Advertisement

ದಸರಾ ವೆಬ್‌ಸೈಟ್‌ ಅನಾವರಣ

10:56 PM Aug 31, 2019 | Lakshmi GovindaRaj |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವಕ್ಕೆ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ರೂಪಿಸಿರುವ “ದಸರಾ ಮಹೋ ತ್ಸವ-2019’ರ ವೆಬ್‌ಸೈಟ್‌ ಹಾಗೂ ಭಿತ್ತಿಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಬಿಡುಗಡೆ ಮಾಡಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ವೆಬ್‌ಸೈಟ್‌ www.mysore dasara.gov.in ಅನಾವರಣ ಹಾಗೂ ಭಿತ್ತಿಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.

Advertisement

ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ದಸರಾ ಮಹೋತ್ಸವದ ವೆಬ್‌ಸೈಟ್‌ನಲ್ಲಿ ಕನ್ನಡ, ಇಂಗ್ಲಿಷ್‌ ಮಾತ್ರ ವಲ್ಲದೆ ಇತರ ಹತ್ತು ಭಾಷೆಗಳಲ್ಲಿ ಮಾಹಿತಿ ಲಭ್ಯ ವಿರುತ್ತದೆ. ವೆಬ್‌ಸೈಟ್‌ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಪುಶ್‌ ನೋಟಿಫಿ ಕೇಶನ್‌ ವ್ಯವಸ್ಥೆ ಹೊಂದಿದ್ದು, ಅಲರ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ದಸರಾ ಪೋಲ್‌ಆಯ್ಕೆಯಿದ್ದು ಪ್ರವಾಸಿಗರು ತಮಗೆ ಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು.

ದಸರಾ ಕಾರ್ಯಕ್ರಮಗಳಿಗೆ ಗೂಗಲ್‌ ಕ್ಯಾಲೆಂಡರ್‌ ಜತೆ ಇಂಟಿಗ್ರೇಟ್‌ ಮಾಡ ಲಾಗಿದೆ ಎಂದು ತಿಳಿಸಿದರು. ಈ ಬಾರಿಯ ದಸರಾದಲ್ಲಿ 5 ಆನ್‌ಲೈನ್‌ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರತಿ ಕ್ವಿಜ್‌ನಿಂದ 5 ಮಂದಿ ವಿಜೇತರನ್ನು ಆಯ್ಕೆ ಮಾಡಿ, ದಸರಾ ನೆನಪಿನ ಕಾಣಿಕೆಯನ್ನು ಬಹುಮಾನವಾಗಿ ನೀಡಲಾಗುವುದು. ದಸರಾ ಮಹೋ ತ್ಸವದ ಎಲ್ಲ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next