Advertisement

ಮಹಿಳೆಯರೂ ಭಾಗವಹಿಸಲಿ: ವೀಣಾ

03:13 PM Jan 27, 2021 | Team Udayavani |

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲಸಂಗಮಲಿಂಗಾಯತ ಪಂಚಮಸಾಲಿ ಮಹಾಪೀಠದಬಸವ ಮೃತ್ಯುಂಜಯ ಶ್ರೀ·ಗಳ ನೇತೃತ್ವದಲ್ಲಿನಡೆಯುತ್ತಿರುವ ಪಾದಯಾತ್ರೆ ಜ.28ಹಾಗೂ 29ರಂದು ಜಿಲ್ಲೆಗೆ ಆಗಮಿಸಲಿದ್ದು,
ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕು ಎಂದು ಅಖೀಲ ಭಾರತಪಂಚಮಸಾಲಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ
ವೀಣಾ ಕಾಶೆಪ್ಪನವರ ಕೋರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಪಾದಯಾತ್ರೆಯಲ್ಲಿ ಪುರುಷರುಬಾರಕೋಲು ಹಿಡಿದರೆ, ಮಹಿಳೆಯರುಪೂರ್ಣಕುಂಭದೊಂದಿಗೆ ಪಾದಯಾತ್ರೆಗೆ ಸ್ವಾಗತಕೋರಲಿದ್ದಾರೆ. ಕೃಷಿಯಲ್ಲಿ ಉಪಯೋಗಿಸುವಕುರ್ಜಗಿಯೊಂದಿಗೆ ಭಾಗವಹಿಸಲಿದ್ದಾರೆ.15ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರುಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಮನೆಯಿಂದ ಎಂದಿಗೂ ಹೊರಗೆಬಾರದಸಮಾಜದ ಮಹಿಳೆಯರು ಇಂದು ತಮ್ಮಮಕ್ಕಳ ಶಿಕ್ಷಣ ಹಾಗೂ ಉದ್ಯೋಗದ ಕನಸುಹೊತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಪಾದಯಾತ್ರೆ ದಾವಣಗೆರೆ ಜಿಲ್ಲೆ ತಲುಪುವಷ್ಟರಲ್ಲಿಸರ್ಕಾರ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು.
ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದರೂಸರ್ಕಾರ ಸ್ಪಂದಿಸದೇ ಇದ್ದರೆ ಮಹಿಳೆಯರಿಂದ ಖಡ್ಗಪೂಜೆ ಮಾಡಿ, ಉಪವಾಸ ಮಾಡುವ ಮೂಲಕಕೊನೆಯ ಎಚ್ಚರಿಕೆ ನೀಡಲಾಗುವುದು ಎಂದರು.ಪ್ರಮುಖರಾದ ಲಕ್ಷ್ಮೀ ಕರಬಸಪ್ಪನವರ, ವಿಜಯಮಹಾಂತೇಶ್‌, ಮಂಜುಳಾ ಮಹೇಶ್‌ ಇದ್ದರು.

ಓದಿ :·ರೈತರ ಸಮಸ್ಯೆಗೆ ಶೀಘ್ರ ಪರಿಹಾರ: ಸಿ.ಸಿ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next