Advertisement

ಅದ್ಧೂರಿ ಮದುವೆ ಸಮಾರಂಭಕ್ಕೆ ಕೊರೊನಾ ಬ್ರೇಕ್‌!

06:55 PM Apr 26, 2021 | Team Udayavani |

ಚಿಕ್ಕಮಗಳೂರು: ಕೋವಿಡ್‌ ಎರಡನೇ ಅಲೆ ಆರ್ಭಟಿಸುತ್ತಿದ್ದು ಮದುವೆ ಸಮಾರಂಭಗಳಿಗೆ ಕಠಿಣ ನಿರ್ಬಂಧ ವಿ ಧಿಸಿದ್ದು ಸಾವಿರಾರು ಜನರು ಸೇರಬೇಕಾದ ಸ್ಥಳದಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಲ್ಯಾಣ ಮಂಟಪ ಬುಕ್‌ ಮಾಡಿದವರು ಕ್ಯಾನ್ಸಲ್‌ ಮಾಡುತ್ತಿದ್ದು, ನೀಡಿದ ಮುಂಗಡ ಹಣ ಪಡೆಯಲು ಹೆಣಗಾಡುವಂತಾಗಿದೆ. ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಬೇಕೆಂದುಕೊಂಡವರು ಸರಳವಾಗಿ ಮನೆಯಲ್ಲಿ ದೇವಸ್ಥಾನಗಳಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ.

Advertisement

ಆದರೆ ಕಲ್ಯಾಣ ಮಂಟಪಕ್ಕೆ ಮುಂಗಡ ಹಣ ಕಟ್ಟಿದವರು ವಾಪಸ್‌ ಪಡೆಯಲು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದ್ದು ಕೆಲವು ಕಲ್ಯಾಣ ಮಂಟಪ ಮಾಲೀಕರು ಮುಂಗಡ ಹಣವನ್ನು ವಾಪಸ್‌ ನೀಡಿದರೆ, ಕೆಲವರು ಜಿಎಸ್‌ಟಿ ಹಣ ಕಡಿತಗೊಳಿಸಿ ನೀಡುತ್ತಿ ದ್ದಾರೆ. ಮತ್ತೆ ಕೆಲವು ಕಲ್ಯಾಣ ಮಂಟಪ ಮಾಲೀಕರು ಮುಂಗಡ ಹಣವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ಕೆಲವು ಕಲ್ಯಾಣ ಮಂಪಟಗಳಲ್ಲಿ ಕಟ್ಟಿರುವ ಮುಂಗಡ ಹಣವನ್ನು ವಾಪಸ್‌ ನೀಡುವುದಿಲ್ಲ. ಕೊರೊನಾ ನಿಯಮದಂತೆ ಸರಳವಾಗಿ ಮದುವೆ ಸಮಾರಂಭ ಮಾಡಿ ಎಂದು ಹೇಳಿ ಕಳಿಸುತ್ತಿದ್ದಾರೆಂದು ಮುಂಗಡ ಹಣ ನೀಡಿದವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿದ್ದು ಕೆಲವು ಕಲ್ಯಾಣ ಮಂಟಪ 1ಲಕ್ಷ ರೂ., ಕೆಲವು ಕಲ್ಯಾಣ ಮಂಟಪಗಳು ಶೇ.50ರಷ್ಟು ಮತ್ತು ಶೇ.25ರಷ್ಟು ಮುಂಗಡ ಹಣ ಪಡೆದುಕೊಂಡಿವೆ ಎಂದು ತಮ್ಮ ಅಸಹಾಯಕತೆಯನ್ನು ಹೊರ ಹಾಕಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮದುವೆ ಮಾಡುವುದು ದೊಡ್ಡ ಸವಾಲಾಗಿದೆ. 3-4 ತಿಂಗಳ ಹಿಂದೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮುಂಗಡ ಹಣವನ್ನು ನೀಡಲಾಗಿದೆ. ಸರ್ಕಾರದ ನಿಯಮದಂತೆ ಮನೆ ಅಥವಾ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳುತ್ತೇವೆ. ಕೊಟ್ಟಿರುವ ಮುಂಗಡ ಹಣವನ್ನು ವಾಪಸ್‌ ನೀಡಬೇಕೆಂದು ಹಣ ನೀಡಿದವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next