ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಮರದ ಅಂಬಾರಿ ಹೊತ್ತು ತಾಲೀಮು ನಡೆಸಿತು. ರಾಜಮನೆತನದವರು ವಾಸಿಸುವ ಮನೆ ಅಂಗಳದ ಬಳಿ ಗೋಪಾಲಸ್ವಾಮಿ ಆನೆಗೆ ನಮಾª, ಗಾದಿ ಜತೆಗೆ ಮರದ ಅಂಬಾರಿ ಕಟ್ಟಿ ಪೂಜೆ ಸಲ್ಲಿಸಲಾಯಿತು. ಬಳಿಕ ಅರಮನೆ ಆವರಣದಲ್ಲಿ 2 ಸುತ್ತು ತಾಲೀಮು ನಡೆಸಲಾಯಿತು.
ಇದನ್ನೂ ಓದಿ:- ಬೆಳೆ ಹಾನಿ ರೈತ ಆತ್ಮಹತ್ಯೆ
ಸುಮಾರು 800 ಕೆ.ಜಿ.ತೂಕದ ಭಾರ ಹೊತ್ತು ಸರಾಗವಾಗಿ ಸಾಗಿದ ಗೋಪಾಲ ಸ್ವಾಮಿ, ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯುವಿಗಿಂತ ನಾನೇನೂ ಕಡಿಮೆಯೇನಿಲ್ಲ ಎಂಬುದನ್ನು ನಿರೂಪಿಸಿದ. ಅರಮನೆ ಆವರಣದಲ್ಲಿಯೇ ಮರದ ಭಾರದ ಅಂಬಾರಿ ಹೊತ್ತು ಹೆಜ್ಜೆ ಹಾಕುತ್ತಿದ್ದ ಗೋಪಾಲಸ್ವಾಮಿ 30 ನಿಮಿಷ ತಾಲೀಮು ನಡೆಸಿದ.
ಕುಮ್ಕಿಗಳಾದ ಚೈತ್ರಾ ಮತ್ತು ಕಾವೇರಿ ಆನೆ ಗೋಪಾಲಸ್ವಾಮಿಗೆ ಸಾಥ್ ನೀಡಿದವು. ಇತರೆ ಆನೆಗಳೂ ತಾಲೀಮು: ಇದರೊಂದಿಗೆ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿ ಅರಮನೆಯಲ್ಲಿ ಬಿಡಾರ ಹೂಡಿರುವ ಗಜಪಡೆಯ ಇತರೆ ಆನೆಗಳೂ ತಾಲೀಮು ಮುಂದು ವರಿಸಿದವು. ದಸರಾ ಆನೆಗಳು ಅರಮನೆ ಆವರಣದಲ್ಲಿ ತಾಲೀಮು ನಡೆಸುವ ವೇಳೆ ಪ್ರವಾಸಿಗರು, ಇನ್ನಿತರೆ ಜನ ಆನೆಗಳ ಬಳಿ ಸುಳಿಯದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.
- ಅರಮನೆ ಆವರಣದಲ್ಲಿ ಮರದ ಅಂಬಾರಿ ಹೊತ್ತು ತಾಲೀಮು ನಡೆಸಿದ ಗೋಪಾಲ ಸ್ವಾಮಿ ಆನೆ.
- ಅರಮನೆ ಆವರಣದಲ್ಲಿ ಮಜ್ಜನದಲ್ಲಿ ತಲ್ಲೀನನಾಗಿರುವ ದೊಡ್ಡಹರವೆ ಆನೆ ಶಿಬಿರದ ಅಶ್ವತ್ಥಾಮ ಆನೆ.
ಮಜ್ಜನದಲ್ಲಿ ಮಿಂದೆದ್ದ ಅಶ್ವತ್ಥಾಮ ಆನೆ ಈ ಬಾರಿಯ ದಸರಾ ಉತ್ಸವದ ಕೇಂದ್ರ ಬಿಂಧುವಾದ ದೊಡ್ಡಹರವೆ ಆನೆ ಶಿಬಿರದ ಅಶ್ವತ್ಥಾಮ ಆನೆ ಭಾನುವಾರ ತಾಲೀಮು ನಡೆಸಿ ಗಂಟೆಗೂ ಹೆಚ್ಚುಕಾಲ ಮಜ್ಜನದಲ್ಲಿ ಬ್ಯುಸಿಯಾಗಿದ್ದು ವಿಶೇಷವಾಗಿತ್ತು.