Advertisement

ಸಂವಿಧಾನದಿಂದ ಎಲ್ಲರಿಗೂ ಮತ ಚಲಾಯಿಸುವ ಹಕ್ಕು

03:55 PM Jan 26, 2021 | Team Udayavani |

ಜಗಳೂರು: ಬಡವ, ಶ್ರೀಮಂತರೆನ್ನದೆ·ಎಲ್ಲರಿಗೂ ಮತ ಚಲಾಯಿಸುವಂತಹಕ್ಕನ್ನು ಸಂವಿಧಾನವು ದಯಪಾಲಿಸಿದ್ದು,ಇದನ್ನು ಯುವ ಸಮುದಾಯವುಸಮರ್ಪಕವಾಗಿ ಬಳಸಿಕೊಳ್ಳಬೇಕುಎಂದು ತಹಶೀಲ್ದಾರ್‌ ಡಾ.ನಾಗವೇಣಿಹೇಳಿದರು.

Advertisement

ಪಟ್ಟಣದ ಹೊ.ಚಿ.ಬೋರಯ್ಯಪ್ರಥಮ ದರ್ಜೆ ಕಾಲೇಜು ಸಭಾಂಗಣ ದಲ್ಲಿ ತಾಲೂಕು ಚುನಾವಣೆ ಶಾಖೆ ಮತ್ತುಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರದಿನಾಚರಣೆ ಕಾರ್ಯಕ್ರಮ ವನ್ನುಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದನಂತರ ಮಾತನಾಡಿದ ಅವರು,ನಮ್ಮನ್ನಾಳುವ ನಾಯಕರನ್ನು ನಾವೇಆಯ್ಕೆ ಮಾಡಿಕೋಳ್ಳುವ ಸ್ವಾತಂತ್ರವನ್ನುಸಂವಿಧಾನವು ನೀಡಿದೆ. ಹಾಗಾಗಿಯುವ ಸಮುದಾಯದವರು ತಮ್ಮಹಕ್ಕನ್ನು ಚಲಾಯಿಸಲು 18 ವರ್ಷದತುಂಬಿದ ಪ್ರತಿಯೊಬ್ಬ ಯುವಕ,ಯುವತಿಯರು

ತಪ್ಪದೇನೋಂದಣಿಮಾಡಿಸಿಕೊಳ್ಳಬೇಕು ಎಂದರು. ದೇಶದಅಭಿವೃದ್ಧಿಯ ಯುವಕರ ಪಾತ್ರಬಹಳಿದ್ದು, ಅದನ್ನು ಯಾವ ರೀತಿಯಾಗಿಬಳಕೆ ಮಾಡಿಕೊಳ್ಳುತ್ತಿರಿ ಎಂಬುದುನಿಮ್ಮ ಮೇಲಿದೆ ಎಂದು ಹೇಳಿದರು.ವಕೀಲರ ಸಂಘದ ತಾಲೂಕು ಅಧ್ಯಕ್ಷಬಸವರಾಜಪ್ಪ ಮಾತನಾಡಿ, ಈಹಿಂದೆಶ್ರೀಮಂತರಿಗೆ ಮಾತ್ರ ಚುನಾವಣೆಯಲ್ಲಿಸ್ಪಧಿಸಲು ಅವಕಾಶವಿತ್ತು. ಆದರೆಬಡವರು ಸ್ಪ ರ್ಧಿಸುವಂತಿರಲಿಲ್ಲ.ಸಮಾಜದಲ್ಲಿ ಎಲ್ಲರೂ ಒಂದೇಎಂದು ಸಂವಿಧಾನವು ಈ ಅವಕಾಶಕಲ್ಪಿಸಿದೆ. ಅದನ್ನು ಸಮರ್ಪಕವಾಗಿ
ಬಳಕೆ ಮಾಡಿಕೊಳ್ಳಬೇಕು ಎಂದರು.

ವಿದ್ಯಾವಂತರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ. ಆಗ ಮಾತ್ರ ಗ್ರಾಮಗಳಅಭಿವೃದ್ಧಿಯಾಗಲು ಸಾಧ್ಯವಾಗಲಿದೆ.ನಮ್ಮನ್ನಾಳುವನಾಯಕರನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ ಸಂವಿಧಾನದನೀಡಿದೆ ಎಂದರು.

ನಾರಾಯಣ ಸ್ವಾಮಿ,ಸೀತಾ ರಾಮ್‌, ಲಂಕೇಶ್‌, ಪ್ರವೀಣಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next