Advertisement

ಭಾರತದಲ್ಲಿ ಡೇಟಾ ಸೆಂಟರ್‌

01:43 AM Jul 22, 2019 | Team Udayavani |

ಹೊಸದಿಲ್ಲಿ: ಜನಪ್ರಿಯ ವಿಡಿಯೋ ಶೇರಿಂಗ್‌ ಆ್ಯಪ್‌ಗ್ಳಾಗಿರುವ ಟಿಕ್‌ಟಾಕ್‌ ಮತ್ತು ಹೆಲೋಗಳ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್‌ (ByteDance) ಭಾರತದಲ್ಲಿಯೇ ಡೇಟಾ ಸೆಂಟರ್‌ ಸ್ಥಾಪಿಸುವುದಾಗಿ ಹೇಳಿಕೊಂಡಿದೆ. ಎರಡೂ ಆ್ಯಪ್‌ಗ್ಳಿಗೆ ನಿಷೇಧ ಹೇರಬೇಕೆಂಬ ಒತ್ತಾಯ ಜೋರಾಗಿ ಕೇಳಿ ಬರುತ್ತಿರುವಂತೆಯೇ ಬೈಟ್ ಡ್ಯಾನ್ಸ್‌ ಈ ನಿರ್ಧಾರ ಕೈಗೊಂಡಿದೆ. ಭಾರತೀಯ ಬಳಕೆದಾರರಿಗಾಗಿಯೇ ಮಾಹಿತಿ ಸಂಗ್ರಹಣಾ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ. ನಮ್ಮ ಆ್ಯಪ್‌ಗ್ಳಿಗೆ ದೇಶದಲ್ಲಿ ಹೆಚ್ಚುತ್ತಿರುವ ಜನಪ್ರಿಯತೆ ಗಮನಿಸಿ ಈ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ. ಈ ಕಂಪೆನಿ ಅಮೆರಿಕ ಮತ್ತು ಸಿಂಗಾಪುರಗಳಲ್ಲಿ ಈಗಾಗಲೇ ಡೇಟಾ ಸೆಂಟರ್‌ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next