Advertisement

ಡಾಟಾ ಸೈನ್ಸ್‌: ಆನ್‌ಲೈನ್‌ ಉಚಿತ ತರಬೇತಿ

05:03 PM Jun 06, 2020 | sudhir |

ಡಾಟಾ ಸೈನ್ಸ್‌ನಲ್ಲಿ ಕೋರ್ಸ್‌ ಮಾಡಲು ನೀವು ಉತ್ಸುಕರಾಗಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಉತ್ತಮ ಅವಕಾಶ.

Advertisement

ಮದ್ರಾಸ್‌ ಐಐಟಿಯ ಪ್ರಾಧ್ಯಾಪಕರಾದ ರಘುನಾಥನ್‌ ರೆಂಗಸಾಮಿ ಮತ್ತು ಶಂಕರ್‌ ನರಸಿಂಹನ್‌ ಅವರಿಂದ ಉಚಿತ ತರಬೇತಿ ಪಡೆಯುವ ಅವಕಾಶ ಇಲ್ಲಿದೆ.

ಡಾಟಾ ಸೈನ್ಸ್‌ ಬಗ್ಗೆ ಉಚಿತ ಆನ್‌ಲೈನ್‌ ಕೋರ್ಸ್‌ ಅನ್ನು ತಂತ್ರಜ್ಞಾನ ವರ್ಧಿತ ಕಲಿಕೆಯ (ಟೆಕ್ನಾಲಜಿ ಎಂಚಾನ್ಸ್‌ ಲರ್ನಿಂಗ್‌) ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಟಿಇಎಲ್)ದಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪೋರ್ಟಲ್‌ “ಸ್ವಯಂ’ನಲ್ಲಿ ನಡೆಸಲಾಗುವುದು.

ತರಬೇತುದಾರರ ಮಾಹಿತಿ
ಮದ್ರಾಸ್‌ ಐಐಟಿಗೆ ಸೇರುವ ಮೊದಲು ಪ್ರೊ| ರಘುನಾಥನ್‌ ರೆಂಗಸಾಮಿ ರಾಸಾಯನಿಕ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿದ್ದರು ಮತ್ತು ಅಮೆರಿಕದ ಲುಬ್ಟಾಕ್‌ನ ಟೆಕ್ಸಾಸ್‌ ಟೆಕ್‌ ವಿವಿಯಲ್ಲಿ ಪ್ರೊಸಸ್‌ ಕಂಟ್ರೋಲ್‌ ಆ್ಯಂಡ್‌ ಆಪ್ಟಿಮೈಸೇಶನ್‌ ಕನ್ಸೋರ್ಟಿಯಂನ ಸಹ ನಿರ್ದೇಶಕರಾಗಿದ್ದರು.

ಪ್ರೊ| ಶಂಕರ್‌ ನರಸಿಂಹನ್‌ ಅವರು ಸಹ-ಲೇಖಕರ ಪತ್ರಿಕೆ ಮತ್ತು “ಡಾಟಾ ರೀಕಾನ್ಸಿಲೇಶನ್‌ ಆ್ಯಂಡ್‌ ಗ್ರಾಸ್‌ ಎರ್ಗ ಡಿಟೆಕ್ಷನ್ ಎಂಬ ಪುಸ್ತಕ ರಚಿಸಿದ್ದಾರೆ.

Advertisement

ತರಬೇತಿಯ ಉದ್ದೇಶ
* “ಆರ್‌’ ಅನ್ನು ಪ್ರೋಗ್ರಾಮಿಂಗ್‌ ಭಾಷೆಯಾಗಿ ಪರಿಚಯಿಸುವುದು
* ಡಾಟಾ ಸೈನ್ಸ್‌ಗೆ ಅಗತ್ಯವಾದ ಗಣಿತದ ಅಡಿಪಾಯಗಳನ್ನು ಒದಗಿಸುವುದು.
* ಮೊದಲ ಹಂತದ ಡಾಟಾ ಸೈನ್ಸ್‌ ಕ್ರಮಾವಳಿಗಳನ್ನು ತಿಳಿಸುವುದು.
* ಡಾಟಾ ವಿಶ್ಲೇಷಣೆಯ ಸಮಸ್ಯೆ-ಪರಿಹರಿಸುವ ಚೌಕಟ್ಟು ಹೇಳಿಕೊಡುವುದು.
* ಪ್ರಾಯೋಗಿಕ ಕ್ಯಾಪ್ರೋನ್‌ ಕೇಸ್‌ ಸ್ಟಡಿಯನ್ನು ಪರಿಚಯಿಸುವುದು.

ಯಾರು ಇದರ ಲಾಭ ಪಡೆಯಬಹುದು?
ಡಾಟಾ ಸೈನ್ಸ್‌ ಬಗ್ಗೆ ಕಲಿಯಲು ಉತ್ಸುಕರಾಗಿರುವ ಯಾರು ಬೇಕಾದರು ಈ ಕೋರ್ಸ್‌ನ ಲಾಭ ಪಡೆಯಬಹುದಾಗಿದೆ. ಈ ಕೋರ್ಸ್‌ ಮುಂದುವರಿಸಲು ಉತ್ಸುಕರಾಗಿರುವವರು ವೆಬ್‌ಸೈಟ್‌ನಲ್ಲಿ ಲಭ್ಯವಿರುವ 10 ಗಂಟೆಗಳ ಪೂರಕ ಕೊರ್ಸ್‌ ಅನ್ನು ಪಡೆಯುವ ಮೂಲಕ ಮುಂದುವರಿಯಬೇಕಾಗುತ್ತದೆ.

ಎಂಟು ವಾರಗಳ ಅವಧಿಯ ಈ ಕೋರ್ಸ್‌ ಡಾಟಾ ಸೈನ್ಸ್‌ ವಿವಿಧ ಪರಿಕಲ್ಪನೆಗಳನ್ನು ಒಳಗೊಂಡಿದೆ. ಭಾಗವಹಿಸುವವರು ಕೋರ್ಸ್‌ ಪೂರ್ಣಗೊಳಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಲು ಬಯಸಿದರೆ, 1 ಸಾವಿರ ರೂ. ಪಾವತಿಸಿ ಪಡೆಯಬಹುದು.
ಪ್ರಮಾಣಪತ್ರ ಪಡೆಯ ಬಯಸುವ ಅಭ್ಯರ್ಥಿಗಳು ಒಟ್ಟು ಎಂಟು ನಿಯೋಜನೆ (ಪ್ರಾಜೆಕ್ಟ್ ವರ್ಕ)ಗಳಲ್ಲಿ ಕನಿಷ್ಠ 6ರಲ್ಲಿ ಶೇ. 25 ಅಂಕ ಪಡೆಯಬೇಕು ಮತ್ತು ಪ್ರಾಕ್ಟರೇಟೆಡ್‌ ಪ್ರಮಾಣೀಕರಣ ಪರೀಕ್ಷೆಯಲ್ಲಿ 100ರಲ್ಲಿ ಶೇ. 75 ಅಂಕಗಳನ್ನು ಪಡೆಯಬೇಕಾಗುತ್ತದೆ.

ಕೋರ್ಸ್‌ ನೋದಾವಣಿ ಹೇಗೆ?
ನೋಂದಾಯಿಸಲು ಕೊನೆಯ ದಿನಾಂಕ – 27 ಜುಲೈ 2020
ಕೋರ್ಸ್‌ ಪ್ರಾರಂಭವಾಗುವ ದಿನಾಂಕ – 20 ಜುಲೈ 2020
ಕೋರ್ಸ್‌ ಅಂತ್ಯದ ದಿನಾಂಕ – 11 ಸೆಪ್ಟೆಂಬರ್‌ 2020
ಪರೀಕ್ಷೆಗಳ ಪ್ರಾರಂಭ – 27 ಸೆಪ್ಟೆಂಬರ್‌ 2020 (ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ).

Advertisement

Udayavani is now on Telegram. Click here to join our channel and stay updated with the latest news.

Next