವಂತಹ ಗೌರವಧನದಲ್ಲೇ ನಿರ್ವಹಣೆ ಮಾಡುತ್ತಿದ್ದರು.

ಮೂರು ತಿಂಗಳಾದರೂ ಗೌರವ ಧನ ಬಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Advertisement

ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಫೆಡರೇಶನ್ ರಾಜ್ಯ ಸಂಚಾ ಲಕ ಅವರಗೆರೆ ವಾಸು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಭಾರತಿ ಅವರ ಆರೋಗ್ಯ ವಿಚಾರಿಸಿದರು.

ಎರಡು- ಮೂರು ತಿಂಗಳಿಂದ ಸಂಬಳ ಸಂಬಳ ಬಂದಿಲ್ಲ. ಕುಟುಂಬ ನಿರ್ವಹಿಸಲು ಹಲವಾರು ಹತ್ತಿರ ಸಾಲ ಮಾಡಿ ಅದನ್ನು ತೀರಿಸುವುದಕ್ಕಾಗುತ್ತಿಲ್ಲ. ಬಾಡಿಗೆ ಕಟ್ಟಿಕೊಂಡು ಎರಡು ಹೆಣ್ಣು ಮಕ್ಕಳನ್ನು ಓದಿಸಿಕೊಂಡು ಜೀವನ ಸಾಗಿಸಲು ಕಷ್ಟಕರ ಎಂದು ಸಾಯುವುದಕ್ಕೆ ನಿರ್ಧಾರ ಮಾಡಿ ಆಸಿಡ್ ಕುಡಿಯಲು ಮುಂದಾಗಿದ್ದಾರೆ. ಸಾಕಷ್ಟು ಸಮಸ್ಯೆ ಯಾಗಿದೆ. ಹಾಗಾಗಿ ಎಸ್.ಎಸ್. ಹೈಟೆಕ್ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಮಣಿಪಾಲಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹಣಕಾಸಿನ ತೊಂದರೆ ಇರುವ ಭಾರತಿ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಽಗಳು ಸಹಾಯ ಮಾಡಬೇಕು ಎಂದು ಆವರಗೆರೆ ವಾಸು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

Advertisement

Udayavani is now on Telegram. Click here to join our channel and stay updated with the latest news.

Next