ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ತಾವೇ ಖುದ್ದು ಹರಿಹರಕ್ಕೆ ಬಂದು ಸಮಾರಂಭ ನಡೆಸಿ, ಕ್ರಯಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಇ
Advertisement
ದಕ್ಕೂ ಮುನ್ನ ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲಿಕರ ಸಂಘದ ಅಧ್ಯಕ್ಷ ಸಿದ್ದನಗೌಡ ಮಾತನಾಡಿ, ಕೆಎಸ್‌ಎಸ್ ಐಡಿಸಿ ಹರಿಹರ ಕೈಗಾರಿಕಾ ವಸಾಹತುವಿನ ನಿವೇಶನಗಳಿಗೆ ಕ್ರಯಪತ್ರ ನೀಡಿಲ್ಲ. ಸಚಿವರೇ ಖುದ್ದಾಗಿ ಸೇಲ್‌ಡೀಡ್ ವಿತರಿಸಬೇಕು. ಪಕ್ಕಾ ರಸ್ತೆ ಆಗಬೇಕು. ಚರಂಡಿ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗಮನ ಸೆಳೆದರು. ಸಚಿವರು ಪ್ರತಿಕ್ರಿಯಿಸಿ, ಕ್ರಯಪತ್ರ ವಿಚಾರದ ಕುರಿತು ಈಗನಿವೇಶನಗಳಿಗೆ ಖಾತೆ ಆಗಿದೆ. ಇನ್ನೊಂದು ವಾರದಲ್ಲಿ ಪೋಡಿಗೆ ಸೂಚನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಸೇಲ್‌ಡೀಡ್ ಪ್ರಕ್ರಿಯೆ ಆಗಿ, 15 ದಿನಗಳ ಒಳಗೆ ತಮಗೆ ಸ್ಥಳೀಯ ಸಚಿವರು, ಶಾಸಕರನ್ನೊಳಗೊಂಡಂತೆ ನಾನೇ ಕ್ರಯಪತ್ರಗಳನ್ನು ವಿತರಿಸುತ್ತೇನೆ. ಪ್ರಸಕ್ತ
ಸಾಲಿನ ತೆರಿಗೆ ಪಾವತಿಸಿಕೊಳ್ಳುವಂತೆ ಹರಿಹರ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ಮನವಿ ಬಂದಿವೆ ಎಂದರು. ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್ ಎನ್.ತಡಕನಹಳ್ಳಿ, ಜವಳಿ ಉದ್ಯಮ ಗಳಿಗೆ ಮೀಸಲಿಟ್ಟರೆ ಒಳಿತು ಎಂದು ಹೇಳಿದರೆ, ಉದ್ಯಮಿಯೊಬ್ಬರು, ಜವಳಿ ಪಾರ್ಕ್‌ನ ಪೂರಕವಾದ ಕೈಗಾರಿಕೆಗಳಿಗೆ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ನಮಗೆ ತೊಂದರೆ ಆಗುತ್ತದೆ. ರಾಜ್ಯದಲ್ಲಿ ಡೈಯಿಂಗ್ ಘಟಕ ಇಲ್ಲ. ಬೇರೆ ರಾಜ್ಯಗಳಿಗೆ ಹೋಗ ಬೇಕಾಗುತ್ತಿದೆ. ಇಲ್ಲಿಯೇ ಡೈಯಿಂಗ್ ಘಟಕ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಹರಿಹರದ ವೆಲ್ಕಾಸ್ಟ್ ಫೌಂಡ್ರಿಯ ಉದ್ಯಮಿ ಸತ್ಯನಾರಾಯಣ ಮಾತನಾಡಿ, ತಾವೊಬ್ಬ ರಫ್ತುದಾರರಾಗಿದ್ದು, ಪ್ರತಿ ವರ್ಷ ವಿದ್ಯುತ್ ದರ ಹೆಚ್ಚುಸುತ್ತಿರುವ ಕಾರಣ ರಗೆ ತೊಂದರೆಯಾಗುತ್ತಿದೆ. ಕೈಗಾರಿಕೆಗಳಿಗೆ ಕನಿಷ್ಟ ಮೂರು ವರ್ಷಗಳಿಗೊಮ್ಮೆ ದರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
Related Articles
Advertisement
ಕೈಗಾರಿಕೆಗಳಿಗೆ ಬ್ಯಾಂಕ್ ಸಾಲ ನೀಡುತ್ತಿಲ್ಲ ಎಂಬುದು ಎಲ್ಲೆಡೆ ಇರುವ ಸಮಸ್ಯೆ. ಹಂತ ಹಂತವಾಗಿ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು. ಅನೇಕ ಕೈಗಾರಿಕೋದ್ಯಮಿಗಳು ಹಲವಾರು ಸಮಸ್ಯೆ ಗಳ ಅನಾವರಣ ಮಾಡಿದರು. ಅದಕ್ಕೆ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಶಾಸಕ ಎಸ್.ರವೀಂದ್ರನಾಥ್, ಕೈಗಾರಿಕಾ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಯಪ್ರಕಾಶ್ ನಾರಾಯಣ್ ಇತರರು ಇದ್ದರು
ಓದಿ : ಗಜೇಂದ್ರಗಡದಲ್ಲಿ ಕರವೇ ಅದ್ಧೂರಿ ಮೆರವಣಿಗೆ