ಚನ್ನಗಿರಿ: ಪಟ್ಟಣದಲ್ಲಿ 1.20 ಕೋಟಿ ರೂ. ವೆಚ್ಚದಕಾಂಕ್ರಿಟ್ ರಸ್ತೆ, ಬಾಕ್ಸ್ ಚರಂಡಿ, ಹಾಗೂ ಹೈಮಾಸ್ಕ್ಲೈಟ್‌ಗೆ ಸಾಬೂನು ಮತ್ತು ಮರ್ಜಕ ನಿಗಮಮಂಡಳಿ ಅಧ್ಯಕ್ಷ ಹಾಗೂ ಶಾಸಕ ಮಾಡಾಳ್‌ವಿರೂಪಾಕ್ಷಪ್ಪ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಪುರಸಭೆ2020-21ನೇ ಸಾಲಿನ 15ನೇ ಹಣಕಾಸುಯೋಜನೆಯಡಿ 1.20ಕೋಟಿ ವೆಚ್ಚದ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಗುಣಮಟ್ಟದಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುವಂತೆ
ಅಧಿ ಕಾರಿಗಳಿಗೆ ಸೂಚಿಸಿದರು.
ಸ್ವತ್ಛ ಸುಂದರಪಟ್ಟಣವನ್ನಾಗಿಸಲು ಹಲವು ಯೋಜನೆಗಳನ್ನುಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗುತ್ತಿದೆ.ಪಟ್ಟಣದ ಕೆರೆಯ ಸುತ್ತಲು ಕಾರಂಜಿ ಮಾಡಿ,ಅದರ ಸುತ್ತಲು ಜನತೆ ಬೆಳಗ್ಗೆ ಮತ್ತು ಸಂಜೆವೇಳೆಯಲ್ಲಿ ವಿಶ್ರಾಂತಿಗಾಗಿ ಹಾಗೂ ವಾಕ್‌ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.ಇದರಿಂದ ಜನರಿಗೆ ಅನುಕೂಲವಾಗಲಿದೆಎಂದರು.
ಪುರಸಭೆ ಮುಖ್ಯಾಧಿಕಾರಿಬಸವರಾಜಪ್ಪ, ಪುರಸಭೆ ಸದಸ್ಯರಾದ ಪಟ್ಟಿನಾಗರಾಜ್, ಚಿಕ್ಕಪ್ಪ, ಪರಮೆಶ್ವರಪ್ಪ, ಲಕ್ಷ್ಮೀ ದೇವಿ,·ಸವಿತಾ, ಯಶೋಧಮ್ಮ, ಕುಬೆಂದ್ರೋಜಿರಾವ್,ನಿಂಗೋಜಿರಾವ್ ಇದ್ದರು.
ಓದಿ : ·ರೈತ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ