Advertisement

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿ ಆರಂಭ: ಮೋಹನ

10:27 PM Jul 08, 2021 | Team Udayavani |

ದಾವಣಗೆರೆ: ಮಣಿಪಾಲ ಆರೋಗ್ಯ ಕಾಡ್‌ ìನ 2021ರ ನೋಂದಣಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು ನಾಗರಿಕರು ನೋಂದಣಿ ಮಾಡಿಸಿಕೊಂಡು ಆರೋಗ್ಯ ಕಾರ್ಡಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ತಿಳಿಸಿದರು.

Advertisement

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಮಣಿಪಾಲ ಆರೋಗ್ಯ ಕಾರ್ಡ್‌ ಯೋಜನೆ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ಮಧ್ಯಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ.

ಅಲ್ಲದೆ ಕೇರಳ, ಗೋವಾದಂಥ ನೆರೆಯ ರಾಜ್ಯಗಳಿಗೂ ವಿಸ್ತರಣೆಯಾಗಿದೆ. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತ ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವ ಪಡೆಯಬಹುದಾಗಿದೆ ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿ ರೂಪದಲ್ಲಿ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ ಎಂದರು.

ಕಾರ್ಡಿನ ಸದಸ್ಯತ್ವ ಒಬ್ಬರಿಗೆ 300ರೂ., ಕೌಟುಂಬಿಕ ಕಾರ್ಡ್‌ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳಿಗೆ ಸೇರಿ 600 ರೂ. ಮತ್ತು ಕುಟುಂಬ ಪ್ಲಸ್‌ ಯೋಜನೆಯಲ್ಲಿ ಕಾರ್ಡುದಾರ, ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳು ಹಾಗೂ ನಾಲ್ಕು ಪೋಷಕರು (ತಂದೆ-ತಾಯಿ, ಅತ್ತೆ-ಮಾವ) ಸೇರಿ 750 ರೂ. ನಿಗದಿಪಡಿಸಲಾಗಿದೆ.

ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ., ಕುಟುಂಬಕ್ಕೆ 800 ರೂ. ಮತ್ತು ಕೌಟುಂಬಿಕ ಪ್ಲಸ್‌ ಯೋಜನೆಗೆ 950ರೂ. ಆಗಿದೆ ಎಂದು ವಿವರಿಸಿದರು. ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ಕೃಷ್ಣಪ್ರಸಾದ್‌ ಬಿ.ಎಸ್‌. ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್‌ ಹೊಂದಿರುವವರಿಗೆ ಕೋವಿಡ್‌ ರೋಗಿಗಳಿಗೆ ಜನರಲ್‌ ವಾರ್ಡ್‌ನಲ್ಲಿ ಸರ್ಕಾರದ ಅನುಮೋದಿತ ಪ್ಯಾಕೇಜ್‌ನಲ್ಲಿ ಶೇ. 10ರಷ್ಟು ರಿಯಾಯಿತಿ, ವೈದ್ಯರ ಸಮಾಲೋಚನೆ ಶೇ. 50ರಷ್ಟು ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆ ಶೇ. 30ರಷ್ಟು ರಿಯಾಯಿತಿ, ಸಿ.ಟಿ., ಎಂ.ಆರ್‌.ಐ, ಅಲ್ಟಾ ಸೌಂಡ್‌ನ‌ಲ್ಲಿ ಶೇ. 20 ರಷ್ಟು ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20ರಷ್ಟು ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20ರಷ್ಟು ರಿಯಾಯಿತಿ, ಔಷಧಾಲಯಗಳಲ್ಲಿ ಶೇ. 12 ರಷ್ಟು ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25 ರಷ್ಟು ರಿಯಾಯಿತಿ ದೊರೆಯಲಿದೆ.

Advertisement

ಕಾರ್ಡ್‌ ಹೊಂದಿರುವವರು ಕರಾವಳಿ ಕರ್ನಾಟಕ, ಗೋವಾ ಮಣಿಪಾಲ್‌ ಗ್ರೂಪ್‌ ಆಸ್ಪತ್ರೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಮಣಿಪಾಲ ಆರೋಗ್ಯ ಕಾರ್ಡಿನ ಪ್ರತಿನಿಧಿಯಾಗಬೇಕಾದಲ್ಲಿ ಅನಿಲ ನಾಯಕ್‌ (97406 18912) ಅವರನ್ನು ಸಂಪರ್ಕಿಸಬಹುದು. 2021ರ ನೋಂದಣಿಗಾಗಿ ಕೆಂಚನಗೌಡ (9731709177), ಕೆ.ಟಿ. ಚಂದ್ರಶೇಖರಪ್ಪ (99168 95421) ಸಂಪರ್ಕಿಸುವಂತೆ ತಿಳಿಸಿದರು.

ಆಸ್ಪತ್ರೆಯ ಪ್ರಮುಖರಾದ ಕೆ. ಸಚಿನ್‌ ಕಾರಂತ್‌, ಅನಿಲ್‌ ನಾಯ್ಕ, ಕೆಂಚನಗೌಡ ಕೆ.ಬಿ. ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next