Advertisement
ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸಮವಸ್ತ್ರದ ಮಹತ್ವ, ವಿವಿಧ ಧ್ವಜಗಳ ಆಳತೆ, ಪ್ರಾಮುಖ್ಯತೆ, ರಾಷ್ಟ್ರಗೀತೆ, ಝಂಡಾ ಗೀತೆಗಳ ತರಬೇತಿ, ಪ್ರಥಮ ಚಿಕಿತ್ಸಾ ವಿಧಾನ, ವಿವಿಧ ರೀತಿಯ ಗಂಟುಗಳನ್ನು ಮತ್ತು ಬ್ಯಾಂಡೇಜ್ ಕಟ್ಟುವ ರೀತಿ, ಗಾಯಾಳುಗಳನ್ನು ತಕ್ಷಣ ರವಾನಿಸಲು ಉಪಯೋಗಿಸುವ ವಿವಿಧ ರೀತಿಯ ಡೋಲಿ, ಅವುಗಳ ಅಳತೆ ಮತ್ತು ಲಾಗ್ ಪುಸ್ತಕ ಬರೆಯುವ ವಿಧಾನ ಮತ್ತು ಶುಭಾಷಯ ಪತ್ರಗಳ ರಚಿಸುವ ಕುರಿತು ಕುರಿತಾಗಿ ಶಿಬಿರದ ನಾಯಕಿ ಎಂ. ರತ್ನ ಪರಿಚಯಿಸಿದರು.
ಕೋವಿಡ್ ಸಂದರ್ಭದಲ್ಲಿ ಸಿದ್ದಗಂಗಾ ಸ್ಥಳೀಯ ಸಂಸ್ಥೆಯಿಂದ ಆನ್‌ಲೈ ನ್‌ನಲ್ಲಿ ಮಕ್ಕಳ ಚಟುವಟಿಕೆ ನಿರಂತರವಾಗಿದ್ದು ಹಲವಾರು
ಬಹುಮಾನ ಗಳಿಸುವಲ್ಲಿ ಮತ್ತು ರಾಜ್ಯ ಸಂಸ್ಥೆಯಿಂದ ಪ್ರಶಂಸೆಗೊಳಪಟ್ಟಿದೆ ಎಂದು ತಿಳಿಸಿದರು. ಕಾರ್ಯಕಾರಿ ಸಮಿತಿಯ ಸಹಾಯಕ ಆಯುಕ್ತರಾದ ಡಾ| ಜಯಂತ್,ರೇಖಾರಾಣಿ, ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಇತರರು ಇದ್ದರು. ಹೊನ್ನಾಳಿಯ ಸಂಪನ್ಮೂಲ ಶಿಕ್ಷಕ ಆಂಜನೇಯ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. 36 ಶಿಕ್ಷಕ ಶಿಕ್ಷಕಿಯರು ಶಿಬಿರದಲ್ಲಿ ಭಾಗವಹಿಸಿದ್ದರು.
Related Articles
Advertisement