ತಾಲೂಕಿನ ದುರ್ವಿಗೆರೆ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ”ಸರ್ಕಾರದ ನಡೆ-ಹಳ್ಳಿಯ ಕಡೆ’ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
Advertisement
ಯಾವ ಗ್ರಾಮವೂ ಮೂಲ ಸೌಕರ್ಯಗಳಿಂದವಂಚಿತವಾಗಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರವೇ ನೇರವಾಗಿ ಗ್ರಾಮಗಳಿಗೆಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೌಲಭ್ಯಗಳನ್ನು ನೀಡುವಂತಹವಿನೂತನ ಕಾರ್ಯಕ್ರಮ ಇದಾಗಿದೆ. ಗ್ರಾಮೀಣ ಪ್ರದೇಶದ ಎಷ್ಟೋ ಜನರು ಸರ್ಕಾರದಸೌಲಭ್ಯಗಳನ್ನು ಬಳಸಿಕೊಳ್ಳದೆ ವಂಚಿತರಾಗಿದ್ದಾರೆ. ಯಾರಿಗೆ ಸರ್ಕಾರದ ಸೌಲಭ್ಯಸಿಕ್ಕಿಲ್ಲವೋ ಅಂತಹವರನ್ನು ಗುರುತಿಸಿ ಸೌಲಭ್ಯ ಒದಗಿಸಲಿದ್ದಾರೆ ಎಂದರು. ದುರ್ವಿಗೆರೆಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗಳಿಗೆ ನಲ್ಲಿ ಸಂಪರ್ಕ ಕೊಡಿಸಲು 1.62ಕೋಟಿ ರೂ. ಹಾಗೂ ಶಾಲಾ ಕೊಠಡಿ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 27 ಲಕ್ಷ ರೂ.ಮಂಜೂರು ಮಾಡಲಾಗಿದೆ. ಗ್ರಾಮದಲ್ಲಿ ಬೆಸ್ಕಾಂನಿಂದ ಹಳೆಯ ವಿದ್ಯುತ್ ಕಂಬಗಳನ್ನುತೆರವುಗೊಳಿಸಿ ಹೊಸ ವಿದ್ಯುತ್ ಕಂಬ ಹಾಗೂ ಲೈನ್‌ಗಳನ್ನು ಹಾಕಿಸಲಾಗುವುದು ಎಂದುತಿಳಿಸಿದರು. ತಹಶೀಲ್ದಾರ್ ಪಟ್ಟರಾಜ ಗೌಡ ದುರ್ವಿಗೆರೆ ಗ್ರಾಪಂ ಅಧ್ಯಕ್ಷ ತಿಪ್ಪೇಶ್ ನಾಯ್ಕಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಕವಿತಾ ಕಲ್ಲೇಶ್, ಉಪಾಧ್ಯಕ್ಷೆ ಚಂದ್ರಮ್ಮ ರುದ್ರಪ್ಪ,ಜಿಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಇಒ ಪ್ರಕಾಶ್ ಇತರರು ಇದ್ದರು.