Advertisement

15 ಸಾವಿರ ಕೋಟಿ ಅನುದಾನ ಮೀಸಲಿಡಿ: ಶ್ರೀರಾಮ್‌

03:54 PM Feb 06, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಈ ಬಾರಿಯ·ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ 15 ಸಾವಿರಕೋಟಿಗೂ ಹೆಚ್ಚು ಅನುದಾನ ಮೀಸಲಿಡಬೇಕು
ಎಂದು ಕಾರ್ಮಿಕ ಹಕ್ಕುಗಳ ವೇದಿಕೆ ಸಂಸ್ಥಾಪಕರಾಷ್ಟ್ರೀಯ ಅಧ್ಯಕ್ಷ ಪಾವಗಡ ಶ್ರೀರಾಮ್‌ಒತ್ತಾಯಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬಜೆಟ್‌ನಲ್ಲಿ 15 ಸಾವಿರ ಕೋಟಿಗೂಅಧಿಕ ಅನುದಾನ ಮೀಸಲಿಡುವ ಜತೆಗೆಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸಬೇಕು.ಕಾರ್ಮಿಕ ವಲಯಕ್ಕೆ ಸ್ವಂತ ಸೂರಿಗಾಗಿ ಹೆಚ್ಚಿನಆನುದಾನ ಬಳಸಬೇಕು. ಕಾರ್ಮಿಕರ ಮಕ್ಕಳಿಗೆಪ್ರತಿಷ್ಠಿತ ಶಾಲೆಯಲ್ಲಿ ಓದುವ ಅವಕಾಶಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಕಳೆದ 49 ವರ್ಷಗಳಿಂದ ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರು
ಕೆಲಸ ಮಾಡುತ್ತಿದ್ದರೂ ಕಾಯಂ ಮಾಡಿಲ್ಲ.

ಸಂವಿಧಾನದ 309 ನೇ ವಿಧಿ ಪ್ರಕಾರ ಅವಶ್ಯಕಮತ್ತು ಆಗತ್ಯ ಸೇವೆ ಸಲ್ಲಿಸುತ್ತಿರುವರನ್ನು ಕಾಯಂಮಾಡಬೇಕು. ಅದರ ಆಧಾರದಲ್ಲಿ ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರನ್ನುಕಾಯಂ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆಹೆಚ್ಚಿನ ವೇತನ ನಿಗದಿಪಡಿಸಬೇಕು ಎಂದುಒತ್ತಾಯಿಸಿದರು.

ಕಟ್ಟಡ ಕಾರ್ಮಿಕರಿಗೆ ಕಲ್ಯಾಣಮಂಡಳಿಯಿಂದ ಶೇ. 70 ರಷ್ಟು ಕಾರ್ಮಿಕರಿಗೆಮಾತ್ರವೇ ಗುರುತಿನ ಕಾರ್ಡ್‌ ನೀಡಲಾಗಿದೆ.ಹಾಗಾಗಿ ಕೊರೊನಾ ಸಂದರ್ಭದಲ್ಲಿ ಅನೇಕರಿಗೆಸರ್ಕಾರದ ಸಹಾಯ ಪಡೆಯಲಿಕ್ಕೆ ಆಗಲಿಲ್ಲ.ಕಾರ್ಮಿಕ ಇಲಾಖೆ ಮೂಲಕವೇಆಂದೋಲನ ಕೈಗೊಂಡು ಉಚಿತವಾಗಿಗುರುತಿನ ಪತ್ರ ನೀಡುವ ವ್ಯವಸ್ಥೆ ಮಾಡುವಮೂಲಕ ಅನುಕೂಲ ಮಾಡಿಕೊಡಬೇಕುಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 34 ಸಾವಿರದಷ್ಟು ಪೌರ ಕಾರ್ಮಿಕರುಕಾಯಂ ಆಗಿಲ್ಲ. ಕೂಡಲೇ ಎಲ್ಲರನ್ನೂ ಕಾಯಂಮಾಡಬೇಕು. ಆಂಧ್ರಪ್ರದೇಶ, ತೆಲಂಗಾಣಮಾದರಿಯಲ್ಲಿ ತಮಟೆ ಕಲಾವಿದರಿಗೆ ಮಾಸಿಕ3 ಸಾವಿರ ಮಾಸಾಶನ ನೀಡುವಂತಾಗಬೇಕು.ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆಒಳ ಮೀಸಲಾತಿ ಒದಗಿಸಬೇಕು ಎಂದುಒತ್ತಾಯಿಸಿದರು.

ಕಳೆದ 50 ವರ್ಷದಿಂದ ಕೆಲಸ ಮಾಡುತ್ತಿರುವಗ್ರಾಮ ಸಹಾಯಕರಿಗೆ 20 ಸಾವಿರ ವೇತನನಿಗದಿಪಡಿಸಬೇಕು. ಸರ್ಕಾರ ಮತ್ತು ರೈತರನಡುವೆ ಸಂಪರ್ಕ ಸೇತುವೆಯಾಗಿ ಕೆಲಸಮಾಡುತ್ತಿದ್ದ ರೈತ ಅನುವುಗಾರರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂಬುದುವೇದಿಕೆಯ ಒತ್ತಾಯ ಎಂದು ತಿಳಿಸಿದರು. ವೇದಿಕೆರಾಜ್ಯ ಅಧ್ಯಕ್ಷ ಬಿ.ಸಿ. ಸಾಗರ್‌, ಪ್ರಧಾನ ಕಾರ್ಯದರ್ಶಿಗುರುಶಾಂತಪ್ಪ, ಮರಿಯಣ್ಣ, ಜಿಲ್ಲಾ ಅಧ್ಯಕ್ಷರಮೇಶ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಓದಿ : ಪ್ರಸಕ್ತ ವರ್ಷ ಶೇ.30ರಷ್ಟು ಪಠ್ಯ ಕಡಿಮೆ

Advertisement

Udayavani is now on Telegram. Click here to join our channel and stay updated with the latest news.

Next