ಮುಂಬೈ: ಕಳೆದ ಬಾರಿ ಕೋವಿಡ್ 19 ಸೋಂಕಿನ ಕಾರಣದಿಂದ ರದ್ದಾಗಿದ್ದ ರಣಜಿ ಟ್ರೋಫಿಯನ್ನು ಈ ಬಾರಿ ನಡೆಸಲು ಬಿಸಿಸಿಐ ಸಜ್ಜಾಗಿದೆ. ರಣಜಿ ಟ್ರೋಪಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿಗಳ ದಿನಾಂಕ ಪ್ರಕಟಿಸಲಾಗಿದೆ.
2021-22ರ ಸಾಲಿನ ರಣಜಿ ಟ್ರೋಪಿ ಕೂಟ ಜನವರಿ 5ರಿಂದ ಮಾರ್ಚ್ 20ರವರೆಗೆ ನಡೆಯಲಿದೆ. ಟಿ20 ಕೂಟವಾದ ಸಯ್ಯದ್ ಮುಷ್ತಾಕ್ ಅಲಿ ಕೂಟ ಅಕ್ಟೋಬರ್ 27ರಿಂದ ಆರಂಭವಾಗಲಿದೆ. ಪ್ರಮುಖ ಆಟಗಾರರ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಐಪಿಎಲ್ ಮುಗಿದ ಬಳಿಕ ಈ ಕೂಟವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ:ಮತ್ತೊಂದು ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದ ಮಾಹಿ..!
ವಿಜಯ್ ಹಜಾರೆ ಟ್ರೋಫಿ ಕೂಟವನ್ನು ಡಿಸೆಂಬರ್ 1ರಿಂದ 29ರವರಗೆ ನಡೆಯಲಾಗುವುದು. ವನಿತೆಯರ ನ್ಯಾಶನಲ್ ಏಕದಿನ ಕೂಟ ಅ.20ರಿಂದ ನ.20ರವರೆಗೆ ನಡೆಯಲಿದೆ. ತಲಾ ಆರು ತಂಡಗಳೊಂದಿಗೆ ಐದು ಎಲೈಟ್ ಗುಂಪುಗಳು ಮತ್ತು ಎಂಟು ತಂಡಗಳೊಂದಿಗೆ ಒಂದು ಪ್ಲೇಟ್ ಗುಂಪು ಇರುತ್ತದೆ.
ಪುರುಷರ ಪಂದ್ಯಾವಳಿಗಳಿಗೆ (ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ) 38 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ.