Advertisement

ಹುಣಸಘಟ್ಟ ಗ್ರಾಪಂನಲ್ಲಿ ಬಿಜೆಪಿ ಅಧಿಕಾರಕ್ಕೆ : ರೇಣು

03:48 PM Feb 08, 2021 | Team Udayavani |

ಹೊನ್ನಾಳಿ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಾಲೂಕಿನ ಹುಣಸಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಅ ಧಿಕಾರದ ಚುಕ್ಕಾಣಿ ಹಿಡಿದಿದೆ. ಅದೇ ರೀತಿ ಅವಳಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಹುಣಸಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು-ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು. ಹುಣಸಘಟ್ಟ ಗ್ರಾಪಂನಲ್ಲಿ 12 ಜನ ಸದಸ್ಯರ ಬಲಾಬಲವಿದ್ದು, ಅದರಲ್ಲಿ ಎಂಟು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದರೆ, ನಾಲ್ಕು ಸ್ಥಾನ ಕಾಂಗ್ರೆಸ್‌ ಬೆಂಬಲಿಗರು ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅ ಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು.

ಗ್ರಾಪಂ ನೂತನ ಅಧ್ಯಕ್ಷೆ ರತ್ನಮ್ಮ ಬಸಪ್ಪ, ಉಪಾಧ್ಯಕ್ಷೆ ಪರ್‌ವೀನ್‌ ಬಾನು ಅಮಾನುಲ್ಲಾ, ಬೆನಕನಹಳ್ಳಿ ಗ್ರಾಪಂ ಸದಸ್ಯ ಎ.ಜಿ. ಮಹೇಂದ್ರ ಗೌಡ, ಎಪಿಎಂಸಿ ಸದಸ್ಯ ಜಿ.ವಿ. ರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌, ಕಾಡಾ ಸದಸ್ಯರಾದ ಹನುಮಂತಪ್ಪ, ಮುಖಂಡರಾದ
ಅರಕೆರೆ ನಾಗರಾಜ್‌, ಮಲ್ಲಿಕಾರ್ಜುನ್‌, ಅಂಬ್ಲೇರ ಚಂದ್ರಣ್ಣ ಇದ್ದರು. ನಂತರ ಕ್ಯಾಸಿನಕರೆ ಗ್ರಾಮಪಂಚಾಯಿತಿಗೆ ಭೇಟಿ ನೀಡಿದ ಶಾಸಕರು, ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಧ್ಯಕ್ಷರು ಉಪಾಧ್ಯಕ್ಷರು, ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

 

ಓದಿ: ಜೆಡಿಎಸ್‌ನಲ್ಲಿ ಭಿನ್ನ ಮತ: ನಾಗಮಂಗಲಕ್ಕಾಗಿ ಪೈಪೋಟಿ 

Advertisement

 

Advertisement

Udayavani is now on Telegram. Click here to join our channel and stay updated with the latest news.

Next