ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂ ಧೀಜಿಯವರನ್ನು ಅಮಾನುಷವಾಗಿ ಹತ್ಯೆಗೈ ದೇಶದ ಮೊದಲ ಭಯೋತ್ಪಾದಕ ನಾಥೂರಾಮ್
ಗೋಡ್ಸೆಯನ್ನು ಪೂಜಿಸುವ ಸಿದ್ಧಾಂತ ಹೊಂದಿದವರ ಕೈಯಲ್ಲಿ ದೇಶದ ಆಡಳಿತ ಸಿಕ್ಕಿರುವುದು ದುರಂತ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಡಿ. ದೇವರಾಜ್ ಅರಸು ಬಡಾವಣೆಯ ಬಿ ಬ್ಲಾಕ್‌ನಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಚೇರಿಯಲ್ಲಿ ಏರ್ಪಡಿಸಿದ್ದ ಗಾಂ ಧೀಜಿಯವರ 73ನೇ ಪುಣ್ಯಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರಿಗೆ ಗಾಂ ಧೀಜಿಯವರ ಬಗ್ಗೆ ಗೌರವವಿಲ್ಲ. ತೋರಿಕೆಯ ಹುಸಿ ಪ್ರೇಮ ಇದೆ ಎಂದರು.
ಗಾಂಧೀಜಿಯವರ ಬಗ್ಗೆ ಗೌರವವಿದ್ದರೆ ಗಾಂಧೀಜಿಯವರನ್ನು ಅಮಾನುಷವಾಗಿ ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ದೇಶದ್ರೋಹಿ ಎಂದು ಕೇಂದ್ರ ಸರ್ಕಾರ ಘೋಷಿಸಯುವ ಜೊತೆಗೆ ಗಾಂಧೀಜಿ ಹಂತಕ ಗೋಡ್ಸೆಯನ್ನು ಆರಾಧಿಸುವ ಹಿಂಬಾಲಕರನ್ನು ದೇಶ ದ್ರೋಹಿಗಳೆಂದು ಸರ್ಕಾರ ಗುರುತಿಸಲಿ ಎಂದು ಒತ್ತಾಯಿಸಿದರು.
ನಾಥೂರಾಮ್ ಗೋಡ್ಸೆ ಗಾಂ ಧೀಜಿಯವರನ್ನು ಕೊಂದಿರಬಹುದು. ಆದರೆ, ಅವರ ಆದರ್ಶಗಳನ್ನಲ್ಲ. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ಹಿಂಸೆಗೆ ಪ್ರಚೋದನೆ ನೀಡುವ ವಿಚಾರಗಳನ್ನು ಮುನ್ನೆಲೆಗೆ ತಂದು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅಸವಿಂಧಾನಿಕ ಕೃಷಿ ಕಾಯ್ದೆಗಳನ್ನು ಮುಂದು ಮಾಡಿ ಗಲಭೆಗೆ ಕಾರಣರಾಗುತ್ತಿದ್ದಾರೆ ಎಂದು ದೂರಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸೀಮೆಎಣ್ಣೆ ಮಲ್ಲೇಶ್, ಜಿಲ್ಲಾ ಕಾಂಗ್ರೆಸ್ ಕಟ್ಟಡ ಕಾರ್ಮಿಕರ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮುಖಂಡರಾದ ಆರ್.ಬಿ.ಝಡ್. ಬಾಷಾ, ಡಿ. ದೇವರಾಜ್, ಜೆ.ವಿ. ವೆಂಕಟೇಶ್, ಎಚ್. ಜಮಾಲ್ ಸಾಬ್, ಶ್ರೀನಿವಾಸ್, ಪಿಸಾಳೆ ನಾಗರಾಜ್, ದುಗ್ಗಪ್ಪ, ಪರಶುರಾಮ್, ಪ್ರಕಾಶ್ ಬಂಡಿ, ದಿನೇಶ್, ಚಂದ್ರು ಇತರರು ಇದ್ದರು.
ಓದಿ :
ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ ಬಜೆಟ್: ಬಿ ಎಸ್ ಯಡಿಯೂರಪ್ಪ