Advertisement

ದತ್ತಾಂಶ ಸಂಗ್ರಹ: ಕಮಾಂಡ್‌-ನಿಯಂತ್ರಣ ಕೇಂದ್ರ ರಚನೆ

01:49 PM Apr 20, 2020 | Suhan S |

ಧಾರವಾಡ: ಕೋವಿಡ್ 19 ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ ದುರ್ಬಲ ಗುಂಪಿನಿಂದ ದತ್ತಾಂಶ ಸಂಗ್ರಹಿಸಲು ತಾಲೂಕು ಮಟ್ಟದಲ್ಲಿ ಆರೋಗ್ಯ ಕಮಾಂಡ್‌ ಕೇಂದ್ರ ಮತ್ತು ನಿಯಂತ್ರಣ ಕೇಂದ್ರ ರಚಿಸಲಾಗಿದೆ.

Advertisement

ಆರೋಗ್ಯ ಇಲಾಖೆ ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ನವಲಗುಂದ- ಹಮೀದಾ (9916846134) ಕುಂದಗೋಳ-ನೇತ್ರಾವತಿ (9986680590), ಕಲಘಟಗಿ-ಹೇಮರೆಡ್ಡಿ (9535772610),ಹುಬ್ಬಳ್ಳಿ-ಪ್ರಕಾಶ್‌ ಹಸಬಿ (9986057066) ಹಾಗೂ ನಾಗರಾಜ್‌ ಕೆಂದರಿನರಿ (8277511265) ಅವರನ್ನು ಆರೋಗ್ಯ ಕಮಾಂಡ್‌ ಕೇಂದ್ರ ಮತ್ತು ನಿಯಂತ್ರಣ ಕೇಂದ್ರದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪ್ರತಿ ತಾಲೂಕಿಗೆ ನಾಲ್ಕು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿದೆ.

ಈ ತಂಡಗಳು ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌, ಎಚ್‌ಐವಿ, ಟಿಬಿ, ಡಯಾಲಿಸಿಸ್‌ ಅಂಗಾಂಗ ಕಸಿ ಮತ್ತು ಗರ್ಭಿಣಿ ಮಹಿಳೆಯರಂತಹ ದುರ್ಬಲ ಗುಂಪಿನ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಚಿಕಿತ್ಸೆಗೆ ಏರ್ಪಾಡು ಮಾಡಬೇಕು. ಕೋವಿಡ್‌-19 ಸೋಂಕಿನ ರೋಗ ಲಕ್ಷಣ ಇರುವ ವ್ಯಕ್ತಿಗಳನ್ನು ಸಂಪರ್ಕಿಸಿ ಪ್ರತಿದಿನ ಪರೀಕ್ಷಿಸಲು ಮತ್ತು ಆರೋಗ್ಯ ಸೇತು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಪ್ರೋತ್ಸಾಹಿಸುವುದು, ಮಾಸ್ಟರ್‌ ಡೇಟಾ ಬೇಸ್‌ ನಿರ್ವಹಿಸುವುದು, ಜಿಲ್ಲಾ ನಿಯಂತ್ರಣ ಕೊಠಡಿಗೆ ತೀವ್ರ ಉಸಿರಾಟದ ತೊಂದರೆ ಮತ್ತು ಐಎಲ್‌ಐ ಪ್ರಕರಣಗಳ ಮಾಹಿತಿ ಒದಗಿಸುವುದು. ಜಿಲ್ಲಾ ನಿಯಂತ್ರಣ ಕೊಠಡಿಗೆ ದೈನಂದಿನ ಮಾಹಿತಿ ಸಲ್ಲಿಸಬೇಕು. ತಹಶೀಲ್ದಾರರು ಈ ಕೇಂದ್ರಗಳಿಗೆ ಪ್ರತ್ಯೇಕ ಕಚೇರಿ, ದೂರವಾಣಿ ಮಾರ್ಗಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ ಗಳು ಗ್ರೂಪ್‌-ಸಿ ಸಿಬ್ಬಂದಿ ಒದಗಿಸಬೇಕು. ಜಿಲ್ಲಾಧಿಕಾರಿಗಳು ಸೂಚಿಸುವ ಯಾವುದೇ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಗಳನ್ನು ನಿಯೋಜಿಸಿದ ಅಧಿಕಾರಿಗಳು ಹಾಗೂ ತಂಡದವರು ನಿರ್ವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಏ. 18-19ರಂದು ಎರಡು ದಿನಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 1100 ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಮಾಹಿತಿ ಪಡೆದು ಸಮೀಪದ ಆಸ್ಪತ್ರೆಗಳಲ್ಲಿ ದೊರೆಯುವ ಚಿಕಿತ್ಸೆ, ಕೋವಿಡ್ 19 ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ.  –ಡಾ| ತನುಜಾ ಕೆ.ಎನ್‌., ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next