Advertisement

ನೇತಾಜಿ ಜೀವನ ಸಂದೇಶ ಅನುಕರಣೀಯ

04:33 PM Jan 25, 2021 | Team Udayavani |

ದಾವಣಗೆರೆ: ಇಂದಿನ ದೇಶದ ಪರಿಸ್ಥಿತಿಯಲ್ಲಿ ನೇತಾಜಿ ಅವರಂತಹ ಬಿಸಿರಕ್ತದ ಯುವಕರು, ಸ್ವಾಮಿ ವಿವೇಕಾನಂದರಂತಹ ಸ್ಫೂರ್ತಿ ಕೊಡುವಂತಹ ಮಾರ್ಗದರ್ಶಕರು ಬೇಕಾಗಿದೆ ಎಂದು ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಕೆ.ಬಿ. ಶಂಕರನಾರಾಯಣ ಆಶಿಸಿದರು.
ಜಯದೇವ ವೃತ್ತದಲ್ಲಿ ಯುವ ಬ್ರಿಗೇಡ್‌ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 125ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಮ್ಯಾರಥಾನ್‌ನಲ್ಲಿ
ಭಾಗವಹಿಸಿ ಅವರು ಮಾತನಾಡಿದರು.

Advertisement

ಭಾರತ ಎಂದರೆ ಭವಿಷ್ಯ ಇಲ್ಲದ ದೇಶ ಎಂದು ಇಡೀ ಜಗತ್ತಿನ ಜನ ತಿಳಿದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನೋಡಿದಾಗ ಇಡೀ ಜಗತ್ತಿನಲ್ಲಿಯೇ ಭಾರತ ಅಗ್ರಗಣ್ಯ ರಾಷ್ಟ್ರ ಆಗುತ್ತಾ ಇದೆ. ಇಡೀ ಜಗತ್ತಿಗೇ ಗುರುವಿನ ಸ್ಥಾನ ಬರುತ್ತಾ ಇದೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದರು.

ಸ್ವಾರ್ಥ ರಾಜಕಾರಣಿಗಳು ಸರ್ದಾರ್‌ ವಲ್ಲಭಬಾಯಿ ಪಾಟೀಲ್‌ರಂತಹ ಉಕ್ಕಿನ ಮನುಷ್ಯ ಅವರನ್ನೂ ಹಿಂದೆ ಹಾಕಿದರು. ನಮ್ಮ ದೇಶ ಮುಂದೆ ಬರಬೇಕೆಂದರೆಯುವ ಜನತೆ, ಬಿಸಿ ರಕ್ತದ ಯುವಕರು ಮುಂದೆ ಬರಬೇಕಾಗಿದೆ. ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಸಮಾಜಕ್ಕೆ ತ್ಯಾಗ
ಮಾಡುವಂತಹ ಎಲ್ಲದಕ್ಕೂ ಸಿದ್ಧವಾಗಿರುವಂತಹ ನೂರು ಜನ ಯುವಕರು ಸಿಕ್ಕರೆ ಸಾಕು ಇಡೀ ದೇಶದ ಚಿತ್ರಣ ಬದಲಾಯಿಸುವೆ ಎಂದಿದ್ದರು. ಅದರಂತೆ ಯುವಜನಾಂಗ ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಬಲಿದಾನ ಕೊಡುವಂತಹ ತ್ಯಾಗ ಮಾಡುವಂತಹ ಧೀರರಾಗಬೇಕು. ನಿಮ್ಮಿಂದ ಇಡೀ ಜಗತ್ತಿಗೇ ಭಾರತದ ಪತಾಕೆ ಹಾರಿಸುವಂತಾಗಬೇಕು ಎಂದು ತಿಳಿಸಿದರು.
ರಾಮಕೃಷ್ಣ ಮಿಷನ್‌ನ ತ್ಯಾಗೀಶ್ವರಾನಂದ ಮಹಾರಾಜ್‌ ಮಾತನಾಡಿ, ಸುಭಾಶ್ಚಂದ್ರಬೋಸ್‌ ವಿದೇಶದಲ್ಲಿ ಪದವಿ ಪಡೆದಿದ್ದು, ಭಾರತಕ್ಕೆ ಬಂದು
ಬ್ರಿಟೀಷರ ಕೈಕೆಳಗೆ ಕೆಲಸ ಮಾಡದೆ ದೇಶಕ್ಕೆ ಸ್ವಾತಂತ್ರ್ಯ ತರಲು 1942ರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಯುವಕರನ್ನು ಪ್ರೇರೇಪಿಸಿದರು ಎಂದರು.

ಮೇಯರ್‌ ಬಿ.ಜಿ. ಅಜಯಕುಮಾರ, ಸದಸ್ಯರಾದ ಸೋಗಿ ಶಾಂತಕುಮಾರ, ಎಚ್‌.ಸಿ.ಜಯಮ್ಮ, ಶಿವನಗೌಡ ಪಾಟೀಲ್‌, ಮಾಜಿ ಸೈನಿಕರಾದ ಮಹೇಂದ್ರಕರ್‌, ಸತ್ಯಪ್ರಕಾಶ, ಅನಿಲ್‌, ಸತ್ಯನಾರಾಯಣ, ಯುವ ಬ್ರಿಗೇಡ್‌ನ‌ ಪವನ್‌ ಪ್ರೇರಣ, ಗಜೇಂದ್ರ, ಸತೀಶ, ವಿನಾಯಕ, ಮಂಜುನಾಥ, ಕಾರ್ತಿಕ್‌ ಮೋದಿ, ಚಂದ್ರು, ಪ್ರಶಾಂತ್‌, ಲೈಫ್‌ಲೈನ್‌ ಸಂಸ್ಥೆಯ ಕಾರ್ಯದರ್ಶಿ ಅನಿಲ್‌ ಬಾರಂಗಳ್‌, ಎಂ.ಜಿ. ಶ್ರೀಕಾಂತ್‌, ಪೃಥ್ವಿರಾಜ ಬಾದಾಮಿ, ಮಾಧವ ಪದಕಿ, ಗೋಪಾಲ ಕೃಷ್ಣ, ನಟರಾಜ, ರಂಜಿತ್‌, ಮಾಧವಿ, ಉಪನ್ಯಾಸಕ ಕೊಟ್ರೇಶ, ಡಾ| ಚಂದ್ರಶೇಖರ ಸುಂಕದ ಇತರರು ಇದ್ದರು.

ಗುಂಡಿ ಮಹದೇವಪ್ಪ ವೃತ್ತದಿಂದ ಪ್ರಾರಂಭವಾದ ಮ್ಯಾರಥಾನ್‌ ವಿದ್ಯಾರ್ಥಿಭವನ, ಅಂಬೇಡ್ಕರ್‌ ಸರ್ಕಲ್‌, ಹಳೇ ಕೋರ್ಟ್‌ ರಸ್ತೆ, ಮಹಾನಗರ ಪಾಲಿಕೆ ಮುಂಭಾಗ, ಗಾಂಧಿ  ಸರ್ಕಲ್‌ ಮೂಲಕ ಜಯದೇವ ವೃತ್ತದಲ್ಲಿ ಕೊನೆಗೊಂಡಿತು.

Advertisement

ಓದಿ: ಬಣ್ಣಾರಿ ಕಾರ್ಖಾನೆ-ಲಾರಿ ಮಾಲಿಕರ ಸಂಘರ್ಷ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next