Advertisement

ಕೇರಳ ಟು ಮೂಡಿಗೆರೆ: 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು!

05:07 PM Jan 04, 2022 | Team Udayavani |

ಚಿಕ್ಕಮಗಳೂರು: ತನ್ನ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದ ಮಗಳು 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಘಟನೆ ಚಿಕ್ಕಮಗಳೂರಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.

Advertisement

ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಅಂಜಲಿ 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದರು. ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬವರೊಂದಿಗೆ ವಿವಾಹವಾಗಿದ್ದರು.

ಇದನ್ನೂ ಓದಿ:ಕೃಷಿ ಸಾಧಕಿ ಸುಮಂಗಲಮ್ಮ; ಹೆಂಗಸರು ಟ್ರ್ಯಾಕ್ಟರ್‌ ಓಡಿಸುತ್ತಾರಾ?

ಕಳೆದ 3 ವರ್ಷದಿಂದ ಅಂಜಲಿ ಅವರು ಪತಿಯೊಂದಿಗೆ ಸೇರಿ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳೂರಿನ ಫಿಶ್‌ ಮೋಣು, ಮುಸ್ತಾಫರ ಬಳಿ ಈ ಬಗ್ಗೆ ವಿಚಾರಿಸಿದ್ದರು.

Advertisement

ಮೂಡಿಗೆರೆ ಸುತ್ತಮುತ್ತ ಅಂಜಲಿ ತಾಯಿಗಾಗಿ ಹುಡಕಾಟ ನಡೆಸಲಾಗಿದ್ದು, ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ‌ ಅಂಜಲಿ ತಾಯಿ ಪತ್ತೆಯಾಗಿದ್ದರು. ಇಂದು 22 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಅಂಜಲಿ ತಬ್ಬಿ ಕಣ್ಣೀರಿಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next