Advertisement

ಜನಸ್ಪಂದನ ಸಭೆಯಲ್ಲಿ 52 ಅರ್ಜಿ ಸಲ್ಲಿಕೆ

03:07 PM Feb 19, 2021 | Team Udayavani |

ದಾವಣಗೆರೆ: ಕೊರೊನಾ ಕಾರಣದಿಂದ ಒಂದು ವರ್ಷದ·ನಂತರ ಗುರುವಾರ ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳಪದಾಧಿಕಾರಿಗಳಿಂದ 52 ಅರ್ಜಿಗಳು ಸಲ್ಲಿಕೆಯಾದವು.
ನಿಷೇಧದ ನಡುವೆಯೂ ಹೆಚ್ಚಾಗಿರುವ ಪ್ಲಾಸ್ಟಿಕ್‌ಬಳಕೆ ತಡೆ, ಅಂಚೆ ಕಚೇರಿ ಪುನಾರಂಭ, ಜಾಗಒತ್ತುವರಿ, ಅಕ್ರಮ ಕಟ್ಟಡ ತೆರವು, ಜಮೀನು, ಜಾಗದವಿವಾದ ಬಗೆಹರಿಸುವಿಕೆ, ಸಾಲ ಸೌಲಭ್ಯ, ಆಶ್ರಯಮನೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಧನಸಹಾಯ, ಉದ್ಯೋಗ ಒದಗಿಸುವುದು ಸೇರಿಂತೆವಿವಿಧ ಅರ್ಜಿಗಳನ್ನು ಸಲ್ಲಿಸಲಾಯಿತು.ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ದೇವರಮನೆ, ನಿಷೇಧದ ನಡುವೆಯೂ ಹೆಚ್ಚಾಗಿರುವಪ್ಲಾಸ್ಟಿಕ್‌ ಬಳಕೆ ತಡೆಗೆ ಜಿಲ್ಲಾಡಳಿತ ಕ್ರಮತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದುಜಿಲ್ಲಾಧಿಕಾರಿ ತಿಳಿಸಿದರು.

Advertisement

ಎಸ್‌. ನಿಜಲಿಂಗಪ್ಪ ಬಡಾವಣೆಯಲ್ಲಿದ್ದ ಅಂಚೆ ಕಚೇರಿಸ್ಥಳಾಂತರದಿಂದ ಸಾರ್ವಜನಿಕರು, ಪಿಂಚಣಿದಾರರಿಗೆತೊಂದರೆ ಆಗುತ್ತಿದೆ. ಬಡಾವಣೆಯಲ್ಲಿ ಅಂಚೆಕಚೇರಿ ಪುನಾರಂಭಿಸಬೇಕು. ಎಂಸಿಸಿ ಬಿ ಬ್ಲಾಕ್‌ನರಸ್ತೆಯಲ್ಲಿ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಮಾಡಿರುವುದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆಎಂದು ನಾಗರಿಕ ಹಿತ ರಕ್ಷಣಾ ಸಮಿತಿಯ ಡಿ.ಎಸ್‌.ಸಿದ್ದಪ್ಪ ತಿಳಿಸಿದರು.

ಸೂಕ್ತ ಕ್ರಮ ತೆಗೆದುಕೊಳ್ಳುವಂತೆಜಿಲ್ಲಾಧಿಕಾರಿ ನಗರಪಾಲಿಕೆ ಆಯುಕ್ತರಿಗೆ ಸೂಚನೆನೀಡಿದರು. ದಾವಣಗೆರೆ ತಹಶೀಲ್ದಾರ್‌ ಕಚೇರಿಯಲ್ಲಿವೃದ್ದಾಪ್ಯ ವೇತನದ ಅರ್ಜಿ ಪಡೆಯುತ್ತಿಲ್ಲ ಎಂದುಮಲ್ಲಿಕಾರ್ಜುನ ಇಂಗಳೇಶ್ವರ ಆಕ್ಷೇಪಿಸಿದರು.ಯಾವುದೇ ಮಾಹಿತಿ ನೀಡದೆ ತಹಶೀಲ್ದಾರ್‌ ಕಚೇರಿಗೆಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌ಗೆಜಿಲ್ಲಾಧಿಕಾರಿ ಸೂಚಿಸಿದರು.

ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಸರ್ವೆ ನಂಬರ್‌ 79 ಜಮೀನು ವಿವಾದ ಇದೆ.ತಮ್ಮ ಅಜ್ಜಿ ಅನ್ನ, ನೀರು ಬಿಟ್ಟಿದ್ದಾರೆ. ಇದೇ ಪರಿಸ್ಥಿತಿ
ಮುಂದುವರೆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.ನ್ಯಾಯ ಒದಗಿಸಬೇಕು ಎಂದು ಮಹಿಳೆಯರು ಮನವಿ
ಮಾಡಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ,ತಹಶೀಲ್ದಾರ್‌, ಉಪ ವಿಭಾಗಾಧಿಕಾರಿಗಳಸಮಕ್ಷಮದಲ್ಲಿ ಎರಡು ಕುಟುಂಬದ ಅಹವಾಲು ಆಲಿಸಿಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಹೊನ್ನಾಳಿ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಸ್ಥಳಕ್ಕೆಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಸೂಚನೆ ನೀಡಿದರು.

ದಾವಣಗೆರೆಯ ಶಿವನಗರ ಶಬೀನಾ ಎಂಬುವರು,ನಕಲಿ ದಾಖಲೆ ಇಟ್ಟುಕೊಂಡು ತಮ್ಮನ್ನೇ ಮನೆಯಿಂದಹೊರ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಸೂಕ್ತರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದವೀರಾಚಾರ್‌, ಹೂವಿನ ಗಿಡ ನೀಡುವ ಮೂಲಕವನಮಹೋತ್ಸವಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿಮಾಡಿದರು. ಎಂಸಿಸಿ ಬಿ ಬ್ಲಾಕ್‌ನ ಕನ್ನಡ ವನದನಿರ್ವಹಣೆ ಜವಾಬ್ದಾರಿ ವಹಿಸಿಕೊಡಬೇಕು ಎಂದುಕರುನಾಡ ಕನ್ನಡ ಸೇನೆಯ ಕೆ.ಟಿ. ಗೋಪಾಲ ಗೌಡಕೋರಿದರು.

Advertisement

ಹೊನ್ನಾಳಿ ತಾಲೂಕಿನ ಹೊಳೆ ಮಾದಾಪುರದಲ್ಲಿಖಾಲಿ ಜಾಗವನ್ನು ಸರ್ಕಾರಿ ಶಾಲೆಗೆ ಮೀಸಲಿಡಬೇಕುಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.ದಲಿತ ಸಂಘಟನೆಗಳ ಒಕ್ಕೂಟದ ಸಿ. ಬಸವರಾಜ್‌,ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ರವರ ಕಂಚಿನಪ್ರತಿಮೆ ಸ್ಥಾಪಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ,ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾಟ್‌
ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರಮಲ್ಲಾಪುರ, ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕಿ ಜಿ. ನಜ್ಮಾ ಇತರೆ ಜಿಲ್ಲಾ ಮಟ್ಟದಅಧಿಕಾರಿಗಳು ಇದ್ದರು.

ಓದಿ :·ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್

Advertisement

Udayavani is now on Telegram. Click here to join our channel and stay updated with the latest news.

Next