Advertisement
ಕಳೆದ ವರ್ಷದ ಮಾರ್ಚ್ ನಿಂದಲೇ ಲಾಕ್‌ಡೌನ್ ಅನುಭವದ ಹಿನ್ನೆಲೆಯಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯದಲ್ಲಿ ಏನು ಬೇಕೋ ಎಲ್ಲವನ್ನು ಖರೀದಿ ಮಾಡಿದರು. ಕೆಲವು ಭಾಗಗಳಲ್ಲಿ ಬೆಳಿಗ್ಗೆ 9:45ರ ಹೊತ್ತಿಗೆ ಅಂಗಡಿ, ಹೋಟೆಲ್, ಗ್ಯಾರೇಜ್‌ಗಳ ಬಾಗಿಲು ಮುಚ್ಚಲಾಯಿತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಅಂಗಡಿ, ಹೋಟೆಲ್‌ಗಳ ಬಾಗಿಲು ಮುಚ್ಚುವ ಮೂಲಕ ಕೊರೊನಾ ಕರ್ಫ್ಯೂಗೆ ಸಹಕರಿಸಬೇಕು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು, ಯಾರ ಕಾರಣಕ್ಕಾಗಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು, ಮನೆಯಿಂದ ಹೊರ ಬರದೆ ಮನೆಯಲ್ಲಿ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದರು.
Related Articles
Advertisement
ಹಲವಾರು ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ದಾವಣಗೆರೆಯ ಪ್ರಮುಖ ವ್ಯಾಪಾರ-ವಹಿವಾಟಿನ ಸ್ಥಳಗಳಾದ ಮಂಡಿಪೇಟೆ, ಅಶೋಕ ರಸ್ತೆ, ಹದಡಿ ರಸ್ತೆ, ವಿಜಯಲಕ್ಷ್ಮೀ ರಸ್ತೆ, ಗಡಿಯಾರ ಕಂಬದ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಕೆ.ಆರ್. ರಸ್ತೆ, ಕೆ.ಆರ್. ಮಾರ್ಕೆಟ್, ವಸಂತ ರಸ್ತೆ, ದೊಡ್ಡಪೇಟೆ ಒಳಗೊಂಡಂತೆ ಅನೇಕ ಕಡೆ ಅಂಗಡಿ, ಹೋಟೆಲ್ ಎಲ್ಲ ವಾಣಿಜ್ಯ ಚಟುವಟಿಕೆ ಅಕ್ಷರಶಃ ಬಂದ್ ಆಗಿದ್ದರಿಂದ ರಸ್ತೆಗಳು ಭಣಗುಟ್ಟಿದವು.
ಅಲ್ಲಲ್ಲಿ ಒಬ್ಬರು-ಇಬ್ಬರು, ಕೆಲ ವಾಹನ ಸಂಚಾರ ಹೊರತುಪಡಿಸಿದರೆ ಬಹುತೇಕ ಎಲ್ಲೆಡೆ ನೀರವ ವಾತಾವರಣ ಕಂಡು ಬಂತು. ಸದಾ ಸಾವಿರಾರು ಜನರಿಂದ ಗಿಜಿಗುಡುತ್ತಿದ್ದ ಕೆ.ಆರ್. ಮಾರ್ಕೆಟ್ ಸ್ತಬ್ದವಾಗಿತ್ತು. ಬೆಳಗ್ಗೆ 10 ಗಂಟೆ ತನಕ ವ್ಯಾಪಾರ-ವಹಿವಾಟಿನ ನಂತರ ಎಲ್ಲವೂ ಬಂದ್ ಆಗಿದ್ದವು. ಹಳೆ ದಾವಣಗೆರೆ ಭಾಗದಲ್ಲೂ ಜನರು ಲಾಕ್‌ಡೌನ್ ಗೆ ಸ್ಪಂದಿಸಿದರು.