ದಾವಣಗೆರೆ: ಶಾಶ್ವತ ಅಂಗವೈಕಲ್ಯಕ್ಕೆ ದೂಡುವ ಪೋಲಿಯೋ·ಮಹಾಮಾರಿ ಇಡೀ ಪ್ರಪಂಚದಿಂದಲೇ ದೂರವಾಗಲಿಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿಆಶಿಸಿದರು.
ಇಲಾಖೆ ವತಿಯಿಂದ ಭಾನುವಾರ ಶ್ರೀರಾಮನಗರದಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೋಲಿಯೋಲಸಿಕೆ ಅಭಿಯಾನದಲ್ಲಿ ಶಿಶುಗಳಿಗೆ ಪೋಲಿಯೋ ಲಸಿಕೆಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದ ಅವರು, ಭಾರತದಲ್ಲಿ ಯಾವುದೇ ಪೋಲಿಯೋಪ್ರಕರಣಗಳು ಇಲ್ಲ ಎಂದು ಹೇಳಲಾಗುತ್ತದೆ. ನಮ್ಮ ಪಕ್ಕದರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಪೋಲಿಯೋಪ್ರಕರಣಗಳುಕಂಡುಬಂದಿರುವುದರಿಂದ ನಾವು ಎಚ್ಚರದಿಂದಿರಬೇಕಾಗಿದೆಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೋಲಿಯೋನಿರ್ಮೂಲನೆಗೆ ಶ್ರಮಿಸುತ್ತಿವೆ. ಈ ಮಹತ್ತರ ಆಂದೋಲನದಲ್ಲಿ ಶ್ರಮಿಸುತ್ತಿರುವ ಎಲ್ಲಾ ಆರೋಗ್ಯ ಕ್ಷೇತ್ರದಕಾರ್ಯಕರ್ತರು ಅಭಿನಂದನಾರ್ಹರು ಎಂದು ತಿಳಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಬಸವಂತಪ್ಪ ಮಾತನಾಡಿ, ತಾಯಂದಿರು,ಮಕ್ಕಳ ಪೋಷಕರನ್ನುನೋಡಿದರೆ ಪೋಲಿಯೋ ಹನಿ ಬಗೆಗೆ ಅವರಿಗಿರುವ ಅರಿವುಕಾಳಜಿ ತಿಳಿಯುತ್ತದೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆಹಾಕಿಸುವ ಜೊತೆಗೆ ತಮ್ಮ ನೆರೆಹೊರೆಯವರು ಬಂಧುಗಳಿಗೆತಿಳಿಸುವ ಮೂಲಕ ಅವರೂ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲುಸಹಕರಿಸಿ ಎಂದು ಮನವಿ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಬಹಳ ಜಾಗ್ರತೆಯಿಂದಪೋಲಿಯೋ ಹನಿ ಹಾಕಲಾಗುತ್ತಿದೆ. ಪ್ರಥಮ ದಿನಬೂತ್‌ಗಳಲ್ಲಿ ಹಾಗೂ ಮೂರು ದಿನ ಮನೆಮನೆಗೆ ತೆರಳಿಪೋಲಿಯೋ ಹನಿ ಹಾಕಲಾಗುತ್ತದೆ. ಈ ಹಿಂದೆ ಪೋಲಿಯೋಲಸಿಕೆ ಹಾಕಿಸಿದ್ದರೂ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂತಪ್ಪದೇ ಪೋಲಿಯೋ ಹನಿ ಹಾಕಿಸಿ ಎಂದರುಆರ್‌ಸಿಎಚ್ ಅಧಿ ಕಾರಿ ಡಾ| ಮೀನಾಕ್ಷಿ ಮಾತನಾಡಿ,ಜಿಲ್ಲೆಯಲ್ಲಿ 1,56,211 ಮಕ್ಕಳಿಗೆ ಪೋಲಿಯೋ ಹನಿಹಾಕಲಾಗುತ್ತಿದ್ದು ಶೇ.100ರಷ್ಟು ಗುರಿ ಸಾಧಿ ಸಲುಪ್ರಯತ್ನಿಸಲಾಗುವುದು. ಒಟ್ಟಾರೆ 1,121 ಬೂತ್ ಗಳಿದ್ದು1,132 ತಂಡಗಳ 6 ಸಾವಿರ ಆರೋಗ್ಯ ಕಾರ್ಯಕರ್ತರುಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ವೇದಿಕೆಯಲ್ಲಿ ಮಹಾನಗರ ಪಾಲಿಕೆ ಸದಸ್ಯಪಾಮೇನಹಳ್ಳಿನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್,ಡಾ|ನಂದ, ಡಾ|ರೇಣುಕಾರಾಧ್ಯ, ಡಾ|ವೆಂಕಟೇಶ್,ಐಇಸಿ
ಅ ಧಿಕಾರಿ ಸುರೇಶ್ ಬಾರ್ಕಿ, ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರು ಇದ್ದರು.
ಓದಿ :
ಬೋನಿಗೆ ಬಿದ್ದ ಹೆಣ್ಣು ಚಿರತೆ