Advertisement

ಸುಭಾಷಚಂದ್ರರ ರಾಷ್ಟ್ರಾಭಿಮಾನ ಮಾದರಿ

04:42 PM Jan 25, 2021 | Team Udayavani |

ಹೊನ್ನಾಳಿ: ಇಂದಿನ ಪೀಳಿಗೆಗೆ ರಾಷ್ಟ್ರ·ಪುರುಷರನ್ನು ಪರಿಚಯಿಸುವ ಮೂಲಕ ಅವರಲ್ಲಿದೇಶಾಭಿಮಾನವನ್ನು ಬೆಳಸಬೇಕಿದೆ ಎಂದು ಶಿಕ್ಷಕಿ·ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

Advertisement

ನ್ಯಾಮತಿ ಪಟ್ಟಣದ ನೇತಾಜಿ ರಸ್ತೆ ರಸ್ತೆಯಲ್ಲಿಯುವ ಬ್ರಿಗೇಡ್‌ ಆಯೋಜಿಸಿದ್ದನೇತಾಜ·ಸುಭಾಷಚಂದ್ರ ಬೋಸ್‌ರ 125ನೇ ಜನ್ಮದಿನಾಚರಣೆಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತ ದೇಶವನ್ನು ಬ್ರಿಟಿಷರಿಂದಮುಕ್ತಿಗೊಳಿಸಲುನೇತಾಜಿ ಕೈಗೊಂಡ ಯೋಜನೆಗಳು,ಅವರ ಹೋರಾಟದ ವಿಧಾನಗಳು, ಅವರರಾಷ್ಟ್ರಾಭಿಮಾನದ ಬಗ್ಗೆ·ತಿಳಿಸಿದರು.

ಸಿನಿಮಾ ನಟ, ನಟಿಯರ, ಕ್ರಿಕೆಟ್‌ ನಾಯಕರಅನುಯಾಯಿಗಳಾಗದೇ ದೇಶಕ್ಕಾಗಿ ಬಲಿದಾನಮಾಡಿದವರನ್ನು ತಮ್ಮ ನಾಯಕರನ್ನಾಗಿಮಾಡಿಕೊಳ್ಳಿ. ಈ ನಿಟ್ಟಿನಲ್ಲಿ ಸೂಲಿಬೆಲಿ ಚಕ್ರವರ್ತಿಅವರ ಮಾರ್ಗದರ್ಶನದಲ್ಲಿ ಯುವ ಬ್ರಿಗೇಡ್‌ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಯುವ ಬ್ರಿಗೇಡ್‌ನ‌ ಶರತ್‌ಸೋಗಮಾತನಾಡಿ, ಪಟ್ಟಣದ ಬೀದಿಗಳಿಗೆರಾಷ್ಟ್ರನಾಯಕರ,ದಾರ್ಶನಿಕರಹೆಸರುಗಳನ್ನುಇಡಲಾಗಿದ್ದು, ಆ ಹೆಸರಿನ ಮಹತ್ವ ಆಬೀದಿಯ ನಾಗರಿಕರಿಗೆ ತಿಳಿಯಬೇಕು ಎಂಬಉದ್ದೇಶದಿಂದ ಇದೇ ಮೊದಲ ಬಾರಿಗೆ ನೇತಾಜಿಅವರ ಜನ್ಮದಿನಾಚರಣೆಯನ್ನು ಅವರ ಹೆಸರಿನಬೀದಿಯಲ್ಲಿ ಆಚರಿಸಲಾಯಿತು ಎಂದರು.

ಶಿಕ್ಷಕಮಂಜುನಾಥ,ಮಕ್ಕಳಾದಕಂಚುಗಾರನಹಳ್ಳಿ ಸ್ವರೂಪಾ, ರೆಡ್ಡಿ ಕೀರ್ತನಾನೇತಾಜಿ ಬಗ್ಗೆ ಮಾತನಾಡಿದರು. ಇದೇಸಂದರ್ಭದಲ್ಲಿ ಬಿ.ಎಸ್ಸಿಯಲ್ಲಿಹೆಚ್ಚುಅಂಕಪಡೆದ ಎನ್‌.ಎನ್‌.ಕಾವ್ಯಾ ಅವರನ್ನುಸನ್ಮಾನಿಸಲಾಯಿತು. ಉಪತಹಶೀಲ್ದಾರ್‌ ಎನ್‌.ನಾಗರಾಜ, ಹಿರಿಯರಾದಎನ್‌.ಡಿ.ಪಂಚಾಕ್ಷರಪ್ಪ,ಹುರುಗಡಲೆ ವಿರೂಪಾಕ್ಷಪ್ಪ, ಎಂ.ಯು.ನಟರಾಜ, ಜಿ. ಮೇಘರಾಜ,ಶಿಕ್ಷಕಆಚೆಮನೆತಿಪ್ಪೇಸ್ವಾಮಿ,ಗೀತಮ್ಮ, ಎನ್‌.ಎಸ್‌. ಜನಾರ್ದನರಾವ್‌, ಕೆ.ಎಸ್‌. ಶಿವಕುಮಾರ, ಪತ್ರಕರ್ತರಾದಡಿ.ಎಂ. ಹಾಲಾರಾದ್ಯ,ಎಚ್‌.ಎಂ. ಸದಾಶಿವಯ್ಯ,ಎನ್‌.ಎಸ್‌. ನಾಗರಾಜ ಹಾಗೂ ಯುವ ಬ್ರಿಗೇಡ್‌ಸದಸ್ಯರು ಇದ್ದರು. ಯುವ ಬ್ರಿಗೇಡ್‌ನ‌ ಎನ್‌.ಜೆ.·ಸುಪ್ರೀತ್‌ ವಂದಿಸಿದರು.

Advertisement

 

ಓದಿ:ಪ್ರಶ್ನೆ ಪತ್ರಿಕೆ ಸೋರಿಕೆಗೆ ಖಂಡನೆ; ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next