Advertisement
ಈ ಎಲ್ಲಾ ದಶಾ ಪದ್ಧತಿಗಳಲ್ಲಿ ಪರಾಶರ ಮುನಿಗಳ ಹೋರಾ ಶಾಸ್ತ್ರದಲ್ಲಿ ವಿಂಶೋತ್ತರಿ (120) ದಶಾ ಪದ್ಧತಿಯು ತುಂಬಾ ಶ್ರೇಷ್ಠವಾದದ್ದು ಮತ್ತು ಕರಾರುವಕ್ಕಾದ ಭವಿಷ್ಯವನ್ನು ನಿರ್ಧರಿಸುವ ದಶಾ ಪದ್ಧತಿ. ವಿಂಶೋತ್ತರಿ, ಹೆಸರೇ ಹೇಳುವ ಹಾಗೆ 120 ವರ್ಷ, ಅಂದರೆ ಒಬ್ಬ ವ್ಯಕ್ತಿಯ ಜೀವಿತಾವಧಿಯನ್ನು 120 ವರ್ಷಕ್ಕೆ ನಿರ್ಧರಿಸಿ ಅದನ್ನು ಪೂರ್ಣಾಯು ಎಂದು ಹೇಳುವುದು ಜ್ಯೋತಿಷ್ಯದಲ್ಲಿ ವಾಡಿಕೆ.
Related Articles
Advertisement
ಕೃತ್ತಿಕ, ಉತ್ತರ, ಉತ್ತರಾಷಾಢ, ರವಿ ದಶಾ 6 ವರ್ಷ
ರೋಹಿಣಿ, ಹಸ್ತ, ಶ್ರಾವಣ, ಚಂದ್ರದಶಾ 10 ವರ್ಷ
ಮೃಗಶಿರಾ, ಚಿತ್ರಾ, ಧನಿಷ್ಠಾ, ಕುಜದಶಾ 7 ವರ್ಷ
ಆದ್ರಾ, ಸ್ವಾತಿ, ಶತಭಿಷಾ, ರಾಹುದಶಾ 18 ವರ್ಷ
ಪುನರ್ವಸು, ವಿಶಾಖ, ಪೂರ್ವಭಾದ್ರ, ಗುರುದಶಾ 16 ವರ್ಷ
ಪುಷ್ಯ, ಅನುರಾಧ, ಉತ್ತರಭಾದ್ರಾ, ಶನಿದಶಾ 19 ವರ್ಷ
ಆಶ್ಲೇಷ, ಜ್ಯೇಷ್ಠ, ರೇವತಿ, ಬುಧ ದಶಾ 17 ವರ್ಷ.(ಶಿಷ್ಠ ದಶಾ ಲೆಕ್ಕಾಚಾರ ಹೊರತುಪಡಿಸಿ) ಹೀಗೆ ಒಟ್ಟು 120 ವರ್ಷ ದಶಾ ಕಾಲದಲ್ಲಿ ಒಂದು ದಶಾ ಕಾಲ ಮುಗಿದು ಇನ್ನೊಂದು ದಶಾ ಕಾಲ ಹಿಡಿಯುವ ಸಮಯವೇ ದಶಾ ಸಂಧಿ ಕಾಲ.
ಇವುಗಳಲ್ಲಿ ಮೂರು ದಶಾ ಸಂಧಿ ಕಾಲವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಾಗಿ ಪ್ರಾಮುಖ್ಯತೆ ಕೊಡಲಾಗಿದೆ. ಮತ್ತು ಸಂಧಿ ಶಾಂತಿ ಪರಿಹಾರಗಳನ್ನು ಆ ಕಾಲದಲ್ಲಿ ಮಾಡುವುದು ಪದ್ಧತಿ. ಅವುಗಳೆಂದರೆ…
ಕುಜ-ರಾಹು ದಶಾ ಸಂಧಿ, ಕುಜ ದಶಾ ಕಾಲ ಮುಗಿದು ರಾಹುದಶಾ ಹಿಡಿಯುವ ಸಮಯ. ರಾಹು, ಬೃಹಸ್ಪತಿ ದಶಾಸಂಧಿ, ರಾಹು ದಶಾ ಮುಗಿದು, ಗುರು ದಶಾ ಹಿಡಿಯುವ ಸಮಯ. ಅದೇ ರೀತಿ ಶುಕ್ರಾಧಿಪತ್ಯ ಸಂಧಿ, ಶುಕ್ರ ದಶಾ ಮುಗಿದು, ರವಿ ದಶಾ ಹಿಡಿಯುವ ಸಮಯ. ಈ ಮೂರು ದಶಾ ಸಂಧಿಗಳಲ್ಲಿ ಕುಜರಾಹು ಸಂಧಿಯು ತುಂಬಾ ಕೆಟ್ಟದ್ದು, ಏಕೆಂದರೆ ಕುಜ, ರಾಹು ಎರಡೂ ಕ್ರೂರ ಮತ್ತು ಅಶುಭ ಗ್ರಹಗಳು. ಅದೂ ಅಲ್ಲದೇ ಕುಜ, ರಾಹು ಒಬ್ಬರಿಗೊಬ್ಬರು ಶತ್ರುಗಳಾಗಿದ್ದು, ಸಂಧಿ ಕಾಲದಲ್ಲಿ ಅಶುಭ ಫಲಗಳನ್ನು ನೀಡುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರಜ್ಞರ ಅಭಿಮತ.
ರವೀಂದ್ರ. ಐರೋಡಿ (ಜ್ಯೋತಿಷ್ಯ ವಿಶಾರದಾ)
ಬಿಎಸ್ಸಿ, ಎಲ್ ಎಲ್ ಬಿ
ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ