ದಿನಮಾನಗಳಲ್ಲಿ ಅಗತ್ಯವಿದೆ ಎಂದು ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ರಾಷ್ಟ್ರೀಯ ಸಂಚಾಲಕಿ ನಂದಾಮಾತ್ರಾ ತಿಳಿಸಿದರು.
Advertisement
ಬಾಪೂಜಿ ಅತಿಥಿ ಗೃಹದಲ್ಲಿ ಭಾನುವಾರ ನಡೆದ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ದಾವಣಗೆರೆ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮ ಸ್ವರಾಜ್ ಹೆಸರಿನಲ್ಲಿ ಮಹಾತ್ಮಗಾಂಧಿಯವರು ಗ್ರಾಮಗಳ ಅಭಿವೃದ್ಧಿ ಮತ್ತು ಅಧಿ ಕಾರ ವಿಕೇಂದ್ರೀಕರಣದ ಬಗ್ಗೆ ವಿಶ್ವದ ಗಮನ ಸೆಳೆದಿದ್ದರು ಎಂದರು.
ದೇಶದಲ್ಲಿ ಏಕವ್ಯಕ್ತಿ ಪ್ರದರ್ಶನದಿಂದ ಗ್ರಾಮ ಸ್ವರಾಜ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಧಿಕಾರ ವಿಕೇಂದ್ರೀಕರಣ ಅನುವುದು ಸಹ ಮರೀಚಿಕೆ
ಆಗುತ್ತಿದೆ. ಈ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯವರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ತಿಳಿ ಹೇಳಬೇಕೆಂದು ಕರೆ
ನೀಡಿದರು. ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ರಾಷ್ಟ್ರೀಯ ಸಂಘಟನೆಯವರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ತಿಳಿದು ವರದಿ ನೀಡಲು ಆಗಮಿಸಿರುವುದು ಸ್ವಾಗತಾರ್ಹ. ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಸಂಘಟನೆ
ಉತ್ತಮ ರೀತಿಯಲ್ಲಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯೇ ಸಾಕ್ಷಿ ಎಂದರು.
Related Articles
ಇದ್ದರೂ ಸಹ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಯಾವುದೇ ಅನುದಾನ ಇಲ್ಲದೇ ಗ್ರಾಮೀಣ ಭಾಗದ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಬಗ್ಗೆ
ಗ್ರಾಮೀಣ ಭಾಗದ ಜನತೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯವರು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಸೇವಾದಳದ ಸಂಚಾಲಕ ಡೋಲಿ ಚಂದ್ರು, ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಬಸವರಾಜ್ ಬೆಳ್ಳೂಡಿ, ಜಿಲ್ಲಾ
ಕಾಂಗ್ರೆಸ್ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕರಾದ
ರಾಘವೇಂದ್ರಗೌಡ ಉರುಕಟ್ಟೆ ಮತ್ತಿತರರು ಮಾತನಾಡಿದರು.
Advertisement
ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಚನ್ನಗಿರಿಯ ರವಿಕುಮಾರ್, ಕುಬೇರಪ್ಪ, ರೋಹಿತ್, ಆರ್.ಕೆ.ಅಜಯ್, ಸಾರಥಿ ಗೋಣೇಶ್, ಬನ್ನಿಕೋಡು ಸುನೀಲ್, ನವೀನ್ ಜಗಳೂರು, ಯುವ ಕಾಂಗ್ರೆಸ್‌ನ ಸಾಗರ್, ಎಚ್.ಜೆ. ಮೈನುದ್ದೀನ್, ಸಾಜಿದ್, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‌ನ ರಾಜೇಶ್ವರಿ, ಕವಿತಾ ಚಂದ್ರಶೇಖರ್, ಉಮಾಕುಮಾರ್, ಜಯಮ್ಮ, ಪುಷ್ಪಾಲತಾ ಇತರರು ಇದ್ದರು.
ಓದಿ: 48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ