ಮೊಳಕಾಲ್ಮೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಜಿಲ್ಲಾಧಿ ಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮಕ್ಕೆ ಸಮಸ್ಯೆಗಳ ಮಹಾಪೂರವೇ ಹರಿದು ಬಂತು. ವಾಸ್ತವ್ಯ ಕಾರ್ಯಕ್ರಮದ ವೇದಿಕೆಯಲ್ಲೇ ವಸತಿ ರಹಿತ ಮೂರು ಜನರಿಗೆ ತಕ್ಷಣ ಆಶ್ರಯ ಮನೆ ಮಂಜೂರು ಮಾಡುವಂತೆ ಜಿಲ್ಲಾ ಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು. ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮ ಕಣಕುಪ್ಪೆಯಲ್ಲಿ ಶನಿವಾರ ಜಿಲ್ಲಾ ಕಾರಿ ಕವಿತಾ ಎಸ್. ಮನ್ನಿಕೇರಿ ಇಡೀ ದಿನ ಗ್ರಾಮದಲ್ಲಿದ್ದು, ಜನರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಒಟ್ಟು 14 ಅರ್ಜಿಗಳು ಸ್ವೀಕೃತಗೊಂಡವು. ಇದರಲ್ಲಿ 2 ಕಂದಾಯ ಇಲಾಖೆ, 12 ಇತರೆ ಇಲಾಖೆಯ ಅರ್ಜಿಗಳಾಗಿವೆ. ಸಾಮಾಜಿಕ ಭದ್ರತಾ ಯೋಜನೆಗೆ
ಸಂಬಂಧಿಸಿ 9 ಅರ್ಜಿ ಸಲ್ಲಿಕೆಯಾಗಿದ್ದವು.
ಕಣಕುಪ್ಪೆ ಗ್ರಾಮದ ನಿವಾಸಿಗಳಾದ ಗುಡಿಸಲು ಮನೆಯಲ್ಲಿ ವಾಸವಾಗಿರುವ ಭಾಗ್ಯಮ್ಮ ಮತ್ತು ನಾಗೇಂದ್ರ ದಂಪತಿಗಳಿಗೆ ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣ ಮಂಜೂರು ಮಾಡಿಕೊಡುವಂತೆ ಅ ಧಿಕಾರಿಗಳಿಗೆ ಸೂಚಿಸಿದರು. ಗ್ರಾಮಕ್ಕೆ ಶೀಘ್ರದಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ಅ ಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೇ ಸಾರಿಗೆ ಸಂಪರ್ಕ ಕಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಕಣಕುಪ್ಪೆಯಲ್ಲಿ ಸಲ್ಲಿಕೆಯಾದ ಅಹವಾಲುಗಳೇನು?: ಕಣಕುಪ್ಪೆ ಗ್ರಾಮಕ್ಕೆ ಪ್ರೌಢಶಾಲೆ, ಕರಡಿಹಳ್ಳಿ-ಕಣಕುಪ್ಟೆ ಮಾರ್ಗವಾಗಿ ಆಂಧ್ರದ ಜಾಜರಕಲ್ಲುವರೆಗೆ ರಸ್ತೆ, ಆಂಧ್ರದ ಹೊಸಗುಡ್ಡ-ಪುಲಕುರ್ತಿ-ಶೋಕೊಳವರೆಗೆ ಮತ್ತೂಂದು ರಸ್ತೆ. ಸಮುದಾಯ ಭವನ ನಿರ್ಮಾಣ, ಮಹಿಳೆ ಮತ್ತು ಪುರುಷರಿಗೆ ಶೌಚಾಲಯ ನಿರ್ಮಾಣಕ್ಕೆ ಅಹವಾಲು ಸಲ್ಲಿಸಿದರು. ಕೆರೆಯ ಹೂಳು ತೆಗೆಯುವುದು, ಜಾನುವಾರುಗಳಿಗೆ ನೀರಿನ ವ್ಯವಸ್ಥೆ, ರಂಗಮಂದಿರ, ಸಾರಿಗೆ, ಚರಂಡಿ ವ್ಯವಸ್ಥೆ, ಗ್ರಾಮದ ಐತಿಹಾಸಿಕ ಓಬಳಾ ನರಸಿಂಹಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ, ಜಾನುವಾರುಗಳಿಗೆ ಖಾಯಂ ಗೋಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, 55 ಆಶ್ರಯ ಮನೆ, 3 ಕೋಟಿ ವೆಚ್ಚದ ದೊಡ್ಡ ಚೆಕ್ ಡ್ಯಾಂ, ಕೆರೆಯ ಪಕ್ಕದಲ್ಲಿ 10 ಲಕ್ಷ ಲೀ. ಟ್ಯಾಂಕ್, ತುಂಗಭದ್ರ ಹಿನ್ನೀರು ಯೋಜನೆಗೆ ಸೇರಿಸುವುದು, ಬಡವರಿಗೆ 35 ಹೊಸ ಪಡಿತರ ಚೀಟಿ, ನ್ಯಾಯ ಬೆಲೆ ಅಂಗಡಿಗೆ ಮನವಿ ಮಾಡಿದರು.
5 ಹೈಮಾಸ್ಟ್ ಲೈಟ್, ರಾಷ್ಟ್ರೀಯ ಹೆದ್ದಾರಿ ಬಳಿ 10 ಲಕ್ಷ ರೂ. ವೆಚ್ಚದ ದ್ವಾರಬಾಗಿಲು, 50 ಲಕ್ಷ ರೂ. ವೆಚ್ಚದ ಪ್ರವಾಸಿ ಮಂದಿರ, 15 ಲಕ್ಷ ರೂ.
ವೆಚ್ಚದ ಗ್ರಂಥಾಲಯ, 25 ಲಕ್ಷ ವೆಚ್ಚದಲ್ಲಿ ಕಾರ್ಮಿಕ ಭವನ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಕಣಕುಪ್ಪೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಜನನಿ ಶಿಶು ಸುರಕ್ಷಾ ಯೋಜನೆಯಡಿ ಗರ್ಭಿಣಿಯರಿಗೆ ಜಿಲ್ಲಾ ಕಾರಿ ಕವಿತಾ ಎಸ್, ಮನ್ನಿಕೇರಿ ಮತ್ತು ಎಸ್ಪಿ ಜಿ. ರಾಧಿ ಕಾ ಅವರು ಸೀಮಂತ ಮಾಡಿಸಿದರು. ಗ್ರಾಮದ ಇಬ್ಬರು ವಿಕಲಚೇತನ ಮಕ್ಕಳಿಗೆ ವ್ಹೀಲ್‌ಚೇರ್ ವಿತರಿಸಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿದರು.
ಮೊಳಕಾಲ್ಮೂರು ಪ್ರಭಾರಿ ತಹಶೀಲ್ದಾರ್ ಆನಂದ ಮೂರ್ತಿ, ಇಒ ಪ್ರಕಾಶ್ ನಾಯ್ಕ, ತಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಗುರುಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಕ ರಾಜಾ ನಾಯ್ಕ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅ ಧಿಕಾರಿಗಳು ಉಪಸ್ಥಿತರಿದ್ದರು.
ಓದಿ :
ಜನರ ಸಂಕಷ್ಟ ನಿವಾರಣೆ ಗ್ರಾಮ ವಾಸ್ತವ್ಯ ಉದ್ದೇಶ