Advertisement

ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

03:50 PM Feb 06, 2021 | Team Udayavani |

ಹೊನ್ನಾಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಂಘಗಳ ಬಲವರ್ಧನೆಗಾಗಿ ನಬಾರ್ಡ್‌ ಕಾರ್ಯಕ್ರಮದಡಿಯಲ್ಲಿ ಅಡಿಕೆ ಹಾಳೆ ತಟ್ಟೆಯ ತಯಾರಿಕಾ ತರಬೇತಿ ಕಾರ್ಯಕ್ರಮ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ
ಹಮ್ಮಿಕೊಳ್ಳಲಾಗಿತ್ತು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಮಾತನಾಡಿ, ತರಬೇತಿ ಪಡೆಯುತ್ತಿರುವ ಸಂಘದ ಸದಸ್ಯರು ಸ್ವಾವಲಂಬಿ ಜೀವನ ನಡೆಸಲು ಸದರ ತರಬೇತಿಯು ಅನುಕೂಲಕರವಾಗಿದೆ. ಅಲ್ಲದೇ ಸ್ವ-ಉದ್ಯೋಗ ಮಾಡುವ ಸದಸ್ಯರಿಗೆ ಬ್ಯಾಂಕ್‌ಗಳಲ್ಲಿ ಸ್ವ-ಉದ್ಯೋಗ ಸಾಲ ನೀಡುತ್ತಿದ್ದು, ಪ್ರಧಾನಮಂತ್ರಿಯವ ಆತ್ಮ ನಿರ್ಭರ ಭಾರತ ನಿರ್ಮಿಸುವಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾ ಧಿಕಾರಿ ಎಸ್‌.ಆರ್‌.ವೀರಭದ್ರಯ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ಶಿವಕುಮಾರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್‌, ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ
ಅಧ್ಯಕ್ಷ ಸುರೇಶ್‌ ಹೊಸಕೇರಿ, ತಾಲೂಕು ಯೋಜನಾಧಿ ಕಾರಿ ಬಸವರಾಜ್‌ಅಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಎನ್‌ಆರ್‌ಎಲ್‌ ಎಂ ಸಮನ್ವಯಾ ಧಿಕಾರಿ ಧರ್ಮೇಂದ್ರ ಸ್ವಾಗತಿಸಿದರು. ಮಹಿಳಾ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಉಪನ್ಯಾಸಕಿ ವೈಷ್ಣವಿರೆಡ್ಡಿ ನಿರೂಪಿಸಿದರು. ತರಬೇತಿಯಲ್ಲಿ 31 ಜನ ಫಲಾನುಭವಿಗಳು ಭಾಗವಹಿಸಿದ್ದರು.

ಓದಿ : ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾಗೃತಿ ಮೂಡಿಸಿ

Advertisement

Udayavani is now on Telegram. Click here to join our channel and stay updated with the latest news.

Next