Advertisement

ಒಳಮೀಸಲಿಗಾಗಿ ಪಾದಯಾತ್ರೆ

04:07 PM Feb 19, 2021 | |

ಹರಿಹರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಮತ್ತಿತರೆ ಸಮುದಾಯಗಳಿಗೆ ಒಳಮೀಸಲಾತಿ ನೀಡುವಂತೆ ಆಗ್ರಹಿಸಿ ಮಾ. 25 ರಂದು ಹರಿಹರದಿಂದ ರಾಜಧಾನಿಗೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದು, ಏ. 21 ರಂದು ಬೆಂಗಳೂರಿನ
ಅರಮನೆ ಮೈದಾನದಲ್ಲಿ ಸಮಾರೋಪ ನಡೆಯಲಿದೆ ಎಂದು ಹಿರಿಯೂರು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ ಘೋಷಿಸಿದ್ದಾರೆ.

Advertisement

ನಗರ ಹೊರವಲಯದ ಪ್ರೊ| ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಅಶ್ಪೃಶ್ಯ ಸಮುದಾಯಗಳ ಮಠಾಧಿಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು. ಒಳಮೀಸಲಾತಿ ಅಗತ್ಯವಿರುವ ಎಲ್ಲಾ ಅಸ್ಪಶ್ಯ ಸಮುದಾಯಗಳ ಮಠಾಧಿಧೀಶರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಶೋಷಿತರಿಗೆ ನ್ಯಾಯ ಕಲ್ಪಿಸಲು ತಳ ಸಮುದಾಯದ ಎಲ್ಲಾ ಮಠಾಧಿಧೀಶರು ಹಾಗೂ ಮುಖಂಡರು, ಹಿರಿಯರು ನಿಶ್ಚಯ ಮಾಡಿದ್ದೇವೆ. ಪಾದಯಾತ್ರೆ ನಂತರವೂ ಸರ್ಕಾರ ನ್ಯಾಯ ಒದಗಿಸದಿದ್ದರೆ ಮುಂದೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು. ಏನೇ ವ್ಯತ್ಯಾಸವಾದರೂ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಐಮಂಗಲದ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ಎರಡು ದಶಕಗಳಿಂದ
ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬರಲಾಗಿದೆ. ಆದರೆ ಆಡಳಿತದಲ್ಲಿರುವವರು ಮೂಗಿಗೆ ತುಪ್ಪ ಹಚ್ಚುತ್ತಾ ಬಂದಿದ್ದಾರೆ ಎಂದು
ದೂರಿದರು.

ಕಲಘಟಗಿ ಬೀರವಳ್ಳಿ ಗುರುದೇವ ತಪೋವನದ ಗುರುಮಾತೆ ನಂದಾತಾಯಿ ಮಾತನಾಡಿ, ಈ ಪಾದಯಾತ್ರೆ ಅಂತಿಮ ಹೋರಾಟವಾಗಬೇಕು.
ಶಾಂತಿಯಿಂದ ನ್ಯಾಯ ಸಿಗದಿದ್ದರೆ ಕ್ರಾಂತಿಯ ಮಾರ್ಗವನ್ನೂ ಅನುಸರಿಸಬೇಕಾಗುತ್ತದೆ ಎಂದರು.

Advertisement

ಮುಖಂಡ ಟಿ.ಡಿ. ರಾಜಗಿರಿ ಮಾತನಾಡಿ, ತಳ ಸಮುದಾಯದ ಕೆಲ ನಾಯಕರು ಆಡಳಿತಗಾರರ ಭಟ್ಟಂಗಿಗಳಾಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಳ ಸಮುದಾಯದ ಜನರು ಜಾಗೃತರಾಗಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಶ್ರೀಗಳ ನೇತೃತ್ವದಲ್ಲಿ ಆರಂಭವಾಗುವ ಪಾದಯಾತ್ರೆ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ವಿವಿಧ ತಳ ಸಮುದಾಯಗಳ ಮುಖಂಡರಾದ ಮುತ್ತಣ್ಣ ಬೆಣ್ಣೂರ್‌, ಸಂತೋಷ್‌ ಸವಣೂರು, ಚನ್ನಗಿರಿಯ ಎಂ.ಕೆ. ನಾಗಪ್ಪ, ತಾಪಂ ಅಧ್ಯಕ್ಷೆ
ಶ್ರೀದೇವಿ ಮಂಜಪ್ಪ, ದಸಂಸ ಮುಖಂಡರಾದ ಎಚ್‌. ಮಲ್ಲೇಶ್‌, ಪಿ.ಜೆ. ಮಹಾಂತೇಶ್‌, ನಗರಸಭೆ ಮಾಜಿ ಅಧ್ಯಕ್ಷ ಕೆ. ಮರಿದೇವ, ಎಲ್‌.ಬಿ. ಹನುಮಂತಪ್ಪ, ಸುಭಾಷ್‌ಚಂದ್ರ ಬೋಸ್‌, ಎಚ್‌. ನಿಜಗುಣ, ಎಲ್‌. ನಿರಂಜನಮೂರ್ತಿ, ಎ.ಕೆ. ಶಿವರಾಮ್‌, ಡಿ. ಹನುಮಂತಪ್ಪ, ಆರ್‌. ಮಂಜಪ್ಪ, ಕೆ. ಜೈಮುನಿ, ವಿಶ್ವನಾಥ್‌ ಮೈಲಾಳ್‌ ಇತರರು ಇದ್ದರು.

ಓದಿ : ಸರ್ಕಾರಿ  ಶಾಲೆಗಳಲ್ಲಿ ಮೂಲಸೌಕರ್ಯ: ಸಮಗ್ರ ವರದಿ ಕೇಳಿದ ಹೈಕೋರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next