Advertisement

Davanagere; ಆಧಾರ್,ಅಧಿಕಾರಿಗಳ ಸೀಲು, ಸಹಿ ನಕಲು ಮಾಡಿಕೊಡುತ್ತಿದ್ದ ಆರೋಪಿ ಬಂಧನ

09:01 PM Nov 09, 2023 | Team Udayavani |

ದಾವಣಗೆರೆ: ಆಧಾರ್ ತಿದ್ದುಪಡಿ, ನವೀಕರಣ ಅರ್ಜಿ ನಮೂನೆಯ ಪತ್ರಾಂಕಿತ ಅಧಿಕಾರಿಯಂತೆ ಸೀಲು ಮತ್ತು ಸಹಿ ನಕಲು ಮಾಡಿಕೊಡುತ್ತಿದ್ದ ಆರೋಪಿ ಯನ್ನು ದಾವಣಗೆರೆಯ ಬಸವನಗರ ಪೊಲೀಸರು ಬಂಧಿಸಿದ್ದಾರೆ.

Advertisement

ದಾವಣಗೆರೆ ತಾಲೂಕಿನ ಪುಟಗನಾಳ್ ಗ್ರಾಮದ ಪತ್ರ ಬರಹಗಾರ ಬಸವರಾಜಪ್ಪ ಅಲಿಯಾಸ್ ಬಸವಂತಪ್ಪ (70) ಬಂಧಿತ ಆರೋಪಿ. ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆಪಾಲಕ ಸದ್ಯೋಜಾತಪ್ಪ ಅವರು ಕರ್ತವ್ಯ ದಲ್ಲಿದ್ದಾಗ ಅಂಚೆ ಕಚೇರಿ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ವಿಳಾಸ ಮತ್ತು ವಯಸ್ಸು ತಿದ್ದುಪಡಿ ಮಾಡಿಕೊಡಲು ಗ್ರಾಹಕರು ಸಲ್ಲಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿಯು ದೃಢೀಕರಣ ಸಹಿ ಮಾಡಬೇಕಾಗಿದ್ದು ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ಹಿರಿಯ ತಜ್ಞರು. ಸಿ.ಜಿ.ಹೆಚ್. ದಾವಣಗೆರೆ ಎಂಬ ನಕಲು ಸೀಲನ್ನು ಸೃಷ್ಟಿ ಮಾಡಿಕೊಂಡು ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುವುದು ಕಂಡು ಬಂದಿತ್ತು.

ನಕಲು ಸಹಿ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಬಸವರಾಜಪ್ಪ ಅಲಿಯಾಸ್ ಬಸವಂತಪ್ಪನನ್ನು ವಶಕ್ಕೆ ತೆಗೆದುಕೊಂಡು ಕೃತ್ಯಕ್ಕೆ ಉಪಯೋಗಿಸಿದ ನಕಲಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಆಧಾರ್ ತಿದ್ದುಪಡಿ ಅರ್ಜಿ ನಮೂನೆಯಲ್ಲಿನ ಪತ್ರಾಂಕಿತ ಅಧಿಕಾರಿಯ ದೃಢೀಕರಣ ಮಾಡುವ ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ಹಿರಿಯ ತಜ್ಞರು. ಸಿ.ಜಿ.ಹೆಚ್. ದಾವಣಗೆರೆ.ಎಂದು ನಕಲು ಸೀಲನ್ನು ಹಾಕಿ ನಾನೇ ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುತ್ತೇನೆ ಎಂದು ಒಪ್ಪಿ ಕೊಂಡಿದ್ದಾನೆ. ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಚ್ ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಜಿ ನಾಗರಾಜ, ಸಿಬ್ಬಂದಿಗಳಾದ ಶಿವಪ್ಪ, ಮಹಮದ್ ರಫಿ, ಗಿರೀಶ್, ಕವಿತಾ, ಅಣ್ಣಯ್ಯ ಲಮಾಣಿ, ಅಮರೇಶ್ ಸಂಗಮ್ ಅವರನ್ನೊಳಗೊಂಡ ಆರೋಪಿ ಯನ್ನ ಬಂಧಿಸಿದೆ.

ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್,ಹೆಚ್ಚುವರಿ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ ಕಾರ್ಯಾಚರಣೆ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next