Advertisement

ಪಕ್ಷಾತೀತವಾಗಿ ಗ್ರಾಮಾಭಿವೃದ್ಧಿಗೆ ಶ್ರಮಿಸಿ: ಗಂಗಾಧರಮೂರ್ತಿ

03:48 PM Feb 18, 2021 | Team Udayavani |

ಹೊನ್ನಾಳಿ: ಗ್ರಾಮ ಸರ್ಕಾರದಲ್ಲಿ ಗ್ರಾಪಂ ಸದಸ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗಿಲ್ಲದ ಅಧಿಕಾರ ನಿಮಗೆ ಇದ್ದು, ಗ್ರಾಮದ ಅಭಿವೃದ್ಧಿಗೆ ಅ ಧಿಕಾರ ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಎಲ್‌. ಗಂಗಾಧರಮೂರ್ತಿ ಕರೆ ನೀಡಿದರು.

Advertisement

ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಆಯೋಜಿಸಿದ್ದ ಗ್ರಾಪಂ ಚುನಾಯಿತ ಪ್ರತಿನಿ ಧಿಗಳ ಸಾಮರ್ಥ್ಯಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಐದು ವರ್ಷಗಳ ಕಾಲ ಗ್ರಾಮಾವೃದ್ಧಿಗೆ ಕಾರ್ಯನಿರ್ವಹಿಸಲು ಸನ್ನದ್ಧರಾಗಬೇಕು. ಗ್ರಾಪಂ ಚುನಾವಣೆ ಪಕ್ಷ ರಹಿತವಾದುದು. ಇಂತಹ ಚುನಾವಣೆಯಲ್ಲಿ ಗೆದ್ದು ಬಂದಿರುವ ನೀವು ಪಕ್ಷಾತೀತವಾಗಿ ಕೆಲಸ ಮಾಡಬೇಕು ಹಾಗೂ ಎಲ್ಲೂ ತಾರತಮ್ಯ ನೀತಿ ಅನುಸರಿಸಬಾರದು ಎಂದರು.

ಗ್ರಾಮ ಪಂಚಾಯತ್‌ ಅಧಿ ನಿಯಮದಲ್ಲಿರುವಂತೆ ದುರ್ಬಲ ವರ್ಗದವರಿಗೆ ನೆರವಿನ ಹಸ್ತ ಚಾಚಬೇಕಿದೆ. ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಸೇವೆಗಳನ್ನು ಒದಗಿಸುವ ಪುಣ್ಯದ ಕೆಲಸ ನಿಮ್ಮಿಂದ ಆಗಬೇಕಾಗಿರುವುದರಿಂದ ನಿಮ್ಮ ಸೇವೆ ಅರ್ಹ ಫಲಾನುಭವಿಗಳ ಕಡೆ ಇರಲಿ. ಅ ಧಿಕಾರ ವಿಕೇಂದ್ರಿಕರಣದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡು ಕೆಲಸ ಮಾಡಬೇಕು. ನೂತನವಾಗಿ ಆಯ್ಕೆಯಾಗಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದೇ ಇರುತ್ತದೆ. ತಮ್ಮ ಅಪಾರ ಅನುಭವವನ್ನು ಗ್ರಾಮಾಭಿವೃದ್ಧಿಗೆ ಮೀಸಲಿಡಿ. ಆಗ ನಿಮ್ಮನ್ನು ಆಯ್ಕೆ ಮಾಡಿದ ಮತದಾರರ ಋಣ ತೀರಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಿಡಿಪಿಒ ಮಹಾಂತೇಶ ಪೂಜಾರ್‌ ಮಾತನಾಡಿ, ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಈಗ ಆಯ್ಕೆಯಾಗಿರುವ ಬಹುತೇಕರು ವಿದ್ಯಾವಂತರೇ ಆಗಿರುವುದರಿಂದ ನೀವು ನಿಮ್ಮ ನಿಮ್ಮ ವಾರ್ಡಿನಲ್ಲಿ ಏನು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆಯೋ ಅದನ್ನೆಲ್ಲ ಪಟ್ಟಿ ಮಾಡಿ. ಪಿಡಿಒ ಬಳಿ ಚರ್ಚಿಸಿ ಅಭಿವೃದ್ಧಿಗೆ ಚಾಲನೆ ನೀಡಿ ಎಂದರು.

ತಾಪಂ ಸಂಯೋಜನಾಧಿಕಾರಿ ರಾಘವೇಂದ್ರ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್‌. ರುದ್ರಪ್ಪ, ಅರಬಗಟ್ಟೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ದಿಡಗೂರು-ಹರಳಹಳ್ಳಿ ಗ್ರಾಪಂ ಅಧ್ಯಕ್ಷೆ ನಿರ್ಮಲಾ, ಅರಕೆರೆ ಗ್ರಾಪಂ ಅಧ್ಯಕ್ಷ ರಂಗಪ್ಪ, ಹನುಮಸಾಗರ ಗ್ರಾಪಂ ಅಧ್ಯಕ್ಷೆ
ಬಸಮ್ಮ, ವ್ಯವಸ್ಥಾಪಕರಾದ ಶಂಭುಲಿಂಗಯ್ಯ, ರಫೀಕ್‌, ಸಂಪನ್ಮೂಲ ವ್ಯಕ್ತಿಗಳಾದ ಉಮಾಓಂಕಾರ್‌, ಹೇಮಲತಾ ಭೋಜರಾಜ್‌ ಇದ್ದರು.

Advertisement

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement

Udayavani is now on Telegram. Click here to join our channel and stay updated with the latest news.

Next