Advertisement

ಭಾರತದಲ್ಲೇ ಡೇಟಾ ಬ್ಯಾಂಕ್‌

12:31 AM Jun 28, 2019 | Team Udayavani |

ಹೊಸದಿಲ್ಲಿ: ಭಾರತೀಯರ ಹಣಕಾಸಿನ ಮಾಹಿತಿಗಳನ್ನು ದೇಶದಲ್ಲೇ ಸಂಗ್ರಹಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚಿಸಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ತನ್ನ ಪೇಮೆಂಟ್‌ ಸೇವೆಯ ಎಲ್ಲ ಡೇಟಾವನ್ನೂ ಭಾರತದಲ್ಲೇ ಸಂಗ್ರಹಿಸಲು ನಿರ್ಧರಿಸಿದೆ. ಶೀಘ್ರವೇ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ ಆ್ಯಪ್‌ ಪೇಮೆಂಟ್‌ ಬ್ಯುಸಿನೆಸ್‌ ಅನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಶುರು ಮಾಡಲಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಇದರಿಂದಾಗಿ ಆರ್‌ಬಿಐ ನೀತಿಗೆ ಮಹತ್ವದ ಜಯ ಸಿಕ್ಕಂತಾಗಿದೆ. ಆದರೆ, ವಿದೇಶಿ ಕಂಪೆನಿಗಳು ಈ ಬಗ್ಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದವು. ಈಗಾಗಲೇ ವಾಟ್ಸ್‌ಆ್ಯಪ್‌ ತನ್ನ ಪೇಮೆಂಟ್‌ ಸರ್ವೀಸ್‌ಗಾಗಿ ಐಸಿಐಸಿಐ ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆ್ಯಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್ಸಿ ಬ್ಯಾಂಕ್‌ ಮತ್ತು ಎಸ್‌ಬಿಐ ಮೂಲಕವೂ ಈ ಸೇವೆ ಸಿಗಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕಳೆದ ಫೆಬ್ರವರಿಯಲ್ಲೇ ಈ ಸೇವೆಯನ್ನು ಬಿಡು ಗಡೆಗೊಳಿಸಲು ನಿರ್ಧರಿಸಲಾಗಿ ತ್ತಾದರೂ ಹಲವು ಕಾರಣಗಳಿಂದ ಮುಂದೂಡಿತ್ತು. ಇದೇ ಸಮಯದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ಇತರ ವಿವಾದಗಳು ಎದ್ದಿದ್ದವು.

ಆರ್‌ಬಿಐ ನಿಯಮದ ಪ್ರಕಾರ ಕಂಪೆನಿ ಗಳು ಮೊದಲು ಭಾರತದಲ್ಲಿ ಡೇಟಾ ಸಂಗ್ರಹ ಘಟಕವನ್ನು ಸ್ಥಾಪಿಸಬೇಕು. ನಂತರ ಇದಕ್ಕೆ ಸಂಬಂಧಿಸಿದಂತೆ ಆಡಿಟ್‌ ವರದಿಯನ್ನು ಆರ್‌ಬಿಐಗೆ ಕಂಪೆನಿಯು ಸಲ್ಲಿಸಬೇಕು. ಕೇವಲ ನೋಂದಾಯಿತ ಆಡಿಟರ್‌ಗಳು ಡೇಟಾ ಸಂಗ್ರಹ ಘಟಕದ ಆಡಿಟ್‌ ನಡೆಸ ಬೇಕಿದೆ. ಈ ವರದಿಯನ್ನು ಆರ್‌ಬಿಐ ಪರಿಶೀ ಲಿಸಿದ ನಂತರವೇ ಕಂಪೆನಿಯೊಂದು ಪಾವತಿ ಸೌಲಭ್ಯವನ್ನು ಜನರ ಬಳಕೆಗೆ ಒದಗಿಸ ಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next