ಹರಿಹರ: ದಾವಣಗೆರೆ ವಿವಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ದಿ.ಪ್ರೊ.ಬಿ.ಕೃಷ್ಣಪ್ಪರ ಅಧ್ಯಯನ, ಸಂಶೋಧನಾ ಕೇಂದ್ರ ಆರಂಭಿಸಲು ಹರಿಹರದ ದಸಂಸ ಕಾರ್ಯಕರ್ತರು ಮನವಿ ಮಾಡಿದ್ದಾರೆ. ವಿವಿ ಕುಲಪತಿ ಡಾ.ಎಸ್.ವಿ.ಹಲಸೆ ಅವರನ್ನು ಭೇಟಿ ಮಾಡಿದ ಮುಖಂಡರು, ದಸಂಸ ಮೂಲಕ ನಾಡಿನ ಕೋಟ್ಯಂತರ ದಲಿತ, ಹಿಂದುಳಿದವರ ಸಂಘಟಿಸಿ, ಜಾಗೃತಿ ಮೂಡಿಸಿದ ಪ್ರೊ.ಕೃಷ್ಣಪ್ಪರ ಬದುಕಿನ ಬಗ್ಗೆ ಸೂಕ್ತ ಅಧ್ಯಯನ ನಡೆಸಬೇಕಿದೆ. ಅವರು ಮೂಲತಃ ಹರಿಹರದವರಾಗಿದ್ದರಿಂದ ವಿವಿಯಲ್ಲಿ ಅವರ ಹೆಸರಿನ ಅಧ್ಯಯನ ಕೇಂದ್ರ ಆರಂಭಿಸಬೇಕಿದೆ ಎಂದರು.
ಇದನ್ನೂ ಓದಿ : ಅಣಬೆ ಬೇಸಾಯದಿಂದ ಆದಾಯ ಹೆಚ್ಚಳ: ರಾಮರಾವ್
ಪ್ರೊ.ಬಿ.ಕೃಷ್ಣಪ್ಪರು ಸಿದ್ಲಿàಪುರ ಭೂ ಹೋರಾಟ, ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ, ಹಾವನೂರು ವರದಿ ಜಾರಿ, ಬಿದರಕಾವಲ್ ಕಾಳನಕಟ್ಟೆ, ಚಂದಗೋಡು, ಕ್ಯಾಸನಕೆರೆ, ದೇವಲಾಪುರಗಳ ಭೂ ಹೋರಾಟ, ನಾಗಸಂದ್ರ ಸತ್ಯಾಗ್ರಹ, ಶೇಷಗಿರಿಯಪ್ಪನ ಕೊಲೆ ವಿರುದ್ಧ ಹೋರಾಟ, ಕರಡೂರು ವಸತಿ ಹೀನರಿಗಾಗಿ ಮನೆ ಚಳವಳಿ ಮತ್ತು ವಸತಿ ಶಾಲೆ ತೆರೆಯಲು ಹೋರಾಟ. ಹುಣಸೆಕೋಟೆ ಅನಸೂಯಮ್ಮ, ಚಿಂತಾಮಣಿ ನಾಗಮ್ಮ, ಹಾಸನದ ತಾಯಮ್ಮನಂತಹ ಮಹಿಳೆಯರ ಸ್ವಾಭಿಮಾನ, ಸಮಾನತೆಗಾಗಿ ಹೋರಾಟ, ಮಂಡಲ್ ವರದಿ ಜಾರಿಗೆ ಚಳವಳಿ ನಡಸಿದ್ದಾರೆ.
ಚಳವಳಿಯ ಪರಿಣಾಮ ರಾಜ್ಯದಲ್ಲಿ ಬಗರ್ ಹುಕುಂ ಕಾಯ್ದೆ ಜಾರಿ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ ವಿದ್ಯಾಲಯ ವಸತಿ ಶಾಲೆ ಆರಂಭಿಸಲಾಯಿತು. ದಾವಣಗೆರೆ ವಿವಿ ಕನ್ನಡ ಭಾಷಾ ಅಥವಾ ಸಮಾಜ ಶಾಸ್ತ್ರ ಅಥವಾ ಸೂಕ್ತವೆನಿಸುವ ವಿಭಾಗದಲ್ಲಿ ಇವರ ಹೆಸರಿನಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದರೆ ಪ್ರೊ.ಬಿ.ಕೃಷ್ಣಪ್ಪರಿಗೆ ಗೌರವ ಸಲ್ಲಿಸಿದಂತೆಯೂ ಆಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ : ‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!
ಪ್ರೊ.ಎಸ್.ವಿ.ಹಲಸೆಯವರು ಈ ಕುರಿತು ಚರ್ಚಿಸಿ, ನಿರ್ಣಯಿಸುತ್ತೇವೆಂದರು. ಕನ್ನಡ ಭಾಷಾ ಉಪನ್ಯಾಸಕ ಡಾ.ವಿಶ್ವನಾಥ್, ದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಹರಳಹಳ್ಳಿ ಗ್ರಾಪಂ ಸದಸ್ಯ ಹನುಮಂತಪ್ಪ, ಮಂಜಪ್ಪ, ಮಾರ್ ರವಿಕುಮಾರ್, ರವಿಚಂದ್ರ ಜಿ. ಕಕ್ಕರಗೊಳ್ಳ, ಬೇತೂರು ಮಹಾಂತೇಶ್, ಕರಿಬಸಪ್ಪ, ಕುಸುಮಾ ಎಂ.ಸಿ., ಪೂಜಾ ಬಿ.ಎಲ್., ಹಾಲೇಶ್ ಇತರರಿದ್ದರು.